ಹಾಸನ: ಆಸ್ತಿ ಕಬಳಿಸುವ ಉದ್ದೇಶದಿಂದ ವೃದ್ದೆ ಬದುಕಿರುವಾಗಲೆ ಅವರ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಪಡೆದಿರುವ ಘಟನೆ ಬೇಲೂರು ತಾಲೂಕಿನ ಮುದಿಗೆರೆ ಗ್ರಾಮದಲ್ಲಿ ನಡೆದಿದೆ.
ಮುದಿಗೆರೆ ಗ್ರಾಮದ ದಿವಂಗತ ಹುಲೀಗೌಡ ಅವರ ಪತ್ನಿ ಪಾರ್ವತಮ್ಮಗೆ ಸೇರಿದ 32 ಗುಂಟೆ ಜಮೀನು ಪಡೆದುಕೋಳ್ಳುವುದಕೋಸ್ಕರ ಸುಳ್ಳು ದಾಖಲೆಯನ್ನು ಸೃಷ್ಟಿಮಾಡಿ ಅವರ ಸಂಬಂಧಿಕರೊಬ್ಬರ ಮಗ ವೃದ್ದೆ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಪಡೆದಿದ್ದಾನೆ. ಇವನು ಬೇಲೂರು ತಹಸಿಲ್ದಾರ್ ಕಚೇರಿಯಿಂದಲೇ ಮರಣ ಪತ್ರ ಪಡೆದಿದ್ದಾನೆ.
ಇದನ್ನೂ ಓದಿ- ಪಿಎಸ್ಐ, ಬಿಟ್ ಕಾಯಿನ್, ಟೆಂಡರ್ ಹಗರಣಗಳಿಗೆ ಮರುಜೀವ
2020 ಏಪ್ರಿಲ್ 10 ಪಾರ್ವತಮ್ಮ ಮೃತಪಟ್ಟಿದ್ದಾರೆ ಎಂದು ಏಪ್ರಿಲ್ 20 ರಂದು ನೋಂದಣಿ ಮಾಡಿಸಿದ್ದಾರೆ. ನಂತರ ಅಕ್ಟೋಬರ್ 14 ರಂದು ಪಾರ್ವತಮ್ಮ ಹೆಸರಿಲ್ಲಿ ಬೇಲೂರು ತಹಸಿಲ್ದಾರ್ ಕಚೇರಿಯಿಂದಲೇ ಮರಣ ದೃಢೀಕರಣ ಪತ್ರವನ್ನು ಪಡೆದ ಜೀವನಾಂಶಕ್ಕೆಂದು ಇಟ್ಟುಕೊಂಡಿದ್ದ 32 ಗುಂಟೆ ಜಮೀನನ್ನು ತನ್ನದಾಗಿಸಿಕೊಳ್ಳಲು ಮುಂದಾಗಿದ್ದಾನೆ.
ಇದನ್ನೂ ಓದಿ- ಅಂಬೇಡ್ಕರ್ ಅವಹೇಳನ ಆರೋಪ: ತನಿಖೆಗೆ ಸಮಿತಿ ರಚಿಸಿದ ಸರ್ಕಾರ
ಪಾರ್ವತಮ್ಮ ಬೇರೆ ಗ್ರಾಮದಲ್ಲಿ ಬೇಕರಿ ವ್ಯಾಪಾರ ಮಾಡಿಕೊಂಡಿದ್ದರು, ಕಳೆದ ಹತ್ತು ದಿನಗಳ ಹಿಂದೆಯಷ್ಟೇ ಫೇಕ್ ಸರ್ಟಿಫಿಕೇಟ್ ಮಾಡಿಕೊಂಡಿರುವ ಬಗ್ಗೆ ಪಾರ್ವತಮ್ಮ ಕುಟುಂಬದವರಿಗೆ ತಿಳಿದು ಬಂದಿದ್ದು, ನಂತರ ಬೇಲೂರು ತಹಸಿಲ್ದಾರ್ ಕಚೇರಿಗೆ ಬಂದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ವತಮ್ಮ ಅವರ ಪುತ್ರ ಮಲ್ಲೇಶ್ ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಸೂಕ್ತ ಕ್ರಮಕ್ಕೆ ಆಗ್ರಹ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.