ಕೋಲಾರ: ಆ ತಂದೆ ತನ್ನ ಸೋದರ ಸಂಬಂಧಿಯೊಬ್ಬರನ್ನು ಪ್ರೀತಿಸಿ ಮದುವೆಯಾಗ್ತೀನಿ ಎಂದಿದ್ದ ಅಪ್ರಾಪ್ತ ಮಗಳಿಗೆ ಬುದ್ದಿ ಹೇಳಿದ್ದ. ಬುದ್ದಿ ಕೇಳದೆ ಹೋದಾಗ ಬೇರೆ ಯುವಕನಿಗೆ ಕೊಟ್ಟು ಮದುವೆ ಮಾಡಿದ್ದ. ಆಗಲೂ ಮಾತು ಕೇಳದೆ ಹೋದಾಗ ಆ ತಂದೆ ಮರ್ಯಾದಗಂಜಿ ತನ್ನ ಮಗಳನ್ನೇ ಹೊಡೆದು ಕೊಂದಿದ್ದಾನೆ. ಅಷ್ಟಕ್ಕೂ ಆತ ಕೊಂದ ಮಗಳ ಮರ್ಡರ್ ಮಿಸ್ಟರಿ ಬಯಲಾಗಲು 8 ತಿಂಗಳೇ ಬೇಕಾಯ್ತು…
ಬೂದಿಯೊಳಗೆ ಶವದ ಅವಶೇಷಗಳನ್ನು ಹುಡುಕುತ್ತಿರುವ FSL ಟೀಂ, ಮತ್ತೊಂದೆಡೆ ಆರೋಪಿಯನ್ನು ಬಂಧಿಸಿ ಸ್ಥಳ ಪರಿಶೀಲನೆ ನಡೆಸುತ್ತಿರುವ ಪೊಲೀಸರು, ಇನ್ನೊಂದೆಡೆ ಕುತೂಹಲದಿಂದ ವೀಕ್ಷಣೆ ಮಾಡುತ್ತಿರುವ ಜನರು ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮುಸ್ಟೂರು ಗ್ರಾಮದಲ್ಲಿ. ಹೌದು, ಮುಸ್ಟೂರು ಗ್ರಾಮದಲ್ಲಿ ಕಳೆದ 8 ತಿಂಗಳ ಹಿಂದೆ ತಂದೆಯೇ ಮಗಳನ್ನು ಹೊಡೆದು ಕೊಂದು ಬಳಿಕ ಶವವನ್ನು ಸುಟ್ಟು ಹಾಕಿದ್ದಾನೆ.
ಇದನ್ನೂ ಓದಿ: CM ಸಿದ್ದರಾಮಯ್ಯನವರ ವಿರುದ್ಧ ಮಾಜಿ ಶಾಸಕ ಡಾ. ಅನ್ನದಾನಿ ವಾಗ್ದಾಳಿ
ಅಷ್ಟಕ್ಕೂ ಆಗಿದ್ದೇನು ಅಂತಾ ನೋಡುವುದಾದರೆ ಮುಸ್ಟೂರು ಗ್ರಾಮಕ್ಕೆ ಹೊಂದಿಕೊಂಡಿರುವ ಮರವೆಮನೆ ಅನ್ನೋ ಕಾಲೋನಿಯಲ್ಲಿ ವಾಸವಿರುವ ರವಿ ಎಂಬುವನಿಗೆ 4 ಜನ ಮಕ್ಕಳು. ಈ ಪೈಕಿ ಒಬ್ಬಳು ಮಗಳಿಗೆ ಮದುವೆಯಾಗಿತ್ತು. 2ನೇ ಮಗಳು ಅರ್ಚಿತಾ ಇನ್ನು ಅಪ್ರಾಪ್ತೆಯಾಗಿದ್ದು, ದ್ವಿತೀಯ ಪಿಯುಸಿ ಓದುತ್ತಿದ್ದಳು. ಹೀಗಿರುವಾಗಲೇ ಮಗಳು ಅರ್ಚಿತಾ ತನ್ನ ಸೋದರ ಸಂಬಂಧಿ ಯುವಕನನ್ನು ಪ್ರೀತಿಸುತ್ತಿರುತ್ತಾಳೆ. ಈ ವೇಳೆ ತಂದೆ ರವಿ ಮಗಳಿಗೆ ಬುದ್ದಿಮಾತು ಹೇಳಿದ್ದ. ಆದರೆ ಆಕೆ ಕೇಳದೆ ಹೋದಾಗ ಕೋಲಾರ ತಾಲೂಕಿನ ಜೋಡಿಕೃಷ್ಣಾಪುರ ಗ್ರಾಮದ ಯುವಕನೊಬ್ಬನಿಗೆ ಕೊಟ್ಟು 2023ರ ಏಪ್ರಿಲ್ ತಿಂಗಳಲ್ಲಿ ಮದುವೆ ಮಾಡಿ ಮುಗಿಸಿದ್ದ.
ಮದುವೆಯಾದರೂ ಸಹ ಮಗಳು ಮಾತು ಕೇಳದೆ, ತನ್ನ ಪ್ರಿಯಕರನ ಜೊತೆಗೆ ಫೋನ್‍ನಲ್ಲಿ ಮಾತನಾಡುವುದು, ಗಂಡನೊಂದಿಗೆ ಸೇರದೆ ಹಟ ಮಾಡುವುದು ಮಾಡಿದ್ದಳಂತೆ. ಈ ಕಾರಣಕ್ಕೆ ‘ನಿನ್ನ ಮಗಳನ್ನು ಕರೆದುಕೊಂಡು ಹೋಗು’ ಎಂದು ಅಳಿಯ ಒತ್ತಾಯಿಸಿದ್ದಾನೆ. ಅದರಂತೆ ಮೇ 21ರಂದು ತನ್ನ ಮಗಳನ್ನು ಮನೆಗೆ ಕರೆತರಲು ತಂದೆ ಹೋಗುತ್ತಾನೆ. ವಾಪಸ್ ಕರೆತಂದ ಬಳಿಕ ತಂದೆ, ಮಗಳಿಂದ ತನ್ನ ಮರ್ಯಾದೆ ಹೋಗುತ್ತದೆ ಅಂತಾ ಭಾವಿಸಿ ಆಕೆಯನ್ನು ತೋಟದ ಮನೆಯಲ್ಲಿ ಹೊಡೆದು ಕೊಂದು ಹಾಕಿದ್ದಾನೆ.
ಇದನ್ನೂ ಓದಿ: ಕೋವಿಡ್ ಪಾಸಿಟಿವ್ ಬಂದವರಿಗೆ 7 ದಿನ ಹೋಮ್ ಐಸೊಲೇಷನ್ ಕಡ್ಡಾಯ
ನಂತರ ಅಂದು ರಾತ್ರಿಯೇ ಅಕೆಯ ಶವವನ್ನು ಸುಟ್ಟು ಹಾಕಿದ್ದಾನೆ. ನಂತರ ಮಗಳು ಕಾಣಿಯಾಗಿದ್ದಾಳೆ ಅಂತಾ ತಾನೇ ದೂರು ಕೊಟ್ಟು ಸುಮ್ಮನಾಗಿದ್ದ. ಬಳಿಕ ಕೋಲಾರ ಎಸ್ಪಿ ಕಚೇರಿಗೆ ಗ್ರಾಮದ ಯಾರೋ ಕೆಲವರು ದೂರು ನೀಡಿದ್ದಾರೆ. ತಂದೆಯೇ ಮಗಳನ್ನು ಕೊಂದು ಹಾಕಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನಿಖೆ ನಡೆಸುವಂತೆ ಹೇಳಿದ್ದಾರೆ. ಅದರಂತೆ ತನಿಖೆ ನಡೆಸಿದ ಪೊಲೀಸರಿಗೆ ತಂದೆಯೇ ಮಗಳನ್ನು ಕೊಂದು ಸುಟ್ಟು ಹಾಕಿರುವುದು 8 ತಿಂಗಳ ನಂತರ ತಿಳಿದುಬಂದಿದೆ.
ಪ್ರಕರಣ ಸಂಬಂಧ ಪೊಲೀಸರು ಮಗಳನ್ನು ಕೊಂದ ತಂದೆ ರವಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಈ ಹಿನ್ನೆಲೆ ನಂಗಲಿ ಪೊಲೀಸರು ಮತ್ತು ಎಫ್ಎಸ್ಎಲ್ ತಂಡ ತಹಶೀಲ್ದಾರ್ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದು, ಅರ್ಚಿತಾಳನ್ನು ಕೊಂದು ಸುಟ್ಟುಹಾಕಿರುವ ಸ್ಥಳದಲ್ಲಿ ಶವದ ಅವಶೇಷಗಳನ್ನು ಸಂಗ್ರಹಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ನಾರಾಯಣ್ ಸೇರಿದಂತೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.