ಮನೆ ಗೋಡೆ ಕೊರೆದು ಅಕ್ರಮ ಮದ್ಯ ಸಂಗ್ರಹ: ದಾಳಿ ವೇಳೆ ಅಕ್ರಮ ಬಯಲು

Illegal Liquor Storage: ಮನೆಯಲ್ಲೇ ಆಕ್ರಮವಾಗಿ ಮದ್ಯ ಸಂಗ್ರಹಿಸುತ್ತಿದ್ದ ಆರೋಪಿ ಮನೆ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

Written by - Yashaswini V | Last Updated : Sep 18, 2024, 03:21 PM IST
  • ಅಕ್ರಮವಾಗಿ ಮದ್ಯ ಮಾರಾಟ
  • ಖಚಿತ ಮಾಹಿತಿ ಮೇರೆಗೆ ಮನೆ ಮೇಲೆ ದಾಳಿ
  • ಅಬಕಾರಿ ಪೊಲೀಸರಿಂದ ವ್ಯಕ್ತಿ ಬಂಧನ
ಮನೆ ಗೋಡೆ ಕೊರೆದು ಅಕ್ರಮ ಮದ್ಯ ಸಂಗ್ರಹ:  ದಾಳಿ ವೇಳೆ ಅಕ್ರಮ ಬಯಲು title=

Illegal Liquor Storage: ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಅಬಕಾರಿ ಸಿಬ್ಬಂದಿ ದಾಳಿ ನಡೆಸಿ ಅಕ್ರಮ ಮದ್ಯ ವಶಕ್ಕೆ ಪಡೆದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ನಿಟ್ರೆ ಗ್ರಾಮದಲ್ಲಿ ನಡೆದಿದೆ.

ನಿಟ್ರೆ ಗ್ರಾಮದ ಮಂಜು ಎಂಬಾತ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿ. ಅಕ್ರಮವಾಗಿ ಈತ ಮದ್ಯ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿದ ವೇಳೆ ಮನೆಯಲ್ಲೇ ಈತ ಮದ್ಯ ಶೇಖರಣೆ ಮಾಡಲು ಗೋಡೆ ಕೊರೆದು ರಹಸ್ಯ ಚೇಂಬರ್ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.

ಇದನ್ನೂ ಓದಿ- ಯುವತಿಯರೇ ಸ್ನೇಹಿತರೊಟ್ಟಿಗೆ ನಿಮ್ಮ ಸಿಕ್ರೇಟ್ ಹಂಚಿಕೊಳ್ಳುವ ಮುನ್ನ ಎಚ್ಚರ: ನಿಮಗೂ‌ ಈ ರೀತಿ ಆಗಬಹುದು..!?

8 ಲೀ. ಮದ್ಯ, 5 ಲೀ ಬಿಯರ್ ವಶಪಡಿಸಿಕೊಂಡು ಆರೋಪಿ ಮಂಜು ಎಂಬಾತನನ್ನು ಅಬಕಾರಿ ಸಿಬ್ಬಂದಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ- ಇಳಿ ವಯಸ್ಸಿನಲ್ಲಿ ಗಾರೆ ಕೆಲಸ, ಇಬ್ಬರು ಹೆಣ್ಣು ಮಕ್ಕಳನ್ನು ಓದಿಸುವ ಛಲ..! ಸಹಾಯ ಮಾಡಲು ಬಂದು ವೃದ್ಧ ಕೂಡಿಟ್ಟಿದ್ದ ಹಣ ದೋಚಿದ ಖದೀಮರು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News