ನಟಿ ಕಂಗನಾ ರನೌತ್ ಮೇಲೆ ಕಾಪಿರೈಟ್ ಉಲ್ಲಂಘನೆ ಪ್ರಕರಣ ದಾಖಲು

'ದಿಡ್ಡಾ: ದಿ ವಾರಿಯರ್ ಕ್ವೀನ್ ಆಫ್ ಕಾಶ್ಮೀರ' ಲೇಖಕ ತನ್ನ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪ ಮಾಡಿದ ನಂತರ ಸ್ಥಳೀಯ ನ್ಯಾಯಾಲಯದ ಆದೇಶದ ಮೇರೆಗೆ ನಟ ಕಂಗನಾ ರನೌತ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Last Updated : Mar 12, 2021, 11:54 PM IST
ನಟಿ ಕಂಗನಾ ರನೌತ್ ಮೇಲೆ ಕಾಪಿರೈಟ್ ಉಲ್ಲಂಘನೆ ಪ್ರಕರಣ ದಾಖಲು  title=

ನವದೆಹಲಿ: 'ದಿಡ್ಡಾ: ದಿ ವಾರಿಯರ್ ಕ್ವೀನ್ ಆಫ್ ಕಾಶ್ಮೀರ' ಲೇಖಕ ತನ್ನ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪ ಮಾಡಿದ ನಂತರ ಸ್ಥಳೀಯ ನ್ಯಾಯಾಲಯದ ಆದೇಶದ ಮೇರೆಗೆ ನಟ ಕಂಗನಾ ರನೌತ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕಂಗನಾ, ಕಮಲ್ಕುಮಾರ್ ಜೈನ್, ರಂಗೋಲಿ ಚಂದೇಲ್ ಮತ್ತು ಅಕ್ಷತ್ ರನೌತ್ ವಿರುದ್ಧ ಖಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.'ಕಾಶ್ಮೀರ ಕಿ ಯೋಧಾ ರಾಣಿ ದಿಡ್ಡಾ' ಎಂದು ಹಿಂದಿ ಭಾಷೆಗೆ ಅನುವಾದಿಸಿರುವ ಪುಸ್ತಕದ ಲೇಖಕ ಆಶಿಶ್ ಕೌಲ್, ಮ್ಯಾಜಿಸ್ಟ್ರೇಟ್ ಅವರ ಮುಂದೆ ನೀಡಿದ ದೂರಿನಲ್ಲಿ, ಲೋಹರ್ ರಾಜಕುಮಾರಿ (ಪೂಂಚ್) ಅವರ ಜೀವನ ಕಥೆಗೆ ಸಂಭಂಧಿದಂತೆ ವಿಶೇಷ ಹಕ್ಕುಸ್ವಾಮ್ಯಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Sushant Singh Rajput ಆತ್ಮಹತ್ಯೆ ಪ್ರಕರಣ-ಆರೋಪಗಳು ಸಾಬಿತಾಗದಿದ್ದಲ್ಲಿ 'ಪದ್ಮಶ್ರೀ' ಹಿಂದಿರುಗಿರುವೆ:Kangana Ranaut

ದೂರಿನ ಪ್ರಕಾರ, ಅವರು ಕಂಗಾನಾ (Kangana Ranaut) ಗೆ ತಮ್ಮ ಪುಸ್ತಕದ ಕಥಾಹಂದರವನ್ನು ಕುರಿತು ಇಮೇಲ್ ಕಳುಹಿಸಿದ್ದರು, ಮತ್ತು ಕೌಲ್ ಅವರ ಅನುಮತಿಯಿಲ್ಲದೆ ತನ್ನ ಚಲನಚಿತ್ರವನ್ನು ಘೋಷಿಸುವಾಗ ಅವರು ಕಥೆಯ ಕೆಲವು ಭಾಗವನ್ನು ಟ್ವೀಟ್ ನಲ್ಲಿ ಬಳಸಿದ್ದಾರೆ ಎಂದು ದೂರಿದ್ದಾರೆ.

ಈಗ ಬಾಂದ್ರಾ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ಐಪಿಸಿ ಸೆಕ್ಷನ್ 405 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ), 415 (ಮೋಸ), 120 ಬಿ (ಕ್ರಿಮಿನಲ್ ಪಿತೂರಿ) ಮತ್ತು ಕೃತಿಸ್ವಾಮ್ಯ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. .ಪ್ರಚೋದನಕಾರಿ ಟ್ವೀಟ್‌ಗಳ ಕುರಿತು ರನೌತ್ ಈಗಾಗಲೇ ಮುಂಬಯಿಯಲ್ಲಿ ಪೊಲೀಸ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಇದನ್ನೂ ಓದಿ: 'ಇದು ಸುಸೈಡ್ ಅಲ್ಲ, ಪ್ಲಾನ್ಡ್ ಮರ್ಡರ್', ಸುಶಾಂತ್ ಸಿಂಗ್ ರಾಜಪುತ್ ಸಾವಿನ ಕುರಿತು ಹೇಳಿಕೆ ನೀಡಿದ ಕಂಗನಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News