ಕಾಮಗಾರಿ ನಡೆಸದೆ 118 ಕೋಟಿ ರೂ. ಗುಳುಂ: ಎಂಟು ಬಿಬಿಎಂಪಿ ಅಧಿಕಾರಿಗಳು ಸಸ್ಪೆಂಡ್

2019-20 ನೇ ಸಾಲಿನ ಕೆಆರ್ ಐಡಿಎಲ್ ಗೆ ವಹಿಸಲಾಗಿದ್ದ ಎಲ್ಲಾ ಕಾಮಗಾರಿ ಮಾಡದಿದ್ದರು ಬಿಲ್ ಪಾವತಿ ಆಗಿರುವ ಬಗ್ಗೆ ಸಂಸದ ಡಿಕೆ ಸುರೇಶ್ ಗಂಭೀರ ಆರೋಪ ಮಾಡಿದ್ದರು. ಈ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಡಿ.ಕೆ.ಸುರೇಶ್ ಸರಿಸುಮಾರು 250 ಕೋಟಿ ರೂ. ಅಕ್ರಮದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. 

Written by - Yashaswini V | Last Updated : Jun 16, 2023, 12:02 PM IST
  • ಕಾಮಗಾರಿ ನಡೆಸದೆ 118 ಕೋಟಿ ರೂ. ಭಾರೀ ಗೋಲ್‌ಮಾಲ್‌
  • ಲೋಕಾಯುಕ್ತ ತನಿಖೆಯ ವೇಳೆ ಅಕ್ರಮ ಸಾಬೀತು
  • ಬಿಬಿಎಂಪಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಆದೇಶ
ಕಾಮಗಾರಿ ನಡೆಸದೆ 118 ಕೋಟಿ ರೂ. ಗುಳುಂ: ಎಂಟು ಬಿಬಿಎಂಪಿ ಅಧಿಕಾರಿಗಳು ಸಸ್ಪೆಂಡ್  title=

BBMP Officers Suspend: ಕಾಮಗಾರಿ ನಡೆಸದೆ 118 ಕೋಟಿ ರೂ. ಭಾರೀ ಗೋಲ್‌ಮಾಲ್‌ ನಡೆದಿದ್ದು, ಈ ಸಂಬಂಧ ಬಿಬಿಎಂಪಿಯ ಎಂಟು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ. ಲೋಕಾಯುಕ್ತ ತನಿಖೆಯ ವೇಳೆ ಅಕ್ರಮ ಸಾಬೀತಾಗಿರುವ ಹಿನ್ನಲೆಯಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.  

ಏನಿದು ಪ್ರಕರಣ?
2019-20 ನೇ ಸಾಲಿನ ಕೆಆರ್ ಐಡಿಎಲ್ ಗೆ ವಹಿಸಲಾಗಿದ್ದ ಎಲ್ಲಾ ಕಾಮಗಾರಿ ಮಾಡದಿದ್ದರು ಬಿಲ್ ಪಾವತಿ ಆಗಿರುವ ಬಗ್ಗೆ ಸಂಸದ ಡಿಕೆ ಸುರೇಶ್ ಗಂಭೀರ ಆರೋಪ ಮಾಡಿದ್ದರು. ಈ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಡಿ.ಕೆ.ಸುರೇಶ್ ಸರಿಸುಮಾರು 250 ಕೋಟಿ ರೂ. ಅಕ್ರಮದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ದೂರಿನ ಅನ್ವಯ ಲೋಕಾಯುಕ್ತ ಪ್ರಾಥಮಿಕ ತನಿಖೆ ನಡೆಸಿತ್ತು.  ಈ ವೇಳೆ118 ಕೋಟಿ ರೂ ಸರ್ಕಾರದ ಹಣ ನಕಲಿ ಬಿಲ್ ಗೆ ಪಾವತಿ ಆಗಿರೋದು ಬೆಳಕಿಗೆ ಬಂದಿತ್ತು.

ಇದನ್ನೂ ಓದಿ- Gruha Jyoti ಯೋಜನೆ ಬಗ್ಗೆ ನಿಮಗೂ ಈ ಗೊಂದಲಗಳಿವೆಯೇ? ಇಲ್ಲಿದೆ ಬೆಸ್ಕಾಂ ಸ್ಪಷ್ಟನೆ

ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳಿಗೆ, ನಾಗರಾಭಿವೃದ್ಧಿ ಇಲಾಖೆಯ 8 ಅಧಿಕಾರಿಗಳು ವಿವಿಧ ಕಾಮಗಾರಿಗಳ ಹೆಸರಿನಲ್ಲಿ 118 ಕೋಟಿ ರೂ. ಗುಳುಂ ಮಾಡಿರುವುದು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಬಿಬಿಎಂಪಿಯ ಅಧಿಕಾರಿಗಳನ್ನು  ಅಮಾನತ್ತು ಮಾಡಲಾಗಿದೆ.  

ಇದನ್ನೂ ಓದಿ- ರಾಜ್ಯದಲ್ಲಿ ಮಳೆ ಹಿನ್ನಲೆ ಗಗನಮುಖಿಯಾದ ತರಕಾರಿ ಬೆಲೆ

ಅಮಾನತಾದ ಅಧಿಕಾರಿಗಳು
1) ದೊಡ್ಡಯ್ಯ, ಮುಖ್ಯ ಇಂಜಿನಿಯರ್ ಟಿವಿಸಿಸಿ ವಿಭಾಗ
2) ಸತೀಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಟಿವಿಸಿಸಿ ವಿಭಾಗ
3) ವಿಜಯ್ ಕುಮಾರ್, ಮುಖ್ಯ ಇಂಜಿನಿಯರ್ ರಾಜರಾಜೇಶ್ವರಿ ನಗರ ವಲಯ.
4) ಶಿಲ್ಪಾ, ಸಹಾಯಕ ಇಂಜಿನಿಯರ್, ರಾಜರಾಜೇಶ್ವರಿ ನಗರ ವಲಯ
5) ಮೋಹನ್ ಮುಖ್ಯ ಇಂಜಿನಿಯರ್, ಯೋಜನಾ ವಿಭಾಗ ಆರ್‌ಆರ್ ನಗರ ವಲಯ
6) ಭಾರತಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಯೋಜನಾ ವಿಭಾಗ ಆರ್‌ಆರ್ ನಗರ ವಲಯ
7) ಬಸವರಾಜ್, ಕಾರ್ಯಪಾಲಕ ಇಂಜಿನಿಯರ್ ಆರ್‌ಆರ್ ನಗರ ಉಪ ವಲಯ
8) ಸಿದ್ದಯ್ಯ, ಸಹಾಯಕ ಇಂಜಿನಿಯರ್, ವಾರ್ಡ್ 129 ಮತ್ತು 160.
9) ಉಮೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಲಗ್ಗೆರೆ.
10) ಅನಿತಾ, ಸೂಪರಿಂಟೆಂಡೆಂಟ್, ಕ್ಯಾರಿಯರ್, ಆರ್‌ಆರ್ ನಗರ ವಲಯ.
11) ಗೂಳಿಗೌಡ, ಡೆಪ್ಯುಟಿ ಮ್ಯಾನೇಜರ್ ಆರ್‌ಆರ್ ನಗರ ವಲಯ.
11 ಮಂದಿ ಅಧಿಕಾರಿಗಳನ್ನ ಅಮಾನತುಗೊಳಿಸಿ ಆದೇಶಿಸಿದ ನಗರಾಭಿವೃದ್ಧಿ ಇಲಾಖೆ
ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯಿಂದ ಅಮಾನತು ಆದೇಶ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News