ಗುಟ್ಟಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡ ನಟ ಪ್ರಥಮ್‌; ಕಾರಣವೇನು ಗೊತ್ತಾ?

Pratham : ನೇರ ನುಡಿಗಳಿಂದಲೇ ಸುದ್ದಿಯಲ್ಲಿರುವ ಪ್ರಥಮ್‌ ಅವರು ಕೆಲವು ದಿನಗಳ ಹಿಂದೆ ತಮ್ಮ ಮದುವೆ ಕುರಿತು ಸಣ್ಣ ಮಾಹಿತಿಯೊಂದನ್ನು ಹೊರಹಾಕಿದ್ದರು. ಇದೀಗ ಗುಟ್ಟಾಗಿ ಎಂಗೇಜ್‌ಮೆಂಟ್‌ ಕೂಡಾ ಮಾಡಿಕೊಂಡಿದ್ದಾರೆ.  

Written by - Savita M B | Last Updated : Jun 13, 2023, 10:24 AM IST
  • ನಟ ಪ್ರಥಮ್‌ ಯಾವಾಗಲೂ ತಮ್ಮ ನೇರ ನುಡಿಗಳಿಂದಲೇ ಸುದ್ದಿಯಲ್ಲಿರುತ್ತಾರೆ.
  • ತಮಗೆ ಮದುವೆ ಫಿಕ್ಸ್‌ ಆಗಿದೆ ಎಂದು ಮಾಹಿತಿ ನೀಡಿದ್ದರು.
  • ಇದೀಗ ಗುಟ್ಟಾಗಿ ಎಂಗೇಜ್‌ಮೆಂಟ್‌ ಸಹ ಮಾಡಿಕೊಂಡಿದ್ದಾರೆ
ಗುಟ್ಟಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡ ನಟ ಪ್ರಥಮ್‌; ಕಾರಣವೇನು ಗೊತ್ತಾ?  title=

Pratham Engagement : ಮಾಜಿ ಬಿಗ್‌ ಬಾಸ್‌ ಸ್ಪರ್ಧಿ, ನಟ ಪ್ರಥಮ್‌ ಯಾವಾಗಲೂ ತಮ್ಮ ನೇರ ನುಡಿಗಳಿಂದಲೇ ಸುದ್ದಿಯಲ್ಲಿರುತ್ತಾರೆ. ತಮಗೆ ಮದುವೆ ಫಿಕ್ಸ್‌ ಆಗಿದೆ ಎಂದು ಮಾಹಿತಿ ನೀಡಿದ್ದರು. ಇದೀಗ ಗುಟ್ಟಾಗಿ ಎಂಗೇಜ್‌ಮೆಂಟ್‌ ಸಹ ಮಾಡಿಕೊಂಡಿದ್ದು, ಸದ್ದಿಲ್ಲದೇ ಸರಳವಾಗಿ ನಿಶ್ಚಿಥಾರ್ತ ಮಾಡಿಕೊಂಡಿರುವ ನಟ ಪ್ರಥಮ್‌ ಈ ವಿಚಾರವನ್ನು ತಾವೇ ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

 

ಬಿಗ್‌ ಬಾಸ್‌ ಮೂಲಕ ವೀಕ್ಷಕರಿಗೆ ಚಿರಪರಿಚಿತವಾದ ಹುಡುಗ. ತಮ್ಮನ್ನು ತಾವೇ ಒಳ್ಳೆಯ ಹುಡುಗ ಎಂದು ಕರೆದುಕೊಳ್ಳುತ್ತಿದ್ದ ಪ್ರಥಮ್‌ ತಮ್ಮ ಸೋಷಿಯಲ್‌ ಮಿಡಿಯಾದಲ್ಲಿಯೂ ಸಹ ಹಾಗೇಯೆ ಹೆಸರನ್ನು ಹಾಕಿಕೊಂಡಿದ್ದಾರೆ. ಚಾಮರಾಜನಗರ ಮೂಲದ ಪ್ರಥಮ್‌ ಬಿಗಬಾಸ್‌ ಸೀಸನ್‌ 4ರಲ್ಲಿ ಭಾಗವಹಿಸಿ ವಿನ್ನರ್‌ ಕೂಡಾ ಆದರು. ಗೆದ್ದಿರುವ ಹಣವನ್ನು ವಿಶೇಷ ಚೇತನ ಅಭಿವೃದ್ಧಿಗೆ ನೀಡಿ ನಿಜಕ್ಕೂ ತಾನು ಒಳ್ಳೆಯ ಹುಡುಗ ಎಂದು ಸಾಬೀತು ಪಡಿಸಿದರು. 

ಇದನ್ನೂ ಓದಿ-Abhishek Ambarish: ಮಂಡ್ಯದಲ್ಲಿ ಅಂಬಿ ಪುತ್ರನ ಬೀಗರೂಟ.. 15 ಎಕರೆ ಪ್ರದೇಶದಲ್ಲಿ ಭರ್ಜರಿ ಸಿದ್ಧತೆ!

ದೇವರಂಥಾ ಮನುಷ್ಯ, ರಾಜು ಕನ್ನಡ ಮೀಡಿಯಂ, ನಟ ಭಯಂಕರ, ಸಿನಿಮಾಗಳಲ್ಲಿ ಪ್ರಥಮ್‌ ನಾಯಕನಾಗಿ ನಟಿಸಿದ್ದಾರೆ. ನನಗೆ ಹುಡುಗಿ ಗೊತ್ತಾಗಿದೆ ಎಂದು ಕೆಲವು ದಿನಗಳ ಹಿಂದೆ ಹೇಳಿದ್ದರು. ಆದರೆ ಹುಡುಗಿ ಯಾರು ಎನ್ನುವದನ್ನು ಬಹಿರಂಗ ಪಡಿಸಿರಲಿಲ್ಲ. ಈಗಲೇ ಆಕೆಯ ಹೆಸರು, ಮಾಹಿತಿ ಆಕೆಗೆ ಅದು ಕಿರಿಕಿರಿ ಎನಿಸಬಹುದು ಎಂದು ಹೇಳಿದ್ದರು. 

ಇದೀಗ ತಾವು ನಿಶ್ಚತಾರ್ಥವಾದ ಸುದ್ದಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಉಂಗುರ ಧರಿಸಿ ಕೈಗಳ ಪೋಟೋವನ್ನು ಹಂಚಿಕೊಂಡ ಪ್ರಥಮ್‌ "ಒಂದು ಸುಂದರ ಕ್ಷಣ.ಇವತ್ತು ನನ್ನ ಎಂಗೇಜ್‌ಮೆಂಟ್ ಆಯ್ತು. ಯಾವ ಆಡಂಬರ,ಸಂಭ್ರಮ,ತೋರ್ಪಡಿಕೆ ಇಲ್ಲದೆ ಬಹಳ ಸರಳವಾಗಿ ಕುಟುಂಬದವರು ಮೆಚ್ಚಿದವರ ಜೊತೆಯಾದೆ;ನಾನು ತುಂಬಾ ಸರಳವಾಗಿಯೇ ಬದುಕಿದವನು. 

ಇದನ್ನೂ ಓದಿ-ಕೂರ್ಗನಲ್ಲಿ ಪುಟ್ಟಕ್ಕನ ಮಗಳು ಸ್ನೇಹಾ ಅಲಿಯಾಸ್‌ ಸಂಜನಾ ಪೋಟೋಸ್‌ ನೋಡಿ

ಹಾಗೇ ಇರೋಕೆ ಇಷ್ಟ. ನನ್ನ ಎಂಗೇಜ್‌ಮೆಂಟ್ ಈ ದೇಶದ ದೊಡ್ಡ ಸುದ್ಧಿಯಲ್ಲ‌. ಆದರೆ ನನ್ನ ಇಷ್ಟಪಡುವ ಸ್ಬೇಹಿತರು ಆತ್ಮೀಯರಿಗೆ ವಿಚಾರ ಹಂಚಿಕೊಳ್ಳೋಣ ಅನ್ನೋ ಕಾರಣಕ್ಕೆ ನಿಮ್ಗೆ ತಿಳಿಸಿದ್ದೇನೆ ಅಷ್ಟೇ. ಮದುವೆ ಎಷ್ಟು ಅದ್ಧೂರಿಯಾಗಿ ಆದೆ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟಿಕೊಂಡ್ವಿ ಅನ್ನೋದೇ ನಿಜವಾದ ಸಾಧನೆ. ನನಗೆ ಹಾಗಿರೋಕೆ ಇಷ್ಟ. ಹೀಗೇ ಇದ್ದು ಬಿಡ್ತೀನಿ, ಹರಸುವವರು ಅಲ್ಲಿಂದಲೇ ಹರಸಿ ಅದೇ ಆಶೀರ್ವಾದ‌." 

ಪ್ರಥಮ್‌ ನಿಶ್ಚಿತಾರ್ಥದ ವಿಷಯ ಕೇಲಿದ ನೆಟ್ಟಿಗರು ಸಾಕಷ್ಟು ಖುಷಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಲವ್‌ ಮ್ಯಾರೇಜ್‌? ಅರೇಂಜ್‌ ಮ್ಯಾರೇಜ್?‌ ಯಾವಾಗ ಮದುವೆ ಎಂದೆಲ್ಲಾ ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News