ನವರಾತ್ರಿಯ 9 ದಿನ ಈ ಕೆಲಸ ಮಾಡಿದ್ರೆ ದುರ್ಗಾಮಾತೆ ನಿಮಗೆ ಸುಖ-ಸಂತೋಷ, ಸಮೃದ್ಧಿ ನೀಡುತ್ತಾಳೆ!

ಶಾರದೀಯ ನವರಾತ್ರಿ 2023: ಶಾರದೀಯ ನವರಾತ್ರಿಯ 9 ದಿನಗಳು ಬಹಳ ಪವಿತ್ರವಾಗಿವೆ. ಈ ಸಮಯದಲ್ಲಿ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇದರಿಂದ ಮಾತೆ ದುರ್ಗಾದೇವಿ ಪ್ರಸನ್ನಳಾಗುತ್ತಾಳೆ. ನಿಮಗೆ ಅಪಾರ ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತಾಳೆ.

Written by - Puttaraj K Alur | Last Updated : Oct 9, 2023, 06:01 AM IST
  • ಹಿಂದೂ ಧರ್ಮದಲ್ಲಿ ಶಾರದೀಯ ನವರಾತ್ರಿಗೆ ಹೆಚ್ಚಿನ ಮಹತ್ವವಿದೆ
  • ಈ ವರ್ಷದ ನವರಾತ್ರಿ ಅ.15ರಿಂದ ಪ್ರಾರಂಭವಾಗಿ, ಅ. 23ರವರೆಗೂ ನಡೆಯಲಿದೆ
  • ನವರಾತ್ರಿಯ 9 ದಿನಗಳಲ್ಲಿ ತಾಯಿ ದುರ್ಗಾದೇವಿಯ 9 ರೂಪಗಳನ್ನು ಪೂಜಿಸಲಾಗುತ್ತದೆ
ನವರಾತ್ರಿಯ 9 ದಿನ ಈ ಕೆಲಸ ಮಾಡಿದ್ರೆ ದುರ್ಗಾಮಾತೆ ನಿಮಗೆ ಸುಖ-ಸಂತೋಷ, ಸಮೃದ್ಧಿ ನೀಡುತ್ತಾಳೆ! title=
ಶಾರದೀಯ ನವರಾತ್ರಿ 2023

ನವದೆಹಲಿ: ಹಿಂದೂ ಧರ್ಮದಲ್ಲಿ ಶಾರದೀಯ ನವರಾತ್ರಿಗೆ ಹೆಚ್ಚಿನ ಮಹತ್ವವಿದೆ. ಈ ವರ್ಷದ ನವರಾತ್ರಿಯು ಅಕ್ಟೋಬರ್ 15ರಿಂದ ಪ್ರಾರಂಭವಾಗಿ, ಅ. 23ರವರೆಗೂ ನಡೆಯುತ್ತದೆ. ನಂತರ ಅ. 24ರಂದು ನಾಡಹಬ್ಬ ದಸರಾವನ್ನು ಆಚರಿಸಲಾಗುತ್ತದೆ. ನವರಾತ್ರಿಯ ಈ 9 ದಿನಗಳಲ್ಲಿ ತಾಯಿ ದುರ್ಗಾದೇವಿಯ 9 ರೂಪಗಳನ್ನು ಪೂಜಿಸಲಾಗುತ್ತದೆ.

ಅಶ್ವಿನ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿಯಿಂದ ಆರಂಭವಾಗುವ ನವರಾತ್ರಿ ನವಮಿ ತಿಥಿಯವರೆಗೂ ನಡೆಯುತ್ತದೆ. ನವರಾತ್ರಿಯ 9 ದಿನಗಳಲ್ಲಿ ಕೆಲವು ವಿಶೇಷ ಕಾರ್ಯಗಳನ್ನು ಮಾಡಿದರೆ, ಜಗದಮಾತೆಯಾದ ಜಗದಂಬಾ ಖುಷಿ ಪಡುತ್ತಾಳೆ. ನಿಮಗೆ ಸುಖ-ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತಾಳೆ.  ಹೀಗಾಗಿ ನವರಾತ್ರಿಯಲ್ಲಿ ಕೆಲವು ವಿಶೇಷ ವಿಷಯಗಳ ಬಗ್ಗೆ ನೀವು ಗಮನಹರಿಸಬೇಕು.  

ಇದನ್ನೂ ಓದಿ: ಹೇರ್‌ ಡೈ ಬೇಕಿಲ್ಲ.. ತೆಂಗಿನೆಣ್ಣೆಗೆ ಈ ಒಂದು ವಸ್ತು ಸೇರಿಸಿ ಹಚ್ಚಿ ಬಿಳಿ ಕೂದಲು ಶಾಶ್ವತ ಕಪ್ಪಾಗುವುದು!

ನವರಾತ್ರಿಯಲ್ಲಿ ಈ ಕೆಲಸಗಳನ್ನು ಮಾಡಿ  

- ನವರಾತ್ರಿಯ 9 ದಿನಗಳಲ್ಲಿ ಮನೆಯಲ್ಲಿ ಸ್ವಚ್ಛತೆ ಮತ್ತು ಶುದ್ಧತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ. ನವರಾತ್ರಿಯ ಮೊದಲು ಸ್ವಚ್ಛವಾಗಿಡಿ. ಇದಲ್ಲದೆ 9 ದಿನಗಳ ಕಾಲ ಪ್ರತಿದಿನ ಪ್ರವೇಶದ್ವಾರದಲ್ಲಿ ಕುಂಕುಮ ಮತ್ತು ಅರಿಶಿನದೊಂದಿಗೆ ತಾಯಿ ದುರ್ಗಾದೇವಿಯ ಸಂಕೇತವನ್ನು ಮಾಡಿ.

- ನವರಾತ್ರಿಯಲ್ಲಿ ಪ್ರತಿದಿನ ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮತ್ತು ಧ್ಯಾನ ಮಾಡಿದ ನಂತರ ದುರ್ಗಾ ದೇವಿಯನ್ನು ಪೂಜಿಸಿ. ಪ್ರತಿದಿನ ಸಂಜೆ ಆರತಿ ಮಾಡಿ. ದುರ್ಗಾ ಮಾತೆಗೆ ಇಷ್ಟವಾದ ವಸ್ತುಗಳನ್ನು ಅರ್ಪಿಸಿ. ಇದರಿಂದ ತಾಯಿ ದುರ್ಗಾದೇವಿ ಸಂತಸಗೊಳ್ಳುತ್ತಾಳೆ.

- ನವರಾತ್ರಿಯಲ್ಲಿ ಅಖಂಡ ಜ್ಯೋತಿಯನ್ನು ಬೆಳಗಿಸುವುದರಿಂದ ವ್ಯಕ್ತಿಯ ಪ್ರತಿಯೊಂದು ಆಸೆಯೂ ಈಡೇರುತ್ತದೆ. ಆದರಿಂದ ನವರಾತ್ರಿಯ ಸಮಯದಲ್ಲಿ ವಿಧಿವಿಧಾನಗಳ ಪ್ರಕಾರ ಅಖಂಡ ಜ್ಯೋತಿಯನ್ನು ಬೆಳಗಿಸಿ. ಅಲ್ಲದೆ ಕೊನೆಯ ದಿನ ಹವನ ಮತ್ತು ಕನ್ಯಾ ಪೂಜೆಯನ್ನು ಮಾಡಿ. ನವರಾತ್ರಿಯ ಸಮಯದಲ್ಲಿ ಹೆಣ್ಣುಮಕ್ಕಳನ್ನು ಜಗನ್ಮಾತೆಗೆ ಸಮಾನವೆಂದು ಪರಿಗಣಿಸಲಾಗುತ್ತದೆ.

ಈ ತಪ್ಪನ್ನು ಮಾಡಬೇಡಿ

ನವರಾತ್ರಿಯ ಸಮಯದಲ್ಲಿ ಶುದ್ಧತೆ ಮತ್ತು ಪವಿತ್ರತೆಯ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಈ ಅವಧಿಯಲ್ಲಿ ಅಂತಹ ವಸ್ತುಗಳನ್ನು ಮನೆಯಲ್ಲಿ ತರಬೇಡಿ, ಇಲ್ಲದಿದ್ದರೆ ಅದು ದುರ್ಗಾದೇವಿಯ ಅಸಮಾಧಾನಕ್ಕೆ ಕಾರಣವಾಗಬಹುದು. ಆದ್ದರಿಂದ ನವರಾತ್ರಿಯ ಸಮಯದಲ್ಲಿ ಮಾಂಸಾಹಾರಿ, ಅಮಲು ಪದಾರ್ಥಗಳು, ಮದ್ಯ ಇತ್ಯಾದಿಗಳನ್ನು ಸೇವಿಸಬೇಡಿ ಅಥವಾ ಮನೆಗೆ ತರಬೇಡಿ. ನವರಾತ್ರಿಯಲ್ಲಿ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಿ.

ಇದನ್ನೂ ಓದಿ: ತೆಂಗಿನೆಣ್ಣೆ ಜೊತೆ ಈ ಗಿಡದ ಎಲೆಯನ್ನು ಬೆರೆಸಿ ತಲೆಗೆ ಹಚ್ಚಿ… ನಿಮಿಷಗಳಲ್ಲಿ ಶಾಶ್ವತವಾಗಿ ಕಪ್ಪಾಗುವುದು ಬಿಳಿಕೂದಲು!

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News