ಬೆಂಗಳೂರು: ಫೇಸ್ ಬುಕ್ ನಲ್ಲಿ ಚೆಂದ ಚೆಂದದ ಹುಡುಗಿಯರು ಸಿಕ್ರು ಅಂತ ಸ್ನೇಹ ಬೆಳೆಸೋಕೆ ಮುಂಚೆ ಕೊಂಚ ಜೋಕೆ. ಫೇಸ್ಬುಕ್ ಅಲ್ಲಿ ಫ್ರೆಂಡ್, ಲವ್ ಅಂತ ನಂಬಿಕೊಂಡ್ರೆ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ.ಇಲ್ಲೊಬ್ಬ ವ್ಯಕ್ತಿಯ ಕಥೆ ಅದೇ ಆಗಿದೆ.
ಫೇಸ್ಬುಕ್ನಿಂದಾದ ಮಹಿಳೆ ಜತೆಗಿನ ಪರಿಚಯಕ್ಕೆ 35 ಲಕ್ಷ ಬೆಲೆ ತೆತ್ತಿದ್ದಾರೆ.ಬೆಂಗಳೂರಿನ ನಿವಾಸಿಯಾಗಿರುವ 48 ವರ್ಷದ ವಿನ್ಸೆಂಟ್ ಎಂಬುವರು ಬಜಾಜ್ ಫೈನಾನ್ಸ್ ಯೂನಿಟ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.ಫೇಸ್ಬುಕ್ನಲ್ಲಿ ಪರಿಚಯವಾದ ನ್ಯಾನ್ಸಿ ವಿಲಿಯಂ ಎಂಬ ವಿದೇಶಿ ಮಹಿಳೆ ಇವರಿಂದ 35 ಲಕ್ಷ ಪಡೆದು ವಂಚನೆ ಮಾಡಿದ್ದಾಳೆ.
ನ್ಯಾನ್ಸಿ ವಿಲಿಯಂ ಫೇಸ್ಬುಕ್ನಲ್ಲಿ ಮೊದಲಿಗೆ ವಿನ್ಸೆಂಟ್ಗೆ ಫ್ರೆಂಡ್ ರಿಕ್ವೆಸ್ ಕಳಿಸಿದ್ದಾಳೆ.ನಂತ್ರ ತಾನು ಇಂಗ್ಲೆಂಡಿನವಳು ಎಂದು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿದ್ದಾಳೆ.ಈ ಸ್ನೇಹ ಫೋನ್ ನಂಬರ್ ಎಕ್ಸ್ಚೇಂಜ್ ಮಾಡಿಕೊಳ್ಳುವಲ್ಲಿವರೆಗೂ ಹೋಗಿದೆ. ನಂತ್ರ ಇಬ್ಬರ ನಡುವೆ ವಾಟ್ಸ್ಆ್ಯಪ್ನಲ್ಲಿ ಚಾಟಿಂಗ್, ಕಾಲಿಂಗ್ ಎಲ್ಲ ನಡೆಯುತ್ತೆ. ಹೀಗೆ ಬೆಳೆದ ಸ್ನೇಹ ಮತ್ತಷ್ಟು ಗಾಢವಾಗಿ ಒಟ್ಟಿಗೆ ಸೇರಿ ಬ್ಯುಸಿನೆಸ್ ಆರಂಭಿಸೋಣ ಅಂತ ಡಿಸ್ಕಸ್ ಆಗಿ ಇಂಗ್ಲೆಂಡ್ನಿಂದ ಭಾರತಕ್ಕೆ ಬಂದು ಜ್ಯುವೆಲ್ಲರಿ ಬ್ಯಸಿನೆಸ್ ಮಾಡೋದಾಗಿ ನಂಬಿಸಿ ಹಣ ಹೂಡಿಕೆ ಮಾಡುವಂತೆ ಕೇಳಿದ್ದಾಳೆ. ವಿದೇಶದಲ್ಲಿ ಜ್ಯುವೆಲರಿ ಡೀಲರ್ ಆಗಿರುವ ನ್ಯಾನ್ಸಿ ಮಾತಿಗೆ ಮರುಳಾದ ವಿನ್ಸೆಂಟ್ ಹಂತ ಹಂತವಾಗಿ 35 ಲಕ್ಷ ಕೊಟ್ಟು ಕೈ ಸುಟ್ಟುಕೊಂಡಿದ್ದಾನೆ. ಅತ್ತ ಹಣ ಅಕೌಂಟ್ ಗೆ ಬರ್ತಿದ್ದಂತೆ ಫೇಸ್ ಬುಕ್ ಖಾತೆ ಡಿಲೀಟ್ ಮಾಡಿ ಲೇಡಿ ನಾಪತ್ತೆಯಾಗಿದ್ದಾಳೆ.
ಮಹಿಳೆಯ ಬಣ್ಣದ ಮಾತಿಗೆ ಮರುಳಾಗಿದ್ದ ವಿನ್ಸೆಂಟ್ ಈಗ ವಂಚಕಿಯ ವಿರುದ್ಧ ಪೂರ್ವ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೂರ್ವ ವಿಭಾಗದ ಸೆನ್ ಪೊಲೀಸರು ಆರೋಪಿ ನ್ಯಾನ್ಸಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.