ಕಾರು, ರಟ್ಟಿನ ಬಾಕ್ಸ್ & ಬೆಡ್‌ಗಳಲ್ಲಿ 8 ಕೋಟಿ ನಗದು ಪತ್ತೆ; ನಾಲ್ವರ ಬಂಧನ!

ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿರುವ ಉದ್ಯಮಿಗಳ ಅಪಾರ್ಟ್‌ಮೆಂಟ್‌ ಮತ್ತು ಕಾರಿನಲ್ಲಿ ಸುಮಾರು 8 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಕೋಲ್ಕತ್ತಾ ಪೊಲೀಸರು ತಿಳಿಸಿದ್ದಾರೆ

Written by - Puttaraj K Alur | Last Updated : Oct 22, 2022, 06:32 AM IST
  • ಮನೆ, ಕಾರು, ರಟ್ಟಿನ ಬಾಕ್ಸ್ ಮತ್ತು ಬೆಡ್‍ಗಳಲ್ಲಿ ಬರೋಬ್ಬರಿ 8 ಕೋಟಿ ರೂ. ನಗದು ವಶ
  • ಪಶ್ಚಿಮ ಬಂಗಾಳದ ಹೌರಾದಲ್ಲಿ ಇಬ್ಬರು ಉದ್ಯಮಿಗಳು ಸೇರಿ ನಾಲ್ವರನ್ನು ಬಂಧಿಸಿದ ಪೊಲೀಸರು
  • ಉದ್ಯಮಿಗಳ ಬ್ಯಾಂಕ್ ಖಾತೆಯಿಂದ ಹೆಚ್ಚಿನ ಹಣ ವಹಿವಾಟು ಹಿನ್ನೆಲೆ ಪೊಲೀಸರಿಂದ ದಾಳಿ
ಕಾರು, ರಟ್ಟಿನ ಬಾಕ್ಸ್ & ಬೆಡ್‌ಗಳಲ್ಲಿ 8 ಕೋಟಿ ನಗದು ಪತ್ತೆ; ನಾಲ್ವರ ಬಂಧನ!  title=
ಬರೋಬ್ಬರಿ 8 ಕೋಟಿ ರೂ. ನಗದು ವಶ!

ಕೋಲ್ಕತಾ: ಮನೆ, ಕಾರು, ರಟ್ಟಿನ ಬಾಕ್ಸ್ ಮತ್ತು ಬೆಡ್‍ಗಳಲ್ಲಿ ಬರೋಬ್ಬರಿ 8 ಕೋಟಿ ರೂ. ನಗದು ವಶಪಡಿಸಿಕೊಡಿರುವ ಕೋಲ್ಕತ್ತಾ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಹೌರಾದಲ್ಲಿ ಇಬ್ಬರು ಸಹೋದರರಿಗೆ ಸೇರಿದ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು 8 ಕೋಟಿ ರೂ. ವಶಪಡಿಸಿಕೊಳ್ಳಲಾಗಿದ್ದು, ಸೈಲೇಶ್ ಪಾಂಡೆ, ಅರವಿಂದ್ ಪಾಂಡೆ, ರೋಹಿತ್ ಪಾಂಡೆ ಮತ್ತು ಒಬ್ಬ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ

ಅಪಾರ್ಟ್‍ಮೆಂಟ್‍ವೊಂದರ ಬೆಡ್ ಕೆಳಗೆ ಇಟ್ಟಿದ್ದ ರಟ್ಟಿನ ಬಾಕ್ಸ್ ಮತ್ತು ಹೊರಗಡೆ ನಿಲ್ಲಿಸಿದ್ದ ಕಾರಿನಲ್ಲಿ ಅಡಗಿಸಿಟ್ಟಿದ್ದ ದೊಡ್ಡ ಮೊತ್ತದ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಂಧಿತ ನಾಲ್ವರು ಆರೋಪಿಗಳನ್ನು ಶನಿವಾರ(ಅ.22) ಮಧ್ಯಾಹ್ನ ಕೋರ್ಟ್‍ಗೆ ಹಾಜರುಪಡಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ನಾಳೆ ರೂ 80,000 ಮೌಲ್ಯದ ಓಲಾ ಎಲೆಕ್ಟ್ರಿಕ್ ಇ-ಸ್ಕೂಟರ್ ಬಿಡುಗಡೆ

ಸರ್ಕಾರಿ ಅಧಿಕಾರಿಗಳು ಫ್ಲಾಟ್‌ಗೆ ಪ್ರವೇಶಿಸಿದಾಗ ರಟ್ಟಿನ ಬಾಕ್ಸ್ ಮತ್ತು ಬೆಡ್‍ಗಳ ಕೆಳಗೆ ಇಟ್ಟಿದ್ದ ಅಪಾರ ಪ್ರಮಾಣದ ಹಣವನ್ನು ಪತ್ತೆ ಹಚ್ಚಿದ್ದಾರೆ. ಉದ್ಯಮಿಗಳಾದ ಸೈಲೇಶ್ ಪಾಂಡೆ ಮತ್ತು ಅರವಿಂದ್ ಪಾಂಡೆ ಶಿಬ್‌ಪುರ ಪ್ರದೇಶದಲ್ಲಿನ ದುಬಾರಿ ವಸತಿ ಸಮುಚ್ಚಯದಲ್ಲಿ ಫ್ಲಾಟ್‌ಗಳನ್ನು ಹೊಂದಿದ್ದರು. ದಾಳಿ ವೇಳೆ ಉದ್ಯಮಿಗಳ ಕುಟುಂಬಸ್ಥರು ಇರಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

ಕೋಲ್ಕತ್ತಾ ಪೊಲೀಸರ ಪ್ರಕಾರ, ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಿರುವ ಈ ಇಬ್ಬರು ಉದ್ಯಮಿಗಳಿಂದ ಭಾರಿ ಮೊತ್ತದ ವಹಿವಾಟಿನ ಬಗ್ಗೆ 2 ಬ್ಯಾಂಕುಗಳು ಅಕ್ಟೋಬರ್ 14ರಂದು ಮಾಹಿತಿ ನೀಡಿದ್ದವು. ಈ ಹಿನ್ನೆಲೆ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Aadhar for Marriage: ಇನ್ಮುಂದೆ ಆಧಾರ್ ಇದ್ದರೆ ಮಾತ್ರ ಮದುವೆ! ಹೊಸ ನಿಯಮ ಜಾರಿ

ಈ ಬಗ್ಗೆ ಹರೇ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೋಲ್ಕತ್ತಾ ಪೊಲೀಸ್‌ನ ಡಿಟೆಕ್ಟಿವ್ ವಿಭಾಗದ ಬ್ಯಾಂಕ್ ವಂಚನೆ ನಿಗ್ರಹ ವಿಭಾಗ ತನಿಖೆ ಆರಂಭಿಸಿದೆ. ಈ ಸಹೋದರರ ವಿರುದ್ಧ ಕೋಲ್ಕತ್ತಾ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದು, ಆಗ ಅವರ ಎಲ್ಲಿದ್ದಾರೆ ಎಂಬುದು ಗೊತ್ತಾಗಿರಲಿಲ್ಲ. ದೊಡ್ಡ ಮೊತ್ತದ 2 ಬ್ಯಾಂಕ್ ಖಾತೆಗಳನ್ನು ಸಹ ಪರಿಶೀಲಿಸಲಾಗುತ್ತಿದೆ.

ಬಿಜೆಪಿ ವಕ್ತಾರ ಸಾಮಿಕ್ ಭಟ್ಟಾಚಾರ್ಯ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಒಂದು ಸಣ್ಣ ವರ್ಗದ ಜನರು ಟಿಎಂಸಿ ಬೆಂಬಲದೊಂದಿಗೆ ಅಪಾರ ಪ್ರಮಾಣದ ಸಂಪತ್ತು, ಅಕ್ರಮ ಹಣ ಸಂಪಾದಿಸಿದ್ದಾರೆ’ ಅಂತಾ ಕಿಡಿಕಾರಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News