ಠಾಣೆಗೆ ಬಂದ‌‌ ಮಹಿಳೆ ಮೈಕೈ ಮುಟ್ಟಿ PSI ಅನುಚಿತ ವರ್ತನೆ ಆರೋಪ: ಟ್ವಿಟರ್‌ನಲ್ಲಿ ಮಹಿಳೆ ದೂರು

Bengaluru Crime News: ಸಬ್ ಇನ್ಸ್‌ಪೆಕ್ಟರ್ ಮಂಜುನಾಥ ಸ್ವಾಮಿ ವಿರುದ್ಧ ಇಂತಹದೊಂದು ಗಂಭೀರ ಆರೋಪ ಕೇಳಿ ಬಂದಿದೆ. ಶೀತಲ್​ ಸುಸಾನ ಅಬ್ರಹಾಂ ಎನ್ನುವ ಮಹಿಳೆ ಕಮಿಷನರ್‍ಗೆ ಟ್ಯಾಗ್ ಮಾಡಿ ಸರಣಿ ಟ್ವೀಟ್ ಮಾಡಿದ್ದಾರೆ.

Written by - VISHWANATH HARIHARA | Edited by - Puttaraj K Alur | Last Updated : Apr 11, 2023, 10:45 AM IST
  • ದೂರು ನೀಡಲು ಬಂದ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪ
  • ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯ ಸಬ್​ ಇನ್ಸ್​ಪೆಕ್ಟರ್ ವಿರುದ್ಧ ಗಂಭೀರ ಆರೋಪ
  • ಮಹಿಳೆಯ ಅನುಮತಿ ಇಲ್ಲದೆ ಎಲ್ಲೆಂದರಲ್ಲಿ ಮೈ-ಕೈ ಮುಟ್ಟಿ ಅಸಭ್ಯವಾಗಿ ವರ್ತನೆ
ಠಾಣೆಗೆ ಬಂದ‌‌ ಮಹಿಳೆ ಮೈಕೈ ಮುಟ್ಟಿ PSI ಅನುಚಿತ ವರ್ತನೆ ಆರೋಪ: ಟ್ವಿಟರ್‌ನಲ್ಲಿ ಮಹಿಳೆ ದೂರು title=
PSI ವಿರುದ್ಧ ಅನುಚಿತ ವರ್ತನೆ ಆರೋಪ!

ಬೆಂಗಳೂರು: ಹೇಳಿಕೆ ಪಡೆಯುವ ನೆಪದಲ್ಲಿ ಮೈ ಕೈ ಮುಟ್ಟಿ ಅನುಚಿತ ವರ್ತನೆ ತೋರಿದ್ದಾರೆಂದು ಸುದ್ದಗುಂಟೆಪಾಳ್ಯ ಪೊಲೀಸ್ ಸಬ್ ಇನ್ಸ್​ಪೆಕ್ಟರ್​ ವಿರುದ್ಧ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

ಸಬ್ ಇನ್ಸ್‌ಪೆಕ್ಟರ್ ಮಂಜುನಾಥ ಸ್ವಾಮಿ ವಿರುದ್ಧ ಇಂತಹದೊಂದು ಗಂಭೀರ ಆರೋಪ ಕೇಳಿ ಬಂದಿದೆ. ಶೀತಲ್​ ಸುಸಾನ ಅಬ್ರಹಾಂ ಎನ್ನುವ ಮಹಿಳೆ ಕಮಿಷನರ್‍ಗೆ ಟ್ಯಾಗ್ ಮಾಡಿ ಸರಣಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಚುನಾವಣಾ ಕರ್ತವ್ಯ ಲೋಪ; ಹೆಸ್ಕಾಂ ಅಭಿಯಂತರರನ್ನು ಅಮಾನತ್ತುಗೊಳಿಸಿದ ಜಿಲ್ಲಾಧಿಕಾರಿ

ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಟ್ವೀಟ್ ಮಾಡಿ ನಂತರ ವಾಟ್ಸಾಪ್ ಮೆಸೇಜ್ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.‌

ಏಪ್ರಿಲ್ 8ರಂದು ನನ್ನ ಸಹೋದರ ಸ್ನೇಹಿತನ ವರದಕ್ಷಿಣೆ ಪ್ರಕರಣದಲ್ಲಿ ಸಾಕ್ಷಿ ಹೇಳಿಕೆ ನೀಡಲು ಸ್ಟೇಷನ್​ಗೆ ಹೋಗಿದ್ದೆ. ಈ ವೇಳೆ ಸಬ್​ ಇನ್ಸ್​ ಪೆಕ್ಟರ್ ಮಂಜುನಾಥ ಸ್ವಾಮಿ ಅಸಭ್ಯ ವರ್ತನೆ ಮಾಡಿದ್ದಾರೆ. ಮನೆಗೆ ಹೋಗಿ ಕರೆ ಮಾಡಿ ನಿಮ್ಮ ಪೋಟೊಗಳನ್ನು ಕಳುಹಿಸಿ ಎಂದಿದ್ದಾರೆ ಎಂದು ಮಹಿಳೆ ಆರೋಪಿಸಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Karnataka Election 2023: ʻಗಜ ಪ್ರಸವʼದಂತಾದ ಬಿಜೆಪಿ ಟಿಕೆಟ್‌ ಹಂಚಿಕೆ! ಇಂದಾದರೂ ಹೊರಬರುತ್ತಾ ಮೊದಲ ಪಟ್ಟಿ?

ಸದ್ಯ ಈ ಟ್ವಿಟ್‍ಗೆ ಸಾಕಷ್ಟು ರೀಟ್ವಿಟ್‍ಗಳು ಬಂದಿದ್ದು, PSI ತಪ್ಪು‌ ಮಾಡಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಇದೀಗ ಮಹಿಳೆಯ ಟ್ವೀಟ್​ ದೂರಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸರು ಮಾಹಿತಿಯನ್ನು ಕೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News