ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವ ದೇಹದಾರ್ಢ್ಯ ಪಟುವಿನ ಶವ ಪತ್ತೆಯಾಗಿದೆ. ಕೆ.ಆರ್.ಪುರ ಬಳಿಯ ಹೀರಂಡಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಶ್ರೀನಾಥ್ ಮೃತ ದೇಹದಾರ್ಢ್ಯ ಪಟುವಾಗಿದ್ದಾರೆ.
ಖಾಸಗಿ ಕಾಲೇಜಿನಲ್ಲಿ ಡಿ ಫಾರ್ಮಾ ಓದುತ್ತಿದ್ದ ಶ್ರೀನಾಥ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವ್ಯಾಸಂಗದ ಜೊತೆಗೆ ದೇಹದಾರ್ಢ್ಯ ಸ್ಪರ್ಧೆಗಳಲ್ಲೂ ಭಾಗಿಯಾಗುತ್ತಿದ್ದ ಶ್ರೀನಾಥ್ ಇದ್ದಕ್ಕಿದ್ದಂತೆಯೇ ಸಾವನ್ನಪ್ಪಿರುವುದು ಪೋಷಕರಿಗೆ ಸಿಡಿಲು ಬಡಿದಂತಾಗಿದೆ.
ಇದನ್ನೂ ಓದಿ: ಮತ ಬೇಕಾದಾಗ ಮನಃಸಾಕ್ಷಿ ಮಾರಿಕೊಳ್ಳುವುದು ಶೋಭೆಯಲ್ಲ: ಕೃಷ್ಣಭೈರೇಗೌಡಗೆ ಎಚ್ಡಿಕೆ ತಿರುಗೇಟು
ಮಂಗಳವಾರ ಶ್ರೀನಾಥ್ ವಾಸವಿದ್ದ ಕೊಠಡಿಯನ್ನು ಪರಿಶೀಲಿಸಿದಾಗ, ಯುವ ಬಾಡಿಬಿಲ್ಡರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರೆ. ಮೃತ ಶ್ರೀನಾಥ್ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ನಿವಾಸಿ ಎಂದು ತಿಳಿದು ಬಂದಿದೆ. ತಮ್ಮ ಮಗನ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆ ಸಂಬಂಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಶ್ರೀನಾಥ್ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸ್ನೇಹಿತ ಕಾಲೇಜಿಗೆ ತೆರಳಿದಾಗ ಮನೆಯಲ್ಲಿ ಒಬ್ಬನೇ ಇದ್ದ ಶ್ರೀನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಇದನ್ನೂ ಓದಿ: BMRCL ನಿರ್ಲಕ್ಷ್ಯ: ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವು
ತಂದೆಯಿಂದ 1 ತಿಂಗಳ ಹಿಂದಷ್ಟೇ ಅವಲಹಳ್ಳಿ ಬಳಿ ಜಿಮ್ ಓಪನ್ ಮಾಡಲು 3 ಲಕ್ಷ ರೂ. ಹಣವನ್ನು ಶ್ರೀನಾಥ್ ಪಡೆದುಕೊಂಡಿದ್ದನಂತೆ. 5 ವರ್ಷದ ಹಿಂದೆ ಬೆಂಗಳೂರಿಗೆ ಓದಲು ಬಂದಿದ್ದ ಶ್ರೀನಾಥ್ ಗೆಳೆಯನ ಜೊತೆ ವಾಸವಾಗಿದ್ದ. ಇನ್ನೊಂದು ವರ್ಷ ಆಗಿದ್ರೆ ಡಿ ಫಾರ್ಮಾ ಸಹ ಮುಗಿಯುತ್ತಿತ್ತು ಎಂದು ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.