ನೀರಿಗಾಗಿ ಅಕ್ಕಪಕ್ಕದವರ ಗಲಾಟೆ: ಮನನೊಂದು ಗೃಹಿಣಿ ಆತ್ಮಹತ್ಯೆ!

Bangalore crime news: ಸರಸ್ವತಿ ಹಾಗೂ ಆಕೆಯ ಪತಿ ಕೋಗಿಲು ಮುಖ್ಯರಸ್ತೆಯ ಶ್ರೀನಿವಾಸಪುರದಲ್ಲಿರುವ ಸರ್ಕಾರಿ ವಸತಿ ಸಮುಚ್ಚಯದ ಮನೆಯಲ್ಲಿ ವಾಸವಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.  

Written by - VISHWANATH HARIHARA | Edited by - Puttaraj K Alur | Last Updated : Apr 26, 2023, 01:21 PM IST
  • ನೀರು ತುಂಬುವ ವಿಚಾರಕ್ಕೆ ಆರಂಭವಾದ ಗಲಾಟೆ ಗೃಹಿಣಿಯೊಬ್ಬರ ಸಾವಿಗೆ ಕಾರಣವಾಗಿದೆ
  • ಅಕ್ಕಪಕ್ಕದವರು ಗಲಾಟೆ ಮಾಡಿ, ಹಲ್ಲೆ ಮಾಡಿದರೆಂದು ನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ
  • ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ
ನೀರಿಗಾಗಿ ಅಕ್ಕಪಕ್ಕದವರ ಗಲಾಟೆ: ಮನನೊಂದು ಗೃಹಿಣಿ ಆತ್ಮಹತ್ಯೆ!   title=
ಮನನೊಂದು ಗೃಹಿಣಿ ಆತ್ಮಹತ್ಯೆ!

ಬೆಂಗಳೂರು: ನೀರು ತುಂಬುವ ವಿಚಾರಕ್ಕೆ ಆರಂಭವಾದ ಗಲಾಟೆ ಗೃಹಿಣಿಯೊಬ್ಬರ ಸಾವಿಗೆ ಕಾರಣವಾಗಿದೆ. ಏಪ್ರಿಲ್ 21ರಂದು ಯಲಹಂಕ ಠಾಣಾ ವ್ಯಾಪ್ತಿಯ ಕೋಗಿಲು ಮುಖ್ಯರಸ್ತೆಯ ಸರ್ಕಾರಿ ವಸತಿ ಸಮುಚ್ಚಯದಲ್ಲಿ ಈ ಘಟನೆ ನಡೆದಿದೆ. ಅಕ್ಕಪಕ್ಕದ ಮನೆಯವರು ಗಲಾಟೆ ಮಾಡಿ, ಹಲ್ಲೆ ಮಾಡಿದರು ಎಂದು ನೊಂದ ಸರಸ್ವತಿ (35) ಎಂಬಾಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸರಸ್ವತಿ ಹಾಗೂ ಆಕೆಯ ಪತಿ ಕೋಗಿಲು ಮುಖ್ಯರಸ್ತೆಯ ಶ್ರೀನಿವಾಸಪುರದಲ್ಲಿರುವ ಸರ್ಕಾರಿ ವಸತಿ ಸಮುಚ್ಚಯದ ಮನೆಯಲ್ಲಿ ವಾಸವಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಗಂಡ ನಾಗರಾಜ್ ಸಿನಿಮಾಗಳಲ್ಲಿ ಕ್ಯಾಮೆರಾ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದರು. ನೆಲ ಮಹಡಿಯಲ್ಲಿ ವಾಸವಿದ್ದ ಶ್ರೀನಿವಾಸ್ ಹಾಗೂ ಭವಾನಿ ದಂಪತಿ ಪ್ರತ್ಯೇಕವಾಗಿ ನೀರಿನ ಟ್ಯಾಂಕ್ ತಂದಿಟ್ಟುಕೊಂಡು ಎಲ್ಲರಿಗಾಗಿ ಇರುವ ನೀರಿನ ಸಂಪ್ ನಿಂದ ಪ್ರತ್ಯೇಕವಾಗಿ ನೀರು ತುಂಬಿಸಿಕೊಳ್ಳುತ್ತಿದ್ದರಂತೆ.

ಇದನ್ನೂ ಓದಿ: ಮಾಯಕೊಂಡ ಅಭ್ಯರ್ಥಿ ಬಸವರಾಜ್ ನಾಯ್ಕ್ ಪರ ಪ್ರಚಾರ

ಇದರಿಂದಾಗಿ ನೀರಿನ ಅಭಾವ ಉಂಟಾಗುತ್ತಿದೆ ಎಂದು ಸರಸ್ವತಿ ಪ್ರಶ್ನಿಸಿದಾಗ, ಮನ ಬಂದಂತೆ ಬೈದು, ಚಾರಿತ್ರ್ಯವಧೆ ಮಾಡಿದ್ದಾರೆ. ಇದೇ ವಿಚಾರವಾಗಿ ಕಳೆದ ಕೆಲ ದಿನಗಳಿಂದ ಎರಡೂ ಮನೆಯವರ ನಡುವೆ ಗಲಾಟೆಗಳಾಗಿದ್ದು, ಠಾಣೆಯ ಮೆಟ್ಟಿಲೇರಿದಾಗ ಪೊಲೀಸರು ಬುದ್ದಿವಾದ ಹೇಳಿ‌ ಕಳಿಸಿದ್ದಾರೆ. ಏಪ್ರಿಲ್ 21ರಂದು ಸಿನಿಮಾ ಕೆಲಸದ ನಿಮಿತ್ತ ನಾಗರಾಜ್ ಧಾರವಾಡಕ್ಕೆ ಹೋದಾಗ ನೀರಿನ ವಿಚಾರವಾಗಿ ಗಲಾಟೆ ಆರಂಭವಾಗಿದೆ. ಈ ವೇಳೆ ಶ್ರೀನಿವಾಸ್, ಅವರ ಪತ್ನಿ ಭವಾನಿ ಹಾಗೂ ಶಿಲ್ಪಾ ಎಂಬಾಕೆ ಸರಸ್ವತಿಗೆ ಮನಬಂದಂತೆ ನಿಂದಿಸಿ, ಹಲ್ಲೆ ಮಾಡಿದ್ದಾರೆ ಎಂಬ ಆರೋಪಿವಿದೆ.

ಹೀಗಾಗಿ ಮನನೊಂದ ಸರಸ್ವತಿ ಗಂಡನಿಗೆ ಕರೆ ಮಾಡಿ ‘ನನ್ನಿಂದ ಇನ್ನು ಸಹಿಸಲು ಸಾಧ್ಯವಿಲ್ಲ, ನೀನು ಬೇರೆ ಕಡೆ ಮನೆ ಮಾಡುತ್ತಿಲ್ಲ, ನಾನು ಸಾಯುತ್ತಿದ್ದೇನೆ' ಎಂದಿದ್ದಾಳೆ. ಗಾಬರಿಗೊಂಡ ನಾಗರಾಜ್ ಪಕ್ಕದ ಮನೆಯವರಿಗೆ ಕರೆ ಮಾಡಿ ಕಳಿಸುವಷ್ಟರಲ್ಲಿ ಸರಸ್ವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪತ್ನಿಯ ಸಾವಿಗೆ ಕಾರಣವಾದ ಶ್ರೀನಿವಾಸ್, ಭವಾನಿ ಹಾಗೂ ಶಿಲ್ಪಾಳ ವಿರುದ್ಧ ನಾಗರಾಜ್ ಯಲಹಂಕ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಂಡ್ಯ:  ವಿ.ಸಿ ನಾಲೆಯಲ್ಲಿ ಈಜಲು ಹೋಗಿ ಐವರ ದುರ್ಮರಣ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News