ಡ್ರಗ್ ಪೆಡ್ಲರ್ ಜೊತೆ ಕನ್ನಡ ಕಿರುತೆರೆ ನಟ-ನಟಿಯರ ಲಿಂಕ್: ತನಿಖೆಯಲ್ಲಿ ಸ್ಪೋಟಕ ಸತ್ಯ ಬಹಿರಂಗ

Kannada TV actors Link with drug peddlers: ವಿದೇಶಿ ಡ್ರಗ್ ಪೆಡ್ಲರ್ ಜೊತೆ ಕನ್ನಡದ ಕೆಲ ಕಿರುತೆರೆ ನಟ- ನಟಿಯರು ನಿತಂತರ ಸಂಪರ್ಕದಲ್ಲಿದ್ದರು ಎಂಬುದು ಸಿಸಿಬಿ ಪೊಲೀಸರ ತನಿಖೆ ವೇಳೆ ಬಯಲಾಗಿದೆ. 

Written by - VISHWANATH HARIHARA | Last Updated : Dec 17, 2023, 08:22 AM IST
  • ಡ್ರಗ್ ಪೆಡ್ಲರ್ ಜೊತೆ ಕನ್ನಡ ನಟರ ಲಿಂಕ್
  • ವಿದೇಶಿ ಡ್ರಗ್ ಪೆಡ್ಲರ್ ಸಂಪರ್ಕದಲ್ಲಿದ್ದ ನಟಿಯರು
  • ಸಿಸಿಬಿ ಪೊಲೀಸರ ತನಿಖೆ ವೇಳೆ ಬಯಲಾದ ಸತ್ಯ
ಡ್ರಗ್ ಪೆಡ್ಲರ್ ಜೊತೆ ಕನ್ನಡ ಕಿರುತೆರೆ ನಟ-ನಟಿಯರ ಲಿಂಕ್: ತನಿಖೆಯಲ್ಲಿ ಸ್ಪೋಟಕ ಸತ್ಯ ಬಹಿರಂಗ title=

ಬೆಂಗಳೂರು: ಬಣ್ಣದ ಲೋಕಕ್ಕೂ, ಮಾದಕ ಲೋಕಕ್ಕೂ ಎಂದಿಗೂ ಬಿಡದ ನಂಟಿದೆ ಎಂಬುದು ಮತ್ತೊಮ್ಮೆ  ಸಾಬೀತಾಗಿದೆ. ವಿದೇಶಿ ಡ್ರಗ್ ಪೆಡ್ಲರ್ ಜೊತೆ ಕನ್ನಡದ ಕೆಲ ಕಿರುತೆರೆ ನಟ- ನಟಿಯರು ನಿತಂತರ ಸಂಪರ್ಕದಲ್ಲಿದ್ದರು ಎಂಬುದು ಸಿಸಿಬಿ ಪೊಲೀಸರ ತನಿಖೆ ವೇಳೆ ಬಯಲಾಗಿದೆ. 

ಈ ಹಿಂದೆ ಸಹ ಡ್ರಗ್  ಜಾಲದಲ್ಲಿ ಸ್ಯಾಂಡಲ್ವುಡ್ ನಟ- ನಟಿಯರ ಹೆಸರು ಕೇಳಿ ಬಂದಿತ್ತು. ಹೀಗಾಗಿ ಪೊಲೀಸರು ಕೆಲ ನಟ-ನಟಿಯರನ್ನು ವಿಚಾರಣೆ ನಡೆಸಿದ್ದರು.ಈಗ ಮತ್ತೆ ಬಣ್ಣದ ಜಗತ್ತಿಗೆ ಡ್ರಗ್ ಜಾಲದ ನಂಟು ಇರುವುದು ಗೊತ್ತಾಗಿದೆ.

ಇದನ್ನೂ ಓದಿ: Bigg Boss 10 ಕ್ಕೆ ಬರೋ ಆಸೆನೇ ಇರ್ಲಿಲ್ಲ, ಆದ್ರೆ ಸ್ನೇಹಿತ್‌ ಬಿಗ್‌ಬಾಸ್‌ಗೆ ಬಂದಿದ್ದೇ ಇವರಿಗಾಗಿ 

ಕೆಲ ದಿನಗಳ ಹಿಂದೆ ಡ್ರಗ್ ಪೆಡ್ಲರ್ ಬಂಧಿಸಿದ್ದ ಸಿಸಿಬಿ ಪೊಲೀಸರು ತನಿಖೆ ವೇಳೆ ಪೆಡ್ಲರ್ ಮೊಬೈಲ್ ಪರಿಶೀಲನೆ ವೇಳೆ ಬಣ್ಣದ ಲೋಕದ ನಂಟು ಬಯಲಾಗಿದೆ‌. ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಲಿಯೋನಾರ್ಡ್ ಒಕುವೊಡ್ಲಿ ಎಂಬಾತ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 16 ಕೋಟಿ ಮೌಲ್ಯದ ಎಂಡಿಎಂಎ, 5 ಕೋಟಿ ಮೌಲ್ಯದ ಎಂಡಿಎಂಎ ಸೀಜ್ ಮಾಡಲಾಗಿತ್ತು.

ಹೊಸ ವರ್ಷದ ಸಂಭ್ರಮಾಚಣೆ ವೇಳೆ ಡ್ರಗ್ ಮಾರಲು ಈತ ಪ್ಲಾನ್ ಮಾಡಿಕೊಂಡಿದ್ದ. ಇನ್ನೂ ಈತನ ಜೊತೆ ಕನ್ನಡದ ಕಿರುತೆರೆ ನಟ- ನಟಿಯರು ಸಂಪರ್ಕದಲ್ಲಿದ್ದು, ಅವರು ಸಹ ಡ್ರಗ್ ಸೇವಿಸಿರುವ ಅನುಮಾನ ವ್ಯಕ್ತವಾಗಿದೆ. 

ಇದನ್ನೂ ಓದಿ: ಬೆಳಗಾವಿ ಮಹಿಳೆಯ ವಿವಸ್ತ್ರ ಪ್ರಕರಣ: ಲಕ್ಷ್ಮಿ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಆಗ್ರಹ 

ಡ್ರಗ್ ಕನ್ಸೂಮರ್ ಗಳ ಪತ್ತೆಗೆ ಸಿಸಿಬಿ ಪೊಲೀಸರು ಮುಂದಾಗಿಲ್ಲ. ಆದರೆ ಬುಡದಿಂದಲೇ ಮಾದಕ ವಸ್ತು ಜಾಲವನ್ನು ಕಿತ್ತು ಹಾಕುವ ಪ್ರಯತ್ನವನ್ನು ಸಿಲಿಕಾನ್ ಸಿಟಿ ಪೊಲೀಸರು ಮಾಡುತ್ತಿದ್ದಾರೆ. ಆದರೆ ಕಿರುತೆರೆಯಲ್ಲಿರುವ ಕೆಲ ನಟ-ನಟಿಯರು ಡ್ರಗ್ ಜಾಲದಲ್ಲಿ ಸಿಲುಕಿಕೊಂಡಿರುವುದು ದೊಡ್ಡ ಚರ್ಚೆಗೆ ಗ್ರಾಸವಾಗುವುದಂತೂ ಸುಳ್ಳಲ್ಲ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News