ನಕ್ಷತ್ರ ಆಮೆ ಸಾಗಾಟ ಮಾಡುತ್ತಿದ್ದವರ ಬಂಧನ: ಅಳಿವಿನಂಚಿನ ಜೀವಿಗಳ ರಕ್ಷಣೆ

ಹನೂರು ತಾಲೂಕಿನ ಗುಂಡಿಮಾಳ ಗ್ರಾಮದ ಪ್ರಕಾಶ್( 38) ಮಳವಳ್ಳಿ ತಾಲೂಕಿನ ಮಾಗನೂರು ಗ್ರಾಮದ ನಾಗೇಂದ್ರಸ್ವಾಮಿ(45) ಮಳವಳ್ಳಿ ತಾಲೂಕಿನ ರಾಗಿಭೋಮ್ಮನಹಳ್ಳಿ ನಾಗರಾಜು(54) ಎಂಬವರು ಬಂಧಿತ ಆರೋಪಿಗಳು.

Written by - Yashaswini V | Last Updated : Sep 12, 2024, 03:28 PM IST
  • ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಗಳು
  • ನಕ್ಷತ್ರ ಆಮೆಗಳನ್ನು ಆಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪಿಗಳು
  • ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಬಂಧನ
ನಕ್ಷತ್ರ ಆಮೆ ಸಾಗಾಟ ಮಾಡುತ್ತಿದ್ದವರ ಬಂಧನ: ಅಳಿವಿನಂಚಿನ ಜೀವಿಗಳ ರಕ್ಷಣೆ title=

ಚಾಮರಾಜನಗರ : ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಕೊಳ್ಳೇಗಾಲ ಸಿ.ಐ.ಡಿ. ಪೊಲೀಸ್‌ ಅರಣ್ಯ ಸಂಚಾರಿ ದಳ ಬಂಧಿಸಿದೆ.

ಹನೂರು ತಾಲೂಕಿನ ಗುಂಡಿಮಾಳ ಗ್ರಾಮದ ಪ್ರಕಾಶ್( 38) ಮಳವಳ್ಳಿ ತಾಲೂಕಿನ ಮಾಗನೂರು ಗ್ರಾಮದ ನಾಗೇಂದ್ರಸ್ವಾಮಿ(45)
ಮಳವಳ್ಳಿ ತಾಲೂಕಿನ ರಾಗಿಭೋಮ್ಮನಹಳ್ಳಿ ನಾಗರಾಜು(54) ಎಂಬವರು ಬಂಧಿತ ಆರೋಪಿಗಳು.

ಇದನ್ನೂ ಓದಿ- ಅಕ್ರಮ ಬಡ್ಡಿ ವ್ಯವಹಾರ: 25 ದಂಧೆಕೋರರ ಬಂಧನ

ಹನೂರು ತಾಲೂಕಿನ ಗುಂಡಿಮಾಳ ಮಾರ್ಗದ ಮೂಲಕ ಮಾರಾಟ  ಮಾಡುವ ಉದ್ದೇಶದಿಂದ ನಕ್ಷತ್ರ ಆಮೆ (Star Tortoises) ರವಾನೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಹನೂರಿನ  ಹುಲುಸುಗುಡ್ಡೆಯ ಬಳಿ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.   

ಇದನ್ನೂ ಓದಿ- ಯುವತಿಯರೇ ಸ್ನೇಹಿತರೊಟ್ಟಿಗೆ ನಿಮ್ಮ ಸಿಕ್ರೇಟ್ ಹಂಚಿಕೊಳ್ಳುವ ಮುನ್ನ ಎಚ್ಚರ: ನಿಮಗೂ‌ ಈ ರೀತಿ ಆಗಬಹುದು..!?

ಬಂಧಿತ ಆರೋಪಿಗಳಿಂದ 1ಕೆಜಿ280 ಗ್ರಾಮ ತೂಕದ ಎರಡು ಜೀವಂತ ನಕ್ಷತ್ರ ಆಮೆ, ಟಾಟಾ ಇಂಡಿಕಾ ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News