'ಓಣಂ' ಹಬ್ಬದ ವಿಶೇಷತೆ!

ಹಬ್ಬವನ್ನು ಒಟ್ಟಾಗಿ ಆಚರಿಸಲು ಜನರು ಹಲವಾರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಬೋಟ್ ರೇಸ್ (ವಲ್ಲಂ ಕಾಳಿ), ಪುಲಿಕಾಲಿ (ಹುಲಿಯ ವೇಷದಲ್ಲಿ ಜಾನಪದ ನೃತ್ಯ) ಮತ್ತು ಕೇರಳದ ಇತರ ಸಾಂಸ್ಕೃತಿಕ ನೃತ್ಯ ಮತ್ತು ಕಲಾ ಪ್ರಕಾರಗಳನ್ನು ಸಾಮಾನ್ಯವಾಗಿ ಈ ಸಂದರ್ಭದಲ್ಲಿ ನಡೆಸಲಾಗುತ್ತದೆ.

Last Updated : Sep 11, 2019, 09:33 AM IST
'ಓಣಂ' ಹಬ್ಬದ ವಿಶೇಷತೆ! title=

'ಓಣಂ'  ದಕ್ಷಿಣ ಭಾರತದ ಕೇರಳರಾಜ್ಯದಲ್ಲಿ ನಡೆಯುವ ಅತಿದೊಡ್ಡ ಹಬ್ಬವಾಗಿದೆ. ಈ ಹಬ್ಬವನ್ನು ಮಲಯಾಳೀ ಪಂಚಾಂಗದ ಮೊದಲ ತಿಂಗಳು ಚಿಂಗಮ್(ಆಗಸ್ಟ್-ಸೆಪ್ಟೆಂಬರ್) ತಿಂಗಳಿನಲ್ಲಿ, ಪುರಾಣಪ್ರಸಿದ್ಧ ಸಾಮ್ರಾಟ ಮಹಾಬಲಿಯು ಮನೆಗೆ ಮರಳಿ ಬಂದ ಕುರುಹಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. 

 ಹತ್ತು ದಿನಗಳವರೆಗೆ ಸಡಗರದಿಂದ ಜರುಗುವ ಈ ಹಬ್ಬವು ಕೇರಳದ ಹಲವಾರು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕತೆಯ ಎಳೆಗಳೊಂದಿಗೆ ಬೆಸೆದುಕೊಂಡಿದೆ. ತುಂಬಾ ಕ್ಲಿಷ್ಟ ವಿನ್ಯಾಸದ ಪುಷ್ಪ ಚಿತ್ತಾರಗಳು, ಬಗೆ ಬಗೆಯ ಭಕ್ಷ್ಯಗಳು, ಹಾವು ದೋಣಿಯಾಟದ ಸ್ಪರ್ಧೆಗಳು, ಕೈಕೊತ್ತಿಕಲಿ ನೃತ್ಯ - ಇವೆಲ್ಲ ಈ ಉತ್ಸವದ ಪ್ರಮುಖ ಆಕರ್ಷಣೆಗಳಾಗಿವೆ. ಈ ವರ್ಷ, ಈ ಆಚರಣೆಗಳು ಸೆಪ್ಟೆಂಬರ್ 1 ರಂದು ಪ್ರಾರಂಭವಾಗಿದ್ದು, ಸೆಪ್ಟೆಂಬರ್ 13 ರಂದು ಮುಕ್ತಾಯಗೊಳ್ಳಲಿದೆ.

ಅಥಮ್, ಚಿತಿರಾ, ಚೋಡಿ, ವಿಶಾಕಂ, ಅನಿಜಾಮ್, ತ್ರಿಕೆತಾ, ಮೂಲಂ, ಪೂರಡಂ, ಉತ್ತ್ರಡೋಮ್ ಮತ್ತು ತಿರುವೊಣಂ ಹೀಗೆ ಪ್ರತಿಯೊಂದು ದಿನವೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದ್ದು ಒಟ್ಟಾಗಿ ಓಣಂ ಸಂಭ್ರಮದಿಂದ ಕೂಡಿರಲಿದೆ.

'ಓಣಂ' ಪಟಾಲ ಲೋಕದಿಂದ ರಾಜ ಮಹಾಬಲಿಯ ವಾರ್ಷಿಕ ಮರಳುವಿಕೆಯನ್ನು ಸೂಚಿಸುತ್ತದೆ. ಇದನ್ನು ಭಗವಾನ್ ವಿಷ್ಣುವಿನ ವಾಮನ ಅವತಾರ ಎಂದು ನಂಬಲಾಗಿದೆ.

ಜನಪ್ರಿಯ ನಂಬಿಕೆಯ ಪ್ರಕಾರ, ಕೇರಳದ ಅತ್ಯಂತ ಕರುಣಾಮಯಿ ರಾಜ ಮಹಾಬಲಿ, ಶುಭ ಸುಗ್ಗಿಯ ಹಬ್ಬದ ಸಂದರ್ಭದಲ್ಲಿ ತನ್ನ ಪ್ರಜೆಗಳನ್ನು ಸಂತೋಷದಿಂದ ಮತ್ತು ಸಮೃದ್ಧವಾಗಿ ನೋಡಲು ತನ್ನ ರಾಜ್ಯಕ್ಕೆ ಭೇಟಿ ನೀಡುತ್ತಾನೆ.

ಮಹಿಳೆಯರು ಪೂಕೋಲಂ (ಹೂವುಗಳಿಂದ ಮಾಡಿದ ರಂಗೋಲಿ) ಬಿಡಿಸಿ, ಕೈಕೋಟಿಕಾಲಿ ಎಂಬ ನೃತ್ಯ ಪ್ರಕಾರವನ್ನು ಪ್ರದರ್ಶಿಸುತ್ತಾರೆ. ಮಹಿಳೆಯರು ತಮ್ಮ ಸಂಸ್ಕೃತಿಯ ಪ್ರತೀಕವಾದ ಚಿನ್ನದ ಬಾರ್ಡರ್ ನ ಬಿಳಿ ಕಸಾವು ಸೀರೆ ಉಟ್ಟು, ಚಿನ್ನದ ಆಭರಣಗಳನ್ನು ಧರಿಸಿದರೆ, ಪುರುಷರು ಬಿಳಿ ವೆಸ್ತಿ (ಧೋತಿ) ಮತ್ತು ಶರ್ಟ್‌ನಲ್ಲಿ ಈ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.

ಹಬ್ಬವನ್ನು ಒಟ್ಟಾಗಿ ಆಚರಿಸಲು ಜನರು ಹಲವಾರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಬೋಟ್ ರೇಸ್ (ವಲ್ಲಂ ಕಾಳಿ), ಪುಲಿಕಾಲಿ (ಹುಲಿಯ ವೇಷದಲ್ಲಿ ಜಾನಪದ ನೃತ್ಯ) ಮತ್ತು ಕೇರಳದ ಇತರ ಸಾಂಸ್ಕೃತಿಕ ನೃತ್ಯ ಮತ್ತು ಕಲಾ ಪ್ರಕಾರಗಳನ್ನು ಸಾಮಾನ್ಯವಾಗಿ ಈ ಸಂದರ್ಭದಲ್ಲಿ ನಡೆಸಲಾಗುತ್ತದೆ.

ಸ್ವಾದಿಷ್ಟವಾದ 26 ಬಗೆಯ ಕೇರಳದ ಸಾಂಸ್ಕೃತಿಕ ಆಹಾರವು ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ.
 

Trending News