ನವದೆಹಲಿ: ಚಲಿಸುತ್ತಿದ್ದ ರೈಲಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಒಬ್ಬ SI ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ. ಮಹಾರಾಷ್ಟ್ರದ ಪಾಲ್ಘಾರ್ ರೈಲು ನಿಲ್ದಾಣದ ಬಳಿ ಜೈಪುರ-ಮುಂಬೈ ಸೆಂಟ್ರಲ್ ಎಕ್ಸ್ಪ್ರೆಸ್ ರೈಲಿನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF) ಕಾನ್ಸ್ಟೆಬಲ್ SI ಮತ್ತು ಇತರ ಮೂವರು ಪ್ರಯಾಣಿಕರ ಮೇಲೆ ಗುಂಡಿಕ್ಕಿ ಕೊಂದಿದ್ದಾನೆ. ಆರ್ಪಿಎಫ್ ಕಾನ್ಸ್ ಟೇಬಲ್ ಚೇತನ್ ಸಿಂಗ್ (34) ಆರೋಪಿಯಾಗಿದ್ದಾನೆ. ರೈಲಿನಲ್ಲಿಯೇ ಗುಂಡು ಹಾರಿಸಿ ನಾಲ್ವರನ್ನು ಕೊಂದಿರುವ ಘಟನೆ ಬೆಚ್ಚಿಬೀಳಿಸಿದೆ. ಘಟನೆ ನಡೆದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಇದನ್ನೂ ಓದಿ: LPG Price: ತಿಂಗಳ ಮೊದಲ ದಿನವೇ ಗುಡ್ ನ್ಯೂಸ್, ಎಲ್ಪಿಜಿ ಬೆಲೆ ಇಳಿಕೆ
ಚೇತನ್ ಸಿಂಗ್ ತನ್ನ ಹಿರಿಯ ಸಹೋದ್ಯೋಗಿ, ಆರ್ಪಿಎಫ್ ಸಬ್ ಇನ್ಸ್ ಪೆಕ್ಟರ್ ಟಿಕಾರಾಮ್ ಮೀನಾ ಮತ್ತು ಮೂವರು ಪ್ರಯಾಣಿಕರಿಗೆ ಗುಂಡಿಕ್ಕಿ ಕೊಂದಿದ್ದಾನೆ. ಅಬ್ದುಲ್ ಖಾದಿರ್ಭಾಯ್ (48), ಅಖ್ತರ್ ಅಬ್ಬಾಸ್ ಅಲಿ (48) ಮತ್ತು ಸದಾರ್ ಮೊಹಮ್ಮದ್ ಹುಸೇನ್ ಕೊಲೆಯಾದ ಪ್ರಯಾಣಿಕರಾಗಿದ್ದಾರೆ.
ಚೇತನ್ ಸಿಂಗ್ ಗುಂಡು ಹಾರಿಸಿದ ಬಳಿಕ ರೈಲಿನ ಚೈನ್ ಎಳೆಯಲಾಗಿದೆ. ಮೀರಾ ರೋಡ್ ಮತ್ತು ದಹಿಸರ್ ಸ್ಟೇಷನ್ ನಡುವೆ ರೈಲು ನಿಲುಗಡೆಯಾಗಿದೆ. ರೈಲು ನಿಲ್ಲುತ್ತಿದ್ದಂತೆಯೇ ಆರೋಪಿ ಅಲ್ಲಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಆದರೆ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಜನಸಾಮಾನ್ಯರೇ ಗಮನಿಸಿ: ಇಂದಿನಿಂದ ಬದಲಾಗಲಿದೆ ಈ ಎಲ್ಲಾ ನಿಯಮಗಳು!
ಮಾಹಿತಿ ಪ್ರಕಾರ, ಆರೋಪಿ ಚೇತನ್ ಸಿಂಗ್ ಮುಂಬೈನ ಭಾವ್ನಗರ ಡಿವಿಜನ್ನಿಂದ ಕಳೆದ ಮಾರ್ಚ್ನಲ್ಲಿ ವರ್ಗಾವಣೆಗೊಂಡಿದ್ದ. ಇತ್ತೀಚೆಗಷ್ಟೇ ತನ್ನೂರು ಹತ್ರಾಸ್ಗೆ ತೆರಳಿದ್ದ. ಜು.17ರಂದು ಮತ್ತೆ ಕೆಲಸಕ್ಕೆ ಹಾಜರಾಗಿದ್ದನಂತೆ. ಈತ ಪತ್ನಿ, ಇಬ್ಬರು ಮಕ್ಕಳು ಮತ್ತು ತನ್ನ ಪೋಷಕರೊಂದಿಗೆ ವಾಸವಿದ್ದನಂತೆ. ಆರೋಪಿ ಗುಂಡಿಕ್ಕಿ ಕೊಲೆ ಮಾಡಲು ಕಾರಣವೇನು ಅನ್ನೋದು ತಿಳಿದುಬಂದಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.