ಗಡಿ ಜಿಲ್ಲೆಯಲ್ಲಿ ಅಕ್ರಮ ಕೊಡಗು ವೈನ್ ಮಾರಾಟ: 285 ಲೀ. ವೈನ್ ಜೊತೆ ವ್ಯಕ್ತಿ ಬಂಧನ

Illegal Liquor Sale: ಮೈಸೂರು-ಊಟಿ ರಸ್ತೆ ಹೆದ್ದಾರಿ ಹಾದುಹೋಗುವ ಗುಂಡ್ಲುಪೇಟೆ ರಸ್ತೆಯಲ್ಲಿ ಅಕ್ರಮವಾಗಿ ಕೊಡಗು ವೈನ್ ಮಾರಾಟ ಮಾಡಲಾಗುತ್ತಿತ್ತು ಎಂದು ವರದಿಯಾಗಿದೆ. 

Written by - Yashaswini V | Last Updated : Mar 18, 2024, 12:54 PM IST
  • ಅಕ್ರಮವಾಗಿ ಕೊಡಗು ವೈನ್ ಮಾರಾಟ
  • 285 ಲೀ. ವೈನ್ ಜೊತೆ ವ್ಯಕ್ತಿ ಬಂಧನ
  • ಬೇಗೂರು ನಿವಾಸಿ ದಿನೇಶ್ ನಾಯ್ಡು ಬಂಧಿತ ಆರೋಪಿ
ಗಡಿ ಜಿಲ್ಲೆಯಲ್ಲಿ ಅಕ್ರಮ ಕೊಡಗು ವೈನ್ ಮಾರಾಟ: 285 ಲೀ. ವೈನ್ ಜೊತೆ ವ್ಯಕ್ತಿ ಬಂಧನ  title=

Illegal Liquor Sale: ಗಡಿ ಜಿಲ್ಲೆ ಚಾಮರಾಜನಗರ ಭಾಗದಲ್ಲಿ ಅಕ್ರಮವಾಗಿ ಕೊಡಗು ವೈನ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಗುಂಡ್ಲುಪೇಟೆ ತಾಲೂಕಿ‌ನ ಬೇಗೂರು ನಿವಾಸಿ ದಿನೇಶ್ ನಾಯ್ಡು ಎಂದು ಗುರುತಿಸಲಾಗಿದೆ. 

ಮೈಸೂರು-ಊಟಿ ರಸ್ತೆ ಹೆದ್ದಾರಿ ಹಾದುಹೋಗುವ ಗುಂಡ್ಲುಪೇಟೆ ರಸ್ತೆಯಲ್ಲಿ ಅಕ್ರಮವಾಗಿ ಕೊಡಗು ವೈನ್ ಮಾರಾಟ ಮಾಡಲಾಗುತ್ತಿತ್ತು ಎಂದು ವರದಿಯಾಗಿದೆ. 

ಇದನ್ನೂ ಓದಿ- Online Fraud: ಹೆಣ್ಣಿನ ಆಸೆಗೆ ಬಿದ್ದು 95 ಲಕ್ಷ ಕಳೆದುಕೊಂಡ ಉದ್ಯಮಿ..!

ಆರೋಪಿ ದಿನೇಶ್ ನಾಯ್ಡು ಯಾವುದೇ ಪರವಾನಗಿ ಪಡೆಯದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳಿಗೆ ತೆರೆದು ಕೊಡಗು ವೈನ್ ಹಾಗೂ ಸಾಂಬಾರ  ಪದಾರ್ಥ ಮಾರಾಟ ಮಾಡುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಪೊಲೀಸರು  750 ಮಿಲೀ‌. ನ 380 ಬಾಟಲಿಗಳು ಒಟ್ಟು 285 ಲೀಟರ್ ವೈನ್ ( ಒಟ್ಟು ಮೌಲ್ಯ ₹ 304000 )  ವಶಕ್ಕೆ ಪಡೆದಿದ್ದಾರೆ. 

ಇದನ್ನೂ ಓದಿ- ಚಿನ್ನ ಖರೀದಿಸಿ ಫೇಕ್ ಪೇಮೆಂಟ್ : ಆನ್‌ಲೈನ್‌ನಲ್ಲಿ ಕರಾಮತ್ತು ತೋರಿದ್ದ ಜೋಡಿ ಅಂದರ್

ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಅಬಕಾರಿ ಪೊಲೀಸರ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News