Shocking News: ಪತ್ನಿಯ ಕಿರುಕುಳಕ್ಕೆ ಬೇಸತ್ತು ಅಪ್ಪ-ಅಮ್ಮನ ಜೊತೆ ಗಂಡನೂ ಆತ್ಮಹತ್ಯೆ..!

Suicide case: ಪತ್ನಿಯ ಕುರುಕುಳದಿಂದ ಮನನೊಂದಿದ್ದ ಸುರೇಂದ್ರನ್‌ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ. ಅದರಂತೆ ಸುರೇಂದ್ರನ್‌ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ತಮ್ಮ ಪುತ್ರ ಸಾವನ್ನಪ್ಪಿದ್ದನ್ನು ಕಂಡು ದುಃಖ ತಾಳಲಾರದೆ ಸುರೇಂದ್ರನ್‌ ಪೋಷಕರು ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿಯಾಗಿದೆ.  

Written by - Puttaraj K Alur | Last Updated : Dec 17, 2024, 10:23 PM IST
  • ಪತ್ನಿಯ ಕಿರುಕುಳಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆ
  • ಮಗನ ಸಾವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪೋಷಕರು
  • ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ನಡೆದಿರುವ ಆಘಾತಕಾರಿ ಘಟನೆ
Shocking News: ಪತ್ನಿಯ ಕಿರುಕುಳಕ್ಕೆ ಬೇಸತ್ತು ಅಪ್ಪ-ಅಮ್ಮನ ಜೊತೆ ಗಂಡನೂ ಆತ್ಮಹತ್ಯೆ..! title=
ನಾಮಕ್ಕಲ್ ಆತ್ಮಹತ್ಯೆ ಪ್ರಕರಣ

Shocking News: ದೇಶದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ನಿಖಿತಾ ಸಿಂಘಾನಿಯಾಳನ್ನು ಪೊಲೀಸರು ಬಂಧಿಸಿದ್ದಾರೆ. ಅತುಲ್ ಸುಭಾಷ್ ಪತ್ನಿ, ಅತ್ತೆ ಮತ್ತು ಪತ್ನಿಯ ಸಹೋದರನನ್ನು ಪೊಲೀಸರು ಬಂಧಿಸಿದ್ದು, ಬೆಂಗಳೂರಿಗೆ ಕರೆದುಕೊಂಡು ಬರುತ್ತಿದ್ದಾರೆ. ಡಿಸೆಂಬರ್ 9ರಂದು ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದರು.

ಅತುಲ್ ಸುಭಾಷ್ ಘಟನೆಯ ನಂತರ ಪತಿ-ಪತ್ನಿಯರ ಪ್ರಕರಣಗಳು ಒಂದೊಂದಾಗಿ ಹೊರಗೆ ಬರುತ್ತಿವೆ. ಪತ್ನಿಯ ಕಿರುಕುಳಕ್ಕೆ ಪತಿಯೊಬ್ಬ ಪೋಷಕರ ಜೊತೆ ಸೇರಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 

ಇದನ್ನೂ ಓದಿ: Multibagger stocks: ಒಂದೇ ವಾರದಲ್ಲಿ 37% ಲಾಭ ನೀಡಿದ 8 ಷೇರುಗಳು; ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು!!

ಮದುವೆಯಾದ ಐದು ತಿಂಗಳ ನಂತರ ಪತಿ-ಪತ್ನಿ ಪದೇ ಪದೇ ಜಗಳವಾಡುತ್ತಿದ್ದರು ಎನ್ನಲಾಗಿದೆ. ಇದೆ ವಿಚಾರವಾಗಿ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಮ್ಮ ಒಬ್ಬನೇ ಮಗನ ಸಾವನ್ನು ತಾಳಲಾರದೆ ಪೋಷಕರು ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರುಮಪಟ್ಟಿ ಸಮೀಪದ ಎ.ವಳವಂಡಿ ಗ್ರಾಮದ ಸೆಲ್ವರಾಜ್ (55) ಮತ್ತು ಅವರ ಪತ್ನಿ ಪೊಂಗೋಡಿ (50) ಕೂಲಿ ಕಾರ್ಮಿಕರಾಗಿದ್ದರು. ಇವರ ಪುತ್ರ ಸುರೇಂದ್ರನ್ (28) ಅಡುಗೆ ಕೆಲಸ ಮಾಡುತ್ತಿದ್ದರಂತೆ. ಐದು ತಿಂಗಳ ಹಿಂದೆ ವೆಟ್ಟಂಪಾಡಿಯ ಸ್ನೇಹಾ ಎಂಬ ಯುವತಿಯೊಂದಿಗೆ ಈತನ ವಿವಾಹವಾಗಿತ್ತು. 

ಮದುವೆಯಾದಾಗಿನಿಂದಲೂ ಪತಿಗೆ ಬೇರೆ ಮನೆ ಮಾಡುವಂತೆ ಸ್ನೇಹಾ ಒತ್ತಾಯಿಸುತ್ತಿದ್ದಳಂತೆ. ಆದರೆ ಸುರೇಂದ್ರನ್‌ಗೆ ಅಪ್ಪ-ಅಮ್ಮನ ಬಿಟ್ಟು ಬೇರೆ ಮನೆ ಮಾಡಲು ಇಷ್ಟವಿರಲಿಲ್ಲವಂತೆ. ಇದೇ ವಿಚಾರವಾಗಿ ಗಂಡ-ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಅದೇ ರೀತಿ ಶನಿವಾರವೂ ಸುರೇಂದ್ರನ್ ಮತ್ತು ಸ್ನೇಹಾ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಒಂದೇ ಒಂದು ರೂಪಾಯಿ ಬಂಡವಾಳ ಹಾಕೋದು ಬೇಡ... ಈ ಬ್ಯುಸಿನೆಸ್‌ ಶುರು ಮಾಡಿದ್ರೆ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗ್ಯಾರಂಟಿ! ಯಾರು ಬೇಕಾದ್ರೂ ಪ್ರಾರಂಭಿಸಬಹುದು

ಪತ್ನಿಯ ಕುರುಕುಳದಿಂದ ಮನನೊಂದಿದ್ದ ಸುರೇಂದ್ರನ್‌ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ. ಅದರಂತೆ ಸುರೇಂದ್ರನ್‌ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ತಮ್ಮ ಪುತ್ರ ಸಾವನ್ನಪ್ಪಿದ್ದನ್ನು ಕಂಡು ದುಃಖ ತಾಳಲಾರದೆ ಸುರೇಂದ್ರನ್‌ ಪೋಷಕರು ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿಯಾಗಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News