ʼA2 ಮ್ಯೂಸಿಕ್ʼ ಆಲ್ಬಂ ಸೀರೀಸ್ ರಿಲೀಸ್ ಮಾಡಿದ ನಟ ಅಜಯ್ ರಾವ್..!

A2 Music Album Series: ಕನ್ನಡ ಸಿನಿಮಾ ರಂಗದಲ್ಲಿ ಚಿತ್ರಕ್ಕೆ ಮಾತ್ರಕ್ಕೆ ಮನಸೋತಿರದೇ ಹಾಡುಗಳಿಗೂ ದೊಡ್ಡಅಭಿಮಾನಿ ಬಳಗವೇ ಇದೆ. ಈ ನಿಟ್ಟಿನಲ್ಲಿ ಸಂಗೀತ ಪ್ರೇಮಿಗಳಿಗಾಗಿ ಅಶ್ವಿನಿ ಮೀಡಿಯಾ ನೆಟ್ವರ್ಕ್‌ 2020ರಲ್ಲಿ ಹೊಸ ಆಯಾಮದಲ್ಲಿ A2 ಮ್ಯೂಸಿಕ್ ಹೆಸರಿನಲ್ಲಿ ಮರು ನಾಮಕರಣವಾಯಿತು. ಇದೀಗ ಈ ಸಂಸ್ಥೆ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. 

Written by - Zee Kannada News Desk | Last Updated : Jun 9, 2023, 11:24 AM IST
  • ʼA2 ಮ್ಯೂಸಿಕ್ʼ ಆಲ್ಬಂ ಸೀರೀಸ್ ರಿಲೀಸ್ ಮಾಡಿದ ನಟ ಅಜಯ್ ರಾವ್
  • ಎ2 ಒರಿಜಿನಲ್ಸ್ ಮೂಲಕ ಹೊಸ ಹೆಜ್ಜೆ ಇಟ್ಟ A2 ಮ್ಯೂಸಿಕ್
  • ನಿನಗಾಗಿ ಎಂಬ ಮ್ಯೂಸಿಕಲ್ ಆಲ್ಬಂ ಸೀರೀಸ್
ʼA2 ಮ್ಯೂಸಿಕ್ʼ ಆಲ್ಬಂ ಸೀರೀಸ್ ರಿಲೀಸ್ ಮಾಡಿದ ನಟ ಅಜಯ್ ರಾವ್..! title=

ಬೆಂಗಳೂರು: ಕನ್ನಡ ಸಿನಿಮಾ ರಂಗದಲ್ಲಿ ಸಿನಿಮಾ ಮಾತ್ರವಲ್ಲದೇ ಚಿತ್ರದ ಹಾಡುಗಳಿಗೂ ದೊಡ್ಡಅಭಿಮಾನಿ ಬಳಗವೇ ಇದೆ. ಈ ನಿಟ್ಟಿನಲ್ಲಿ ಸಂಗೀತ ಪ್ರೇಮಿಗಳಿಗಾಗಿ ಸದಾ ಹಾಡಿನ  ಮೊರೆ ಹೋಗುವಂತೆ ಕೊಡುಗೆಯಾಗಿ ʼಎ2 ಮ್ಯೂಸಿಕ್ʼ ಪ್ರತಿಷ್ಠಿತ ಸಂಸ್ಥೆಯನ್ನು ನೀಡಿದ್ದಾರೆ.

ಅಶ್ವಿನಿ ಮೀಡಿಯಾ ನೆಟ್ವರ್ಕ್‌ 2020ರಲ್ಲಿ ಹೊಸ ಆಯಾಮದಲ್ಲಿ A2 ಮ್ಯೂಸಿಕ್ ಹೆಸರಿನಲ್ಲಿ ಮರು ನಾಮಕರಣವಾಯಿತು. ಇದೀಗ ಹೊಸ ಹೆಜ್ಜೆ ಇಟ್ಟಿರುವ  A2 ಮ್ಯೂಸಿಕ್ ಆಲ್ಬಂ ಸೀರೀಸ್ ನ್ನು ಆರಂಭಿಸಿದೆ. ಈ ಸೀರೀಸ್ ನ್ನು ನಟ ಅಜಯ್ ರಾವ್ ರಿಲೀಸ್ ಮಾಡಿದ್ದಾರೆ. 

ಇದನ್ನೂ ಓದಿ: Chiru's Death Anniversary: ಚಿರು ಸರ್ಜಾ ಫೋಟೋಗೆ ಮುತ್ತು ಇಟ್ಟು, ಹೂ ಹಾಕಿ ನಮಿಸಿದ ರಾಯನ್ ರಾಜ್ ಸರ್ಜಾ!

ಹಾಸ್ಟೆಲ್ ಹುಡುಗರು ಸೇರಿದಂತೆ ನೂರಕ್ಕೂ ಹೆಚ್ಚು ಹೊಸ ಸಿನಿಮಾಗಳ ಆಡಿಯೋ ಖರೀದಿ ಮಾಡುವ ಮೂಲಕ ಸಂಚಲನ ಸೃಷ್ಟಿಸಿರುವ A2 ಮ್ಯೂಸಿಕ್, A2 originals, A2 entertainment, A2 ಭಕ್ತಿಸಾಗರ, A2 ಫ್ಲೋಕ್ಲೋರ್, A2 ಕ್ಲಾಸಿಕಲ್ ಸೇರಿದಂತೆ ಬೇರೆ ಬೇರೆ ಆಯಾಮಗಳಲ್ಲೂ ಹೊರಹೊಮ್ಮಿದೆ. ಇದೇ A2 ಒರಿಜಿನಲ್ಸ್ ಫ್ಲಾಟ್ ಫಾರ್ಮ್ ಮೂಲಕ ಮತ್ತೊಂದು ಸಾಹಸಕ್ಕಿಳಿದಿದೆ.

ಹೊಸ ಪ್ರತಿಭೆಗಳಿವೆ ವೇದಿಕೆ ಕಲ್ಪಿಸಿ ಕೊಡುವ ಮೂಲಕ ಮ್ಯೂಸಿಕಲ್ ಸೀರೀಸ್ ನಿರ್ಮಾಣಕ್ಕೂ ಕೈ ಹಾಕಿದೆ. A2 ಸಂಸ್ಥೆಯ ಈ ಸಾಹಸಕ್ಕೆ ಕೃಷ್ಣ ಅಜಯ್ ರಾವ್ ಸಾಥ್ ಕೊಟ್ಟಿದ್ದಾರೆ. ‌ನಾಲ್ಕು ಭಾಷೆಯಲ್ಲಿ, ನಾಲ್ಕು ಚಾಪ್ಟರ್ ಗಳಲ್ಲಿ ಬರ್ತಿರುವ ಭಾರತದ ಪ್ರಪ್ರಥಮ ನಾನ್ ಫಿಲ್ಮಂ ಪ್ಯಾನ್ ಇಂಡಿಯಾ ನಿನಗಾಗಿ ಆಲ್ಬಂ  ಇದಾಗಿದೆ.

ಇದನ್ನೂ ಓದಿ: Ambareesh- Aviva: ಅವಿವಾ ಕೈ ಹಿಡಿದು ಅರುಂಧತಿ ನಕ್ಷತ್ರ ತೋರಿಸಿದ ಅಭಿಷೇಕ್!

ಎ2 ಮ್ಯೂಸಿಕ್ ಡಿಜಿಟಲ್ ವೇದಿಕೆಯಲ್ಲಿ ನಾಲ್ಕು ಹಂತಗಳಲ್ಲಿ ಬಿಡುಗಡೆಯಾಗಿದ್ದು, ಮೊದಲ ಹಾಡನ್ನು ನಟ ಅಜಯ್ ರಾವ್ ಬಿಡುಗಡೆ ಮಾಡಿ ನಾಯಕಿಯೊಂದಿಗೆ ಹೆಜ್ಜೆ ಹಾಕಿದರು.

ಇದೇ ವೇಳೆ ಮಾತನಾಡಿದೆ ಅಜಯ್ ರಾವ್, ಎಕ್ಸ್ ಕ್ಯೂಸ್ ಮಿ ಸಿನಿಮಾದಿಂದಲೇ ನನ್ನ ಹಾಗೂ ಎ2 ಮ್ಯೂಸಿಕ್ ಸಂಸ್ಥೆಯ ಒಡನಾಟವಿದೆ. ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ, ಅಲೆಮಾರಿ ಸಿನಿಮಾ ಸೇರಿದಂತೆ ಹಲವು ಚಿತ್ರಗಳ ಹಾಡುಗಳು ಸಂಚಲನ ಮೂಡಿಸಿದೆ. ಇತ್ತೀಚೆಗೆ ಸೂತ್ರಧಾರ, ಹಂಟರ್, ಕೆಟಿಎಂ, ಯುದ್ಧಕಾಂಡ ಸೇರಿದಂತೆ ಹಾಡುಗಳು ಸಂಚಲನ ಮೂಡಿಸಿವೆ. ಸಂಗೀತ ಪ್ರೇಮಿಗಳಿಗಾಗಿ ಇನ್ನಷ್ಟು ಮಧುರ ರಸದೌತನ ನೀಡಲಿದೆ ಎಂದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News