Shocking: ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ 10ರೂ. ನೀಡಿದ 60 ವರ್ಷದ ಅಜ್ಜ!

Uttar Pradesh Rape Case: 15 ವರ್ಷದ ತನ್ನ ಮೊಮ್ಮಗಳ ಮೇಲೆಯೇ 60 ವರ್ಷದ ಅಜ್ಜನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅತ್ಯಾಚಾರ ನಡೆಸಿರುವ ವಿಚಾರವನ್ನು ಯಾರಿಗೂ ಹೇಳದಂತೆ ಬಾಯಿ ಮುಚ್ಚಿಸಲು ಆಕೆಗೆ 10 ರೂ. ನೋಟನ್ನು ನೀಡಿದ್ದಾನೆ.

Written by - Puttaraj K Alur | Last Updated : Mar 17, 2023, 10:40 PM IST
  • ಉತ್ತರಪ್ರದೇಶದ ಗೋರಖ್‌ಪುರದಲ್ಲಿ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ
  • 15 ವರ್ಷದ ಮೊಮ್ಮಗಳ ಮೇಲೆಯೇ 60 ವರ್ಷದ ಅಜ್ಜನಿಂದ ಲೈಂಗಿಕ ದೌರ್ಜನ್ಯ
  • ಅತ್ಯಾಚಾರದ ವಿಚಾರ ಯಾರಿಗೂ ಹೇಳದಂತೆ ಬಾಲಕಿಗೆ 10 ರೂ. ನೋಟು ನೀಡಿದ್ದ ಅಜ್ಜನ ಬಂಧನ
Shocking: ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ 10ರೂ. ನೀಡಿದ 60 ವರ್ಷದ ಅಜ್ಜ! title=
ಅಜ್ಜನಿಂದ ಲೈಂಗಿಕ ದೌರ್ಜನ್ಯ!

ಗೋರಖ್‌ಪುರ: ಉತ್ತರಪ್ರದೇಶದ ಗೋರಖ್‌ಪುರದಲ್ಲಿ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 15 ವರ್ಷದ ತನ್ನ ಮೊಮ್ಮಗಳ ಮೇಲೆಯೇ 60 ವರ್ಷದ ಅಜ್ಜನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಅತ್ಯಾಚಾರ ನಡೆಸಿರುವ ವಿಚಾರವನ್ನು ಯಾರಿಗೂ ಹೇಳದಂತೆ ಬಾಯಿ ಮುಚ್ಚಿಸಲು ಆಕೆಗೆ 10 ರೂ. ನೋಟನ್ನು ನೀಡಿದ್ದಾನೆಂದು ವರದಿಯಾಗಿದೆ.

ಮೊಮ್ಮಗಳನ್ನು ಅತ್ಯಾಚಾರ ಮಾಡಿದ ಆರೋಪದ ಮೇರೆಗೆ 60 ವರ್ಷದ ವ್ಯಕ್ತಿಯನ್ನು ಗೋರಖ್‌ಪುರ ಪೊಲೀಸರು ಬಂಧಿಸಿದ್ದಾರೆ. ಸಂಜೆ ಸೊಸೆ ಮತ್ತು ಮೊಮ್ಮಗಳು ಕುರಿಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಅಜ್ಜ ಮನೆಗೆ ಹೋಗುವಂತೆ ಸೊಸೆಗೆ ಹೇಳಿ ಕಳಿಸಿದ್ದಾನೆ.

ಇದನ್ನೂ ಓದಿ: Viral Video: ವೇಗವಾಗಿ ಚಲಿಸುತ್ತಿದ್ದ ಆಟೋಮೋಡ್ ಕಾರಲ್ಲಿ ಪತಿ-ಪತ್ನಿಯ ಸರಸ... ವಿಡಿಯೋ ನೋಡಿ!

ಬಳಿಕ ಕಟ್ಟಿಗೆ ಕಡಿಯಲು ಕೊಡಲಿ ತರುವಂತೆ ತನ್ನ ಮೊಮ್ಮಗಳಿಗೆ ತಿಳಿಸಿದ್ದಾನೆ. ಮೊಮ್ಮಗಳು ಮನೆಗೆ ಹೋಗಿ ಕೊಡಲಿ ತಂದಾಗ ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಈ ವಿಚಾರವನ್ನು ಯಾರಿಗೂ ಹೇಳಬಾರದು ಅಂತಾ ಹೇಳಿ ಆಕೆಗೆ 10 ರೂ. ನೋಟು ನೀಡಿದ್ದಾನೆ.

ನೀರು ತರಲು ಹೋಗುತ್ತಿದ್ದ ವ್ಯಕ್ತಿಯೊಬ್ಬ ಅಜ್ಜನ ಕೃತ್ಯವನ್ನು ಕಂಡು ಊರಿನ ಜನರಿಗೆ ವಿಷಯ ತಿಳಿಸಿದ್ದಾನೆ. ಬಳಿಕ ಸ್ಥಳದಲ್ಲಿ ಜಮಾಯಿಸಿದ ಗ್ರಾಮಸ್ಥರು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಅಜ್ಜನನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: Coronavirus Cases In India: ಕೋರೋನಾ ಹೊಸ ಅಲೆ ಬರಲಿದೆಯಾ? ವೇಗವಾಗಿ ಹರಡುಟ್ಟಿದೆ ಕೋವಿಡ್-19 ಸಬ್ ವೇರಿಯಂಟ್!

ಈ ಬಗ್ಗೆ ಬಾಲಕಿಯ ಕುಟುಂಬಸ್ಥರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.  ಪ್ರಕರಣ ದಾಖಲಿಸಿಕೊಂಡು ಆರೋಪಿ ಅಜ್ಜನನ್ನು ಬಂಧಿಸಲಾಗಿದೆ.  ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗುಲ್ರಿಹಾ ಪೊಲೀಸ್ ಠಾಣೆಯ ಉಸ್ತುವಾರಿ ಮನೋಜ್ ಕುಮಾರ್ ಪಾಂಡೆ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News