Tumakuru: ಪತ್ನಿಯ ಕಾಟಕ್ಕೆ ಸೂಸೈಡ್ ಮಾಡಿಕೊಂಡ ಇಂಜಿನಿಯರ್..!

ಬೆಂಗಳೂರಿನಲ್ಲಿ ವಾಸವಿದ್ದ ದಂಪತಿ ನಡುವೆ ಹೊಂದಾಣಿಕೆ ಇಲ್ಲದೇ ಪದೇ ಪದೇ ಗಲಾಟೆ ಆಗ್ತಿತ್ತು. ಮದುವೆಯಾದ ಬಳಿಕ ಪತಿ ಮಂಜುನಾಥ್‍ಗೆ ಪತ್ನಿ ಪ್ರಿಯಾಂಕಾ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎಂದು ಆರೋಪಿಸಲಾಗಿದೆ.

Written by - Zee Kannada News Desk | Last Updated : Sep 15, 2023, 08:07 AM IST
  • ಬೆಂಗಳೂರಿನಲ್ಲಿ ಪತ್ನಿಯ ಕಾಟಕ್ಕೆ ಸೂಸೈಡ್ ಮಾಡಿಕೊಂಡ ಇಂಜಿನಿಯರ್
  • ಬೆಂಗಳೂರಿನ BMRCLನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ಮಂಜುನಾಥ್
  • 10 ವರ್ಷದ ಹಿಂದೆ ತುರುವೇಕೆರೆ ಮೂಲದ ಪ್ರೀಯಾಂಕಳನ್ನು ಮದುವೆಯಾಗಿದ್ದ ಮಂಜುನಾಥ್
Tumakuru: ಪತ್ನಿಯ ಕಾಟಕ್ಕೆ ಸೂಸೈಡ್ ಮಾಡಿಕೊಂಡ ಇಂಜಿನಿಯರ್..! title=
ಪತ್ನಿಯ ಕಾಟಕ್ಕೆ ಇಂಜಿನಿಯರ್ ಸೂಸೈಡ್!

ತುಮಕೂರು: ಪತ್ನಿಯ ಕಾಟಕ್ಕೆ ಇಂಜಿನಿಯರ್ ಒಬ್ಬರು ಸೂಸೈಡ್ ಮಾಡಿಕೊಂಡಿರವು ಘಟನೆ ನಡೆದಿದೆ. ಮಂಜುನಾಥ್ (38) ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಮೃತ ದುರ್ದೈವಿ.

ತುಮಕೂರು ಜಿಲ್ಲೆ ಕೆಬಿ ಕ್ರಾಸ್ ಬಳಿಯ ಕುಂದೂರು ಪಾಳ್ಯದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನ BMRCLನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ಮಂಜುನಾಥ್ ಕಳೆದ 10 ವರ್ಷದ ಹಿಂದೆ ತುರುವೇಕೆರೆ ಮೂಲದ ಪ್ರೀಯಾಂಕಳನ್ನು ಮದುವೆಯಾಗಿದ್ದ.

ಇದನ್ನೂ ಓದಿ: ಸರ್ವಪಕ್ಷ ಕರೆದು ಅವರಿಗೆ ವಾಸ್ತವಾಂಶ ವಿವರಿಸಿದ್ದೇವೆ

ಬೆಂಗಳೂರಿನಲ್ಲಿ ವಾಸವಿದ್ದ ದಂಪತಿ ನಡುವೆ ಹೊಂದಾಣಿಕೆ ಇಲ್ಲದೇ ಪದೇ ಪದೇ ಗಲಾಟೆ ಆಗ್ತಿತ್ತು. ಮದುವೆಯಾದ ಬಳಿಕ ಪತಿ ಮಂಜುನಾಥ್‍ಗೆ ಪತ್ನಿ ಪ್ರಿಯಾಂಕಾ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎಂದು ಆರೋಪಿಸಲಾಗಿದೆ. ನೀನು ಹಳ್ಳಿ ಗುಗ್ಗು, ನಿನ್ನನ್ನು ಮದುವೆಯಾಗಲು ನನಗೆ ಇಷ್ಟ ಇರಲಿಲ್ಲ ಎಂದು ಪದೇ ಪದೇ ಪ್ರೀಯಾಂಕ ಕಿಚಾಯಿಸುತ್ತಿದ್ದಳಂತೆ.

ಇದೇ ವಿಚಾರಕ್ಕೆ ಇಬ್ಬರ ನಡುವೆ ಪದೇ ಪದೇ ಗಲಾಟೆಯಾಗುತ್ತಿತ್ತು. ಪತ್ನಿಯ ಕಿರುಕುಳಕ್ಕೆ ಮನನೊಂದು ನೇಣುಬಿಗಿದುಕೊಂಡು ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ ತನ್ನ ಸಹೋದರನಿಗೆ ಮಂಜುನಾಥ್ ಆಡಿಯೋ ಮೇಸೆಜ್ ಕಳುಹಿಸಿದ್ದಾನೆ.

ಇದನ್ನೂ ಓದಿ: ಆರು ಆರೋಪಿಗಳನ್ನು ಗುರುತಿಸಿದ ದೂರುದಾರ ಗೋವಿಂದ್

ನನಗೆ ಅವಳ ಜೊತೆ ಜೀವನ ಮಾಡೋಕೆ ಆಗ್ತಿಲ್ಲ, ಆ ಮನೆ ಹಾಳಿಯಿಂದಲೇ ನಾನು ಸಾಯುತ್ತಿದ್ದೇನೆ. ನನ್ನ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳಿ ಎಂದು ಮಂಜುನಾಥ್ ಆಡಿಯೋ ಮೇಸೆಜ್ ಮಾಡಿದ್ದಾನೆ. ಈ ಬಗ್ಗೆ ಪತ್ನಿ ಪ್ರಿಯಾಂಕ ವಿರುದ್ಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News