ʼಕನಸಿನ ಮನೆʼಯಲ್ಲಿ ಜೀವಂತ ಶವವಾದ ದಂಪತಿ

ಮೃತರನ್ನು ರವೀಂದ್ರನ್ (50) ಮತ್ತು ಉಷಾ (45) ಎಂದು ಗುರುತಿಸಲಾಗಿದೆ. ದಂಪತಿ ಪುತ್ರಿ ಶ್ರೀಧನ್ಯ ಎಂಬವರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Written by - Bhavishya Shetty | Last Updated : Apr 25, 2022, 02:46 PM IST
  • ಅಗ್ನಿ ಅನಾಹುತಕ್ಕೆ ಬಲಿಯಾದ ದಂಪತಿ
  • ಮುದ್ದು ಕಂದಮ್ಮ ಸಾವು ಬದುಕಿನ ನಡುವೆ ಹೋರಾಟ
  • ಕೇರಳದ ಇಡುಕ್ಕಿ ಜಿಲ್ಲೆಯ ಪುಟ್ಟಡಿಯಲ್ಲಿ ಘಟನೆ
ʼಕನಸಿನ ಮನೆʼಯಲ್ಲಿ ಜೀವಂತ ಶವವಾದ ದಂಪತಿ title=
Couple Death

ಕೇರಳ : ಅದೆಷ್ಟೋ ಕನಸುಗಳನ್ನು ಹೊತ್ತು ಮನೆ ನಿರ್ಮಿಸಿದ್ದ ದಂಪತಿ ತಮ್ಮ ಮಗಳೊಂದಿಗೆ ಗೃಹ ಪ್ರವೇಶ ಮಾಡಿದ್ದರು. ಆದರೆ ಕಾರ್ಯಕ್ರಮ ಮುಗಿದು ಎರಡು ದಿನವಾಗುಷ್ಟರಲ್ಲಿ ಬೆಂಕಿ ಅವಘಡ ಸಂಭವಿಸಿ ದಂಪತಿ ಸಾವನ್ನಪ್ಪಿದ್ದಾರೆ. ಇನ್ನು ಮುದ್ದು ಕಂದಮ್ಮ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಈ ಹೃದಯವಿದ್ರಾವಕ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಪುಟ್ಟಡಿ ಎಂಬಲ್ಲಿ ನಡೆದಿದೆ.

ಇದನ್ನು ಓದಿ: Krunal Pandya: ಕೃನಾಲ್‌ ಮೇಲೆ ಕೋಪಗೊಂಡ ಪೊಲಾರ್ಡ್‌: ಮಾಡಿದ್ದೇನು ನೋಡಿ

ಮೃತರನ್ನು ರವೀಂದ್ರನ್ (50) ಮತ್ತು ಉಷಾ (45) ಎಂದು ಗುರುತಿಸಲಾಗಿದೆ. ದಂಪತಿ ಪುತ್ರಿ ಶ್ರೀಧನ್ಯ ಎಂಬವರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆರ್ಥಿಕವಾಗಿ ದುರ್ಬಲಗೊಂಡ ವರ್ಗದವರಿಗೆ ಮನೆ ನಿರ್ಮಿಸಲು ಕೇರಳ ಸರ್ಕಾರ ಧನ ಸಹಾಯ ಮಾಡುತ್ತಿದೆ. ಆರ್ಥಿಕ ನೆರವು ನೀಡುವ ಲೈಫ್ ಯೋಜನೆಯಡಿ ಸರ್ಕಾರ ನೀಡಿದ್ದ ಹಣವನ್ನು ಪಡೆದುಕೊಂಡು ರವೀಂದ್ರನ್​ ಮತ್ತು ಉಷಾ ದಂಪತಿ ಮನೆ ನಿರ್ಮಿಸಿಕೊಂಡಿದ್ದರು. ಎರಡು ದಿನಗಳ ಹಿಂದೆಯಷ್ಟೇ ಗೃಹಪ್ರವೇಶ ಕಾರ್ಯಕ್ರಮ ನಡೆಸಿ ಹೊಸ ಮನೆಗೆ ಹೆಜ್ಜೆ ಇಟ್ಟಿದ್ದರು. 

ಆದರೆ ಭಾನುವಾರ ಬೆಳಗಿನ ಜಾವ 2ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಶ್ರೀಧನ್ಯ ಮನೆಯಿಂದ ಹೊರಬಂದು ಸಹಾಯಕ್ಕಾಗಿ ಕೂಗಿದಾಗ ಸ್ಥಳೀಯರು ಆಗಮಿಸಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ದಂಪತಿ ಬೆಂಕಿಗೆ ಆಹುತಿಯಾಗಿದ್ದರು. 

ತೀವ್ರ ಸುಟ್ಟ ಗಾಯಗಳೊಂದಿಗೆ ಬಳಲುತ್ತಿದ್ದ ಶ್ರೀಧನ್ಯಾಳನ್ನು ಇಡುಕ್ಕಿಯ ಕಟ್ಟಪ್ಪನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 

ಇದನ್ನು ಓದಿ: ಚೀನಾ ಪ್ರವಾಸಿ ವೀಸಾ ರದ್ದುಗೊಳಿಸಿದ ಭಾರತ: ಕಾರಣ ಇಲ್ಲಿದೆ

ಅಗ್ನಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News