Shradha Murder Case: ಗೂಗಲ್‌ ಸರ್ಚ್‌.. ದ್ವೇಷವಾಗಿ ಬದಲಾದ ಪ್ರೀತಿ.. ಶ್ರದ್ಧಾ ಕೊಲೆಯ ಬಗ್ಗೆ ಪೊಲೀಸರೆದುರು ಅಫ್ತಾಬ್‌ ಬಿಚ್ಚಿಟ್ಟ ಕರಾಳ ಕಹಾನಿ!

Shradha Murder Case: ಈ ಪ್ರಕರಣದಲ್ಲಿ ಹಲವು ಹೊಸ ಸಂಗತಿಗಳು ಬೆಳಕಿಗೆ ಬಂದಿವೆ. ಕೆದಕಿದಷ್ಟು ಆಳವಾಗಿ ಸಾಗುತ್ತಿದೆ ಈ ಪ್ರಕರಣ. ಯಾರೂ ಊಹಿಸಲೂ ಸಾಧ್ಯವಾಗದಷ್ಟು ಪ್ರೀತಿಸುತ್ತಿದ್ದ ಶ್ರದ್ಧಾಳನ್ನು ಪ್ರೇಮಿ ಅಫ್ತಾಬ್ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ನಂತರ ಸಾಕ್ಷ್ಯ ನಾಶಪಡಿಸಲು ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದಾನೆ.  

Written by - Chetana Devarmani | Last Updated : Nov 15, 2022, 01:58 PM IST
  • ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ ಶ್ರದ್ಧಾ ಕೊಲೆ ಪ್ರಕರಣ
  • ಶ್ರದ್ಧಾ ಕೊಲೆಯ ಬಗ್ಗೆ ಪೊಲೀಸರೆದುರು ಅಫ್ತಾಬ್‌ ಬಿಚ್ಚಿಟ್ಟ ಕರಾಳ ಕಹಾನಿ!
  • ಹಂತಹಂತವಾಗಿ ಕೊಲೆಯ ಎಲ್ಲಾ ರಹಸ್ಯ ಬಯಲು
Shradha Murder Case: ಗೂಗಲ್‌ ಸರ್ಚ್‌.. ದ್ವೇಷವಾಗಿ ಬದಲಾದ ಪ್ರೀತಿ.. ಶ್ರದ್ಧಾ ಕೊಲೆಯ ಬಗ್ಗೆ ಪೊಲೀಸರೆದುರು ಅಫ್ತಾಬ್‌ ಬಿಚ್ಚಿಟ್ಟ ಕರಾಳ ಕಹಾನಿ! title=
ಶ್ರದ್ಧಾ ಕೊಲೆ ಪ್ರಕರಣ

ನವದೆಹಲಿ : ಮುಂಬೈನಲ್ಲಿ ಆರಂಭವಾಗಿ ದೆಹಲಿಯಲ್ಲಿ ಕ್ರೂರ ಅಂತ್ಯ ಕಂಡಿದೆ ಈ ಪ್ರೇಮ ಕಹಾನಿ. ಅಷ್ಟಕ್ಕೂ ಯುವಕನ ತಲೆಯಲ್ಲಿ ಇಂತಹ ಭಯಾನಕ ಐಡಿಯಾ ಎಲ್ಲಿಂದ ಬಂತು ಎಂಬ ಪ್ರಶ್ನೆ ಸದ್ಯ ಎಲ್ಲರನ್ನೂ ಕಾಡುತ್ತಿದೆ. ಈ ವೆಬ್ ಸಿರೀಸ್‌ನಿಂದ ಸಿಕ್ಕಿತ್ತಂತೆ ಇಂತಹ ಕ್ರೂರ ಐಡಿಯಾ ಏನಾದ್ರೂ ಸಿಕ್ತಾ ಎಂಬ ಅನುಮಾನ ಎಲ್ಲರನ್ನೂ ಕಾಡಲಾರಂಭಿಸಿದೆ. ದೆಹಲಿಯಲ್ಲಿ ನಡೆದ ಹೃದಯ ವಿದ್ರಾವಕ ರಕ್ತಸಿಕ್ತ ಪ್ರೇಮಕಥೆಯನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಈ ಪ್ರಕರಣದಲ್ಲಿ ಹಲವು ಹೊಸ ಸಂಗತಿಗಳು ಬೆಳಕಿಗೆ ಬಂದಿವೆ. ಕೆದಕಿದಷ್ಟು ಆಳವಾಗಿ ಸಾಗುತ್ತಿದೆ ಈ ಪ್ರಕರಣ. ಯಾರೂ ಊಹಿಸಲೂ ಸಾಧ್ಯವಾಗದಷ್ಟು ಪ್ರೀತಿಸುತ್ತಿದ್ದ ಶ್ರದ್ಧಾಳನ್ನು ಪ್ರೇಮಿ ಅಫ್ತಾಬ್ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ನಂತರ ಸಾಕ್ಷ್ಯ ನಾಶಪಡಿಸಲು ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದಾನೆ.  

ಗೂಗಲ್‌ ಸರ್ಚ್‌ ಮಾಡಿದ ಪಾಪಿ ಪ್ರೇಮಿ : 

ಶ್ರದ್ಧಾಳ ಮೃತದೇಹವನ್ನು ಕತ್ತರಿಸಿ ಶವವನ್ನು ವಿಲೇವಾರಿ ಮಾಡಲು, ರಕ್ತದ ಕಲೆಗಳನ್ನು ತೆಗೆದುಹಾಕಲು ಮತ್ತು ಮಾನವ ದೇಹದ ರಚನೆಯನ್ನು ಕಂಡುಹಿಡಿಯಲು ಗೂಗಲ್‌ನಲ್ಲಿ ಸರ್ಚ್‌ ಮಾಡಿದ್ದ. ಗೂಗಲ್‌ನಿಂದ ಮಾಹಿತಿ ಕಲೆಹಾಕಿದ ಬಳಿಕ ತನ್ನ ಫ್ಲಾಟ್‌ನ ಬಾತ್‌ರೂಮ್‌ನಲ್ಲಿದ್ದ ಶ್ರದ್ಧಾಳ ಮೃತದೇಹವನ್ನು ಗರಗಸದಿಂದ 35 ತುಂಡುಗಳಾಗಿ ಕತ್ತರಿಸಲು ನಿರ್ಧರಿಸಿದ್ದಾನೆ. ಇದಾದ ನಂತರ ಮೃತ ದೇಹವನ್ನು ಕತ್ತರಿಸಲು ಸುಲಭವಾಗುತ್ತದೆ ಎಂದು ಗೂಗಲ್‌ನಲ್ಲಿ ಮಾನವ ಅಂಗರಚನಾಶಾಸ್ತ್ರದ ಬಗ್ಗೆ ಹುಡುಕಿದ್ದಾನೆ. ಪೊಲೀಸರು ಅಫ್ತಾಬ್‌ನ ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ವಶಪಡಿಸಿಕೊಂಡಿದ್ದು, ಈ ಎಲ್ಲ ಕರಾಳ ಸತ್ಯಗಳು ಬಯಲಾಗಿವೆ.

ಇದನ್ನೂ ಓದಿ : ಶ್ರದ್ಧಾ ರುಂಡವನ್ನು ಅಫ್ತಾಬ್ ದಿನವೂ ನೋಡುತ್ತಿದ್ದ : ಹೇಗಿತ್ತು ಆ ಕರಾಳರಾತ್ರಿ...!

ಹಂತಹಂತವಾಗಿ ಕೊಲೆಯ ಎಲ್ಲಾ ರಹಸ್ಯ ಬಯಲು :

ಪೊಲೀಸರು ಶನಿವಾರ ಅಫ್ತಾಬ್‌ನನ್ನು ಕಸ್ಟಡಿಗೆ ತೆಗೆದುಕೊಂಡು, ವಿಚಾರಣೆ ನಡೆಸಿದಾಗ ಅವನು ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ನಂತರ ಹಂತಹಂತವಾಗಿ ಕೊಲೆಯ ಎಲ್ಲಾ ರಹಸ್ಯಗಳನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾನೆ. ಶ್ರದ್ಧಾಳ ಮೃತದೇಹದ ಭಾಗಗಳನ್ನು ಪ್ರತಿದಿನ ರಾತ್ರಿ ಒಂದೆರಡರಂತೆ ತೆಗೆದುಕೊಂಡು ಹೋಗಿ ಕಾಡಿನಲ್ಲಿ ಬಿಸಾಕುತ್ತಿದ್ದ ಬಗ್ಗೆ ಪೊಲೀಸರ ಬಳಿ ಹೇಳಿದ್ದಾನೆ. ಕೆಲವು ತುಣುಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಅವರ ಫೋರೆನ್ಸಿಕ್ ಮತ್ತು ಡಿಎನ್ಎ ತನಿಖೆ ನಡೆಯಬೇಕಿದೆ. ಆದರೆ ಇದುವರೆಗೂ ಶ್ರದ್ಧಾ ಮೃತದೇಹದ ತಲೆ ಮಾತ್ರ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

ಗೆಳತಿಯ ದೇಹವನ್ನು ಗರಗಸದಿಂದ ಕತ್ತರಿಸಿದ ಪ್ರಿಯಕರ :

ಅಫ್ತಾಬ್ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದು ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದಾನೆ. ಇದಾದ ಬಳಿಕ ಆ ತುಂಡುಗಳು ಕೊಳೆಯದಂತೆ ಕಾಪಾಡಲು 300 ಲೀಟರ್ ಫ್ರಿಡ್ಜ್ ತಂದಿದ್ದಾನೆ. ಈ ತುಣುಕುಗಳನ್ನು ಫ್ರಿಜ್‌ನಲ್ಲಿ ಹಲವಾರು ದಿನಗಳವರೆಗೆ ಇರಿಸಿ. ಯಾವುದೇ ಸಂದೇಹಬಾರದಂತೆ ಪ್ರತಿದಿನ ರಾತ್ರಿ ಎರಡರಿಂದ ಮೂರು ಗಂಟೆಗೆ ಮನೆಯಿಂದ ಹೊರಡುತ್ತಿದ್ದನು. ಕ್ರಮೇಣ ಮೃತದೇಹದ ತುಂಡುಗಳನ್ನು ಮೆಹ್ರೌಲಿ ಕಾಡಿನಲ್ಲಿ 18 ದಿನಗಳವರೆಗೆ ಎಸೆಯುತ್ತಿದ್ದನು. ಗಮನಿಸಬೇಕಾದ ಅಂಶವೆಂದರೆ 6 ತಿಂಗಳ ಹಿಂದೆ ನಡೆದ ಈ ಕೊಲೆ ಇದೀಗ ಬೆಳಕಿಗೆ ಬಂದಿದೆ.

ಇವರ ಪ್ರೀತಿಯಲ್ಲಿ ದ್ವೇಷ ಹುಟ್ಟಲು ಕಾರಣವಾದ್ರೂ ಏನು? 

ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಅಫ್ತಾಬ್ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ. ಶ್ರದ್ಧಾ ಮದುವೆ ಮಾಡಿಕೊಳ್ಳುವಂತೆ ಅಫ್ತಾಬ್ ಮೇಲೆ ಒತ್ತಡ ಹೇರುತ್ತಿದ್ದಳು. ಅಫ್ತಾಬ್ ಅನೇಕ ಹುಡುಗಿಯರೊಂದಿಗೆ ಸಂಬಂಧ ಹೊಂದಿದ್ದನು ಮತ್ತು ಶ್ರದ್ಧಾ ಅವನ ಮೇಲೆ ಅನುಮಾನ ಪಡುತ್ತಿದ್ದಳು. ಈ ವಿಚಾರದಲ್ಲೂ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಕೊನೆಗೆ ಬೇಸತ್ತ ಅಫ್ತಾಬ್ ಮೇ 18ರಂದು ಶ್ರದ್ಧಾಳನ್ನು ಹತ್ಯೆಗೈದಿದ್ದಾನೆ.

ಇದನ್ನೂ ಓದಿ : ಈ ವೆಬ್ ಸಿರೀಸ್‌ನಿಂದ ಸಿಕ್ಕಿತ್ತಂತೆ ಕೊಲೆ ಐಡಿಯಾ! ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ಯಾಕೆ?

ಹತ್ಯೆಯ ನಂತರ ಅಫ್ತಾಬ್ ಘಟನೆ ನಡೆದ ಕೊಠಡಿಯಲ್ಲೇ ಪ್ರತಿದಿನ ಮಲಗುತ್ತಿದ್ದ. ಕೊಲೆಯ ನಂತರ ಅಫ್ತಾಬ್ ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡುತ್ತಿದ್ದ. ಅವನು ಯಾರನ್ನೂ ಭೇಟಿಯಾಗಲಿಲ್ಲ. ಆತನಿಗೆ ಕೊಲೆಯ ಬಗ್ಗೆ ಯಾವುದೇ ಪಶ್ಚಾತ್ತಾಪವಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಫ್ತಾಬ್ ಸಂಪೂರ್ಣ ಯೋಜನೆಯೊಂದಿಗೆ ಈ ಕೊಲೆಯನ್ನು ನಡೆಸಿದ್ದಾನೆ ಎಂಬ ಅನುಮಾನ ಸಹ ಹುಟ್ಟಿಕೊಂಡಿದೆ.

ಕ್ರೂರ ಕೊಲೆಗಾರ ಅಫ್ತಾಬ್ ಅಮೀನ್ ಪೂನಾವಾಲಾಗೆ 28 ​​ವರ್ಷ, ಶ್ರದ್ಧಾಗೆ 25 ವರ್ಷ. ಅಫ್ತಾಬ್ ತಂದೆಯ ಹೆಸರು ಅಮೀನ್ ಪೂನಾವಾಲಾ. ಅವರು ಪಶ್ಚಿಮ ಮುಂಬೈನ ವಸಾಯಿಯ ನ್ಯೂ ದಿವಾನ್ ಮ್ಯಾನ್‌ನ ಯುನಿಕ್ ಪಾರ್ಕ್‌ನ ನಿವಾಸಿಯಾಗಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News