ಬೆಂಗಳೂರು ಹೊರವಲಯದಲ್ಲಿ ಮತ್ತೆ ಚಡ್ಡಿ ಗ್ಯಾಂಗ್ ಹಾವಳಿ

Chaddi gang in Bengaluru : ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ‌ ಸರ್ಜಾಪುರದಲ್ಲಿ ಸೆಪ್ಟೆಂಬರ್‌ 05 ತಾರೀಖಿನಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Written by - Chetana Devarmani | Last Updated : Oct 8, 2024, 03:08 PM IST
  • ಬೆಂಗಳೂರು ಹೊರವಲಯದಲ್ಲಿ ಚಡ್ಡಿ ಗ್ಯಾಂಗ್ ಹಾವಳಿ
  • ಕಳ್ಳರ ಗ್ಯಾಂಗ್ ಚಲನವಲನ ದೃಶ್ಯ ಸಿಸಿಟಿವಿಯಲ್ಲಿ ಸೆರೆ
  • ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬೆಂಗಳೂರು ಹೊರವಲಯದಲ್ಲಿ ಮತ್ತೆ ಚಡ್ಡಿ ಗ್ಯಾಂಗ್ ಹಾವಳಿ  title=

ಬೆಂಗಳೂರು: ಚಡ್ಡಿ ಧರಿಸಿ ಆಯುಧ ಹಿಡಿದು ಎಲ್ಲದಕ್ಕೂ ರೆಡಿಯಾಗಿಯೇ ಫೀಲ್ಡ್‌ಗೆ ಇಳಿಯುವ ಈ ಖತರ್ನಾಕ್‌ ಕಳ್ಳರ ಗುಂಪು ಮತ್ತೆ ಬೆಂಗಳೂರಿನಲ್ಲಿ ಸಕ್ರಿಯಗೊಂಡಿದೆ. ವಿಶೇಷ ಡ್ರೆಸ್ ಕೋಡ್ ನಲ್ಲಿ ಕಳ್ಳತನಕ್ಕಿಳಿಯುವ ಈ ಗ್ಯಾಂಗ್‌ ಸರ್ಜಾಪುರದ ಬಿಲ್ಲಾಪುರ ಗ್ರಾಮದ ಸುತ್ತಮುತ್ತ ಕಾಣಿಸಿಕೊಂಡಿದೆ. 

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ‌ ಸರ್ಜಾಪುರದಲ್ಲಿ ಸೆಪ್ಟೆಂಬರ್‌ 05 ತಾರೀಖಿನಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೈಯಲ್ಲಿ ಆಯುಧಗಳನ್ನ ಹಿಡಿದು ಕಳ್ಳತನಕ್ಕಿಳಿದ ಗ್ಯಾಂಗ್ ನ ಐವರು ಕಳ್ಳರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸರ್ಜಾಪುರ ರಸ್ತೆಯ ಅಪಾರ್ಟ್‌ಮೆಂಟ್, ವಿಲ್ಲಾಗಳ ಬಳಿ ಚಡ್ಡಿ ಗ್ಯಾಂಗ್ ಓಡಾಟ ಪತ್ತೆಯಾಗಿದೆ. 

ಇದನ್ನೂ ಓದಿ: ಕರ್ನಾಟಕದ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ!; ಸಚಿವರ ಸಮ್ಮುಖದಲ್ಲೇ ಘೋಷಣೆ

ಬಿಲ್ಲಾಪುರ ಗ್ರಾಮದ ಕಾನ್ಪಿಡೆಂಟ್ ಬೆಲ್ಲಟಿಕ್ಸ್ ಲೇಔಟ್ ನಲ್ಲಿರುವ ಚಿರಾಗ್ ಅಶೋಕ್ ಕುಮಾರ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಗ ಬೀಗ ಒಡೆದು ಮೂವತ್ತು ಸಾವಿರ ಹಣ ಕಳ್ಳತನ ಮಾಡಿದ್ದಾರೆ. ಬಿಲ್ಲಾಪುರ ಗ್ರಾಮದ ಇಂಡಸ್ ಇಂಟರ್ ನ್ಯಾಷನಲ್ ಸ್ಕೂಲಿಗೂ ಚಡ್ಡಿ ಗ್ಯಾಂಗ್ ಕನ್ನ ಹಾಕಿದೆ. 

ದಿನಕರ್ ವಿನೂತ್ ಕುಮಾರ್ ಎಂಬುವವರು ಪ್ರಕರಣ ದಾಖಲಿಸಿದ್ದಾರೆ. ಶಾಲೆಯ ಕ್ಯಾಂಪಸ್ ನಲ್ಲಿ ಮುಳ್ಳು ತಂತಿ ಕಟ್ ಮಾಡಿ ಚಡ್ಡಿ ಗ್ಯಾಂಗ್ ಒಳನುಗ್ಗಿದೆ. ಆಫೀಸ್ ರೂಮ್ ಬಾಗಿಲು ಮುರಿದು ಒಳಹೋಗಿ ಕಳ್ಳತನ ಎಸಗಿದೆ. ವಿಲ್ಲಾ ಮತ್ತು ಶಾಲೆಯ ಸಿಸಿಟಿವಿಗಳಲ್ಲಿ ಚಡ್ಡಿ ಗ್ಯಾಂಗ್ ಸೆರೆಯಾಗಿದೆ. 

ಮುಖಕ್ಕೆ ಕರ್ಚಿಫ್ ಕಟ್ಟಿಕೊಂಡು ಕಳ್ಳತನಕ್ಕಿಳಿದಿದ್ದು, ಗುರುತು ಪತ್ತೆ ಕಷ್ಟಕರವಾಗಿದೆ. ಕೈಯಲ್ಲಿ ಹರಿತವಾದ ಆಯುಧಗಳನ್ನಿಟ್ಟುಕೊಂಡು ಕಳ್ಳತನಕ್ಕೆ ಬರುತ್ತಾರೆ. ಈ ಹಿಂದೆಯೂ ಕೆಲವು ಬಾರಿ ಚಡ್ಡಿ ಗ್ಯಾಂಗ್ ಕಾಣಿಸಿಕೊಂಡಿತ್ತು. ಸರ್ಜಾಪುರ ಭಾಗದಲ್ಲಿ ಪದೇ ಪದೇ ಚಡ್ಡಿ ಗ್ಯಾಂಗ್ ಭೀತಿ ಎದುರಾಗುತ್ತದೆ. ಈ ಬಗ್ಗೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ಇದನ್ನೂ ಓದಿ: ಎಷ್ಟೇ ಅನ್ಯೋನ್ಯತೆ ಇದ್ದರೂ ಪ್ರತಿಯೊಬ್ಬ ಪತ್ನಿಯೂ ಈ ಐದು ಸತ್ಯವನ್ನು ಪತಿಯಿಂದ ಮುಚ್ಚಿಡುತ್ತಾಳೆ! ಈ ವಿಷಯ ಹೊರ ಬರಲು ಬಿಡುವುದೇ ಇಲ್ಲ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News