ಗುರುನಾನಕ್ ದೇವ್ 550 ನೇ ವಾರ್ಷಿಕೋತ್ಸವ: ಪಂಜಾಬ್ ಸರ್ಕಾರದಿಂದ 'ಬ್ಯಾಡ್ಜ್ ಆಫ್ ಲೋಗೋ'

ಗುರುನಾನಕ್ ದೇವ್ 550 ನೇ ಜನ್ಮ ವಾರ್ಷಿಕೋತ್ಸವದ ಆಚರಣೆಗೆ ಮೀಸಲಾಗಿರುವ 'ಬ್ಯಾಡ್ಜ್ ಆಫ್ ಲೋಗೋ'ವನ್ನು ಪಂಜಾಬ್ ಸರ್ಕಾರ ಈ ಹಿಂದೆ ಸಿದ್ಧಪಡಿಸಿತ್ತು. ಬ್ಯಾಡ್ಜ್ ಅನ್ನು ಈಗ ಅನಾವರಣಗೊಳಿಸಲಾಗಿದ್ದು, ಬ್ಯಾಡ್ಜ್‌ಗಳನ್ನು ರಾಜ್ಯ ಸರ್ಕಾರ ಉಚಿತವಾಗಿ ವಿತರಿಸಲಿದೆ ಎಂದು ಸಚಿವ ಚರಣಜಿತ್ ಸಿಂಗ್ ಚನ್ನಿ ಮಾಹಿತಿ ನೀಡಿದರು.  

Last Updated : Nov 3, 2019, 11:42 AM IST
ಗುರುನಾನಕ್ ದೇವ್ 550 ನೇ ವಾರ್ಷಿಕೋತ್ಸವ: ಪಂಜಾಬ್ ಸರ್ಕಾರದಿಂದ 'ಬ್ಯಾಡ್ಜ್ ಆಫ್ ಲೋಗೋ'  title=

ಚಂಡೀಗಢ: ಗುರುನಾನಕ್ ದೇವ್ ಅವರ 550 ನೇ ಜನ್ಮದಿನಾಚರಣೆಗಾಗಿ ಮೀಸಲಾಗಿರುವ 'ಬ್ಯಾಡ್ಜ್ ಆಫ್ ಲೋಗೋ' ಅನ್ನು ಪಂಜಾಬ್ ಸರ್ಕಾರ ಶನಿವಾರ ಬಿಡುಗಡೆ ಮಾಡಿದೆ.'ಬ್ಯಾಡ್ಜ್ ಆಫ್ ಲೋಗೋ' ವನ್ನು ಪಂಜಾಬ್ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಚರಣಜಿತ್ ಸಿಂಗ್ ಚನ್ನಿ ಅವರು ಪ್ರವಾಸೋದ್ಯಮ ಪ್ರಧಾನ ಕಾರ್ಯದರ್ಶಿ ವಿಕಾಸ್ ಪ್ರತಾಪ್ ಮತ್ತು ನಿರ್ದೇಶಕ ಮಾಲ್ವಿಂದರ್ ಸಿಂಗ್ ಜಗ್ಗಿ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಿದರು.

ಗುರುನಾನಕ್ ದೇವ್ 550 ನೇ ಜನ್ಮ ವಾರ್ಷಿಕೋತ್ಸವದ ಆಚರಣೆಗೆ ಮೀಸಲಾಗಿರುವ 'ಬ್ಯಾಡ್ಜ್ ಆಫ್ ಲೋಗೋ'ವನ್ನು ಪಂಜಾಬ್ ಸರ್ಕಾರ ಈ ಹಿಂದೆ ಸಿದ್ಧಪಡಿಸಿತ್ತು. ಬ್ಯಾಡ್ಜ್ ಅನ್ನು ಈಗ ಅನಾವರಣಗೊಳಿಸಲಾಗಿದ್ದು, ಬ್ಯಾಡ್ಜ್‌ಗಳನ್ನು ರಾಜ್ಯ ಸರ್ಕಾರ ಉಚಿತವಾಗಿ ವಿತರಿಸಲಿದೆ ಎಂದು ಸಚಿವ ಚರಣಜಿತ್ ಸಿಂಗ್ ಚನ್ನಿ ಮಾಹಿತಿ ನೀಡಿದರು.

ಸುಲ್ತಾನಪುರ ಲೋಧಿಯ ಗುರುದ್ವಾರ ಸಾಹಿಬ್‌ಗೆ ಭೇಟಿ ನೀಡುವ ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲು ಪಂಜಾಬ್ ಸರ್ಕಾರ ಎಲ್ಲ ಸೌಲಭ್ಯಗಳನ್ನು ಒದಗಿಸಲು ಕಾಳಜಿ ವಹಿಸಿದೆ ಎಂದು ಸಚಿವರು ಹೇಳಿದರು.

ಪ್ರವಾಸೋದ್ಯಮ ಇಲಾಖೆ ಈ ಸಂದರ್ಭದಲ್ಲಿ ಇಂಗ್ಲಿಷ್ ಮತ್ತು ಪಂಜಾಬಿ ಭಾಷೆಗಳಲ್ಲಿ ಮಾಹಿತಿ ಕಿರುಪುಸ್ತಕಗಳನ್ನು ಬಿಡುಗಡೆ ಮಾಡಿತು. ಈ ಕಿರುಹೊತ್ತಗೆಗಳು ಎಲ್ಲಾ ನೆರವು ಕೇಂದ್ರಗಳಲ್ಲಿ ಉಚಿತವಾಗಿ ಲಭ್ಯವಿರುತ್ತವೆ. ಈ ಮಧ್ಯೆ, ಸಂಭ್ರಮಾಚರಣೆಯ ಸಂದರ್ಭದಲ್ಲಿ ಸುಲ್ತಾನಪುರ ಲೋಧಿಗೆ ಭೇಟಿ ನೀಡಲು ಬರುವ ಜನರ ಅನುಕೂಲಕ್ಕಾಗಿ ರಾಜ್ಯ ಸರ್ಕಾರವು ವಿವಿಧ ನಗರಗಳಲ್ಲಿ 39 ಸಹಾಯವಾಣಿಗಳನ್ನು ಸ್ಥಾಪಿಸಿದೆ ಎಂದು ಪ್ರತಾಪ್ ಹೇಳಿದರು.

ಅಮೃತಸರ ಮತ್ತು ಚಂಡೀಗಢ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಆಡಂಪೂರ್‌ನ ದೇಶೀಯ ವಿಮಾನ ನಿಲ್ದಾಣ, ಚಂಡೀಗಢ, ಅಮೃತಸರ ಮತ್ತು ಕಪುರ್ಥಾಲಾದಲ್ಲಿ ರೈಲ್ವೆ ನಿಲ್ದಾಣಗಳಲ್ಲದೆ ಜಲಂಧರ್, ಕರ್ತಾರ್‌ಪುರ, ಅಮೃತಸರ ಮತ್ತು ಕಪುರ್ಥಾಲಾದಲ್ಲಿ ಬಸ್ ನಿಲ್ದಾಣಗಳಲ್ಲಿ ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ.

Trending News