MLA, MP ಟಿಕೆಟ್ ಕೊಡಿಸುವುದಾಗಿ ಕೋಟ್ಯಾಂತರ ರೂ. ವಂಚನೆ: ಸ್ಯಾಂಡಲ್​ವುಡ್ ನಟ ಅರೆಸ್ಟ್!

ಸ್ವಯಂಕೃಷಿ ಹೆಸರಿನ ಸಂಸ್ಥೆ ಹುಟ್ಟುಹಾಕಿ ಸಾವಿರಾರು ಜನರಿಗೆ ವಂಚಿಸಿದ ಆರೋಪ ಹಿನ್ನೆಲೆ ಈ ಹಿಂದೆ ಹೈದರಾಬಾದ್ ಪೊಲೀಸರು ವಿರೇಂದ್ರ ಬಾಬುನನ್ನು ಬಂಧಿಸಿದ್ದರು.

Written by - VISHWANATH HARIHARA | Edited by - Puttaraj K Alur | Last Updated : Jul 15, 2022, 03:12 PM IST
  • ಲೋಕಸಭಾ & ವಿಧಾನಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂ. ವಂಚನೆ
  • ಸ್ಯಾಂಡಲ್ ವುಡ್ ನಟ-ನಿರ್ಮಾಪಕ ವಿರೇಂದ್ರ ಬಾಬುನನ್ನು ಬಂಧಿಸಿದ ಕೊಡಿಗೇಹಳ್ಳಿ ಪೊಲೀಸರು
  • ಧಾರವಾಡ ಮೂಲದ ಬಸವರಾಜ್ ಘೋಷಾಲ್ ಎಂಬುವರಿಗೆ 1.88 ಕೋಟಿ ರೂ. ವಂಚನೆ
MLA, MP ಟಿಕೆಟ್ ಕೊಡಿಸುವುದಾಗಿ ಕೋಟ್ಯಾಂತರ ರೂ. ವಂಚನೆ: ಸ್ಯಾಂಡಲ್​ವುಡ್ ನಟ ಅರೆಸ್ಟ್! title=
ವಂಚನೆ ಆರೋಪದಡಿ ಸ್ಯಾಂಡಲ್​ವುಡ್ ನಟನ ಬಂಧನ

ಬೆಂಗಳೂರು: ಮುಂದಿನ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂ. ಪಡೆದು ವಂಚಿಸಿರುವ  ಆರೋಪದಡಿ ಸ್ಯಾಂಡಲ್​ವುಡ್ ನಟ-ನಿರ್ಮಾಪಕ ವಿರೇಂದ್ರ ಬಾಬುನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.

2011ರಲ್ಲಿ ತೆರೆಕಂಡಿದ್ದ ‘ಸ್ವಯಂಕೃಷಿ’ ಚಿತ್ರದ ನಿರ್ಮಾಪಕ-ನಿರ್ದೇಶಕ ಹಾಗೂ ನಟ‌ನಾಗಿ ವಿರೇಂದ್ರಬಾಬು ಗುರುತಿಸಿಕೊಂಡಿದ್ದ. ಸ್ವಯಂಕೃಷಿ ಹೆಸರಿನ ಸಂಸ್ಥೆಯನ್ನು ಹುಟ್ಟುಹಾಕಿ ಸಾವಿರಾರು ಜನರಿಗೆ ವಂಚಿಸಿದ ಆರೋಪ ಹಿನ್ನೆಲೆ ಈ ಹಿಂದೆ ಹೈದರಾಬಾದ್ ಪೊಲೀಸರು ಬಂಧಿಸಿದ್ದರು. ಸದ್ಯ ಧಾರವಾಡ ಮೂಲದ ಬಸವರಾಜ್ ಘೋಷಾಲ್ ಎಂಬುವರಿಗೆ 1.88 ಕೋಟಿ ರೂ. ವಂಚನೆ ಸಂಬಂಧ ನೀಡಿದ ದೂರಿನ ಮೇರೆಗೆ ವಿರೇಂದ್ರ ಬಾಬುನನ್ನು ಕೊಡಿಗೇಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: 'ಬಿಜೆಪಿಯನ್ನು ಕಿತ್ತೊಗೆಯಲು ಕಾರ್ಯಕರ್ತರಿಗೆ ಶಕ್ತಿ ತುಂಬುವುದು ಮಾತ್ರ ನನ್ನ ಕೆಲಸ'

ಆರೋಪಿ ವಿರೇಂದ್ರ ಬಾಬು ರಾಷ್ಟ್ರ ಜನಹಿತ ಪಕ್ಷ ಹಾಗೂ ಕರ್ನಾಟಕ ರಕ್ಷಣಾ ಪಡೆ ಸಂಘಟನೆ ಸ್ಥಾಪಿಸಿದ್ದ. ಸಂಘಟನೆಯಲ್ಲಿ ಸದಸ್ಯ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳನ್ನು ನೀಡುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ.

ಇದಲ್ಲದೇ ಎಂಪಿ ಹಾಗೂ ಎಂಎಲ್‍ಎ ಚುನಾವಣೆಗಳಿಗೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದು ಮೋಸ ಮಾಡುತ್ತಿದ್ದ. ವಂಚನೆ ಹಣದಿಂದ ಸರ್ಕಾರಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಆನ್‍ಲೈನ್ ಶಿಕ್ಷಣ ನೀಡುತ್ತಿರುವುದಾಗಿ ಸುಳ್ಳು ಹೇಳುತ್ತಿದ್ದ. ಈ ಬಗ್ಗೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿರುವುದಾಗಿ ಈಶಾನ್ಯ ವಿಭಾಗದ ಡಿಸಿಪಿ ಅನೂಪ್‌ ಶೆಟ್ಟಿ ತಿಳಿಸಿದ್ದಾರೆ.

ಇದನ್ನೂ ಓದಿ: Contractor Santosh Patil : ಗುತ್ತಿಗೆದಾರ ಸಂತೋಷ ಪಾಟೀಲ್ ಪ್ರಕರಣ : ರಾಜ್ಯಪಾಲರ ಮೊರೆ ಹೋದ ಕುಟುಂಬಸ್ಥರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News