ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ: ಪಶ್ಚಿಮ ರಾಷ್ಟ್ರದಿಂದ ಬಂದಿರೋ ಇ-ಮೇಲ್..!

ಮೊದಲಿಗೆ ಯಾರೋ ಕಿಡಿಗೇಡಿಗಳು ಮೇಲ್ ಮಾಡಿರುವ ಅನುಮಾನ ವ್ಯಕ್ತವಾಗಿತ್ತು. ಇದರ ಜೊತೆಗೆ ವಿದ್ಯಾರ್ಥಿಯೊಬ್ಬನ ಅಣ್ಣನಿಂದ ಈ ಕೃತ್ಯ ನಡೆದಿದೆ ಎಂದು ಹೇಳಲಾಗ್ತಿತ್ತು. ಸದ್ಯ ಈ ಎಲ್ಲಾ ಅನುಮಾನಕ್ಕೂ ನಗರ ಪೊಲೀಸರು ಇತಿಶ್ರೀ ಹಾಡಿದ್ದಾರೆ.

Written by - VISHWANATH HARIHARA | Last Updated : Apr 23, 2022, 04:48 PM IST
  • ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಪ್ರಕರಣ
  • ಪಶ್ಚಿಮ ರಾಷ್ಟ್ರದಿಂದ ಬಂದಿರುವ ಇ-ಮೇಲ್‌
  • ಸ್ಪೋಟಕ ಸಂಗತಿ ಬೆಳಕಿಗೆ ತಂದ ಪೊಲೀಸರು
ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ: ಪಶ್ಚಿಮ ರಾಷ್ಟ್ರದಿಂದ ಬಂದಿರೋ ಇ-ಮೇಲ್..! title=
Bomb threaten call

ಬೆಂಗಳೂರು: ನಗರದ ಪ್ರತಿಷ್ಠಿತ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಪ್ರಕರಣವನ್ನ ಬೆಂಗಳೂರು ಪೊಲೀಸರು ಒಂದು ಹಂತಕ್ಕೆ ಭೇದಿಸಿದ್ದಾರೆ. ಇಮೇಲ್ ಕೃತ್ಯದ ಹಿಂದಿರುವ ಮಾಸ್ಟರ್ ಮೈಂಡ್ ಯಾರು.? ಎಲ್ಲಿಂದ ಮೇಲ್ ಬಂದಿದೆ ಎಂಬುದರ‌ ಬಗ್ಗೆ ಬಹುತೇಕ ಮಾಹಿತಿ ಕಲೆ ಹಾಕಿದ್ದಾರೆ. 

ಇದನ್ನು ಓದಿ: ಸೋಶಿಯಲ್‌ ಮೀಡಿಯಾ ಸೆನ್ಶೇಶನ್‌ ನಿಹಾರಿಕಾ ಕುರಿತು ಇಲ್ಲಿದೆ ಕಂಪ್ಲೀಟ್‌ ಡೀಟೇಲ್ಸ್‌

ಮೊದಲಿಗೆ ಯಾರೋ ಕಿಡಿಗೇಡಿಗಳು ಮೇಲ್ ಮಾಡಿರುವ ಅನುಮಾನ ವ್ಯಕ್ತವಾಗಿತ್ತು. ಇದರ ಜೊತೆಗೆ ವಿದ್ಯಾರ್ಥಿಯೊಬ್ಬನ ಅಣ್ಣನಿಂದ ಈ ಕೃತ್ಯ ನಡೆದಿದೆ ಎಂದು ಹೇಳಲಾಗ್ತಿತ್ತು. ಸದ್ಯ ಈ ಎಲ್ಲಾ ಅನುಮಾನಕ್ಕೂ ನಗರ ಪೊಲೀಸರು ಇತಿಶ್ರೀ ಹಾಡಿದ್ದಾರೆ.

ಏಪ್ರಿಲ್ 8ರಂದು ನಡೆದಿದ್ದ ಕೃತ್ಯದ ಹಿಂದಿನ ಕಿಡಿಗೇಡಿಗಳ ಜಾಡು ಹಿಡಿದಿದ್ದ ಬೆಂಗಳೂರು ಪೊಲೀಸರು ಸರ್ವರ್ ಗಳ ಪರಿಶೀಲನೆ ನಡೆಸಿದ್ದರು. ಈ ವೇಳೆ  ಸ್ಪೋಟಕ ಸಂಗತಿ ಬೆಳಕಿಗೆ ಬಂದಿದೆ. ಪಶ್ಚಿಮ ದಿಕ್ಕಿನ ಆ ಒಂದು ರಾಷ್ಟ್ರದಿಂದ ಕಿಡಿಗೇಡಿ ಕೃತ್ಯವೆಸಗಿರೋದು ಪೊಲೀಸರಿಗೆ ಟೆಕ್ನಿಕಲ್ ದಾಖಲೆ  ಮೂಲಕ ಕನ್ಪರ್ಮ್ ಆಗಿದೆ.

​ಇದನ್ನು ಓದಿ: ಪಿಎಸ್ಐ ನೇಮಕಾತಿ ಅಕ್ರಮ ಆಡಿಯೋ... ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ: ಸಿಎಂ

ಶಾಲೆಗಳಿಗೆ ಕಳುಹಿಸಿರುವ ಮೇಲ್‌ನ ಐಪಿ ಅಡ್ರಸ್ ಆಧರಿಸಿ ಗೂಗಲ್‌ನಿಂದ ಮಾಹಿತಿ ತರಿಸಿಕೊಂಡಿದ್ದ ಪೊಲೀಸರು ಪ್ರಮುಖ ಮಾಹಿತಿ  ಪತ್ತೆ ಮಾಡಿದ್ದಾರೆ. ಇದಕ್ಕೂ ಮೊದಲಿದ್ದ ವಿದೇಶಿ ಸರ್ವರ್  ಹ್ಯಾಕ್ ಮಾಡಿ ಸ್ಥಳೀಯವಾಗಿ ಮೇಲ್ ಮಾಡಿರುವ ಅನುಮಾನವನ್ನ ಪೊಲೀದಸರು ನಿವಾರಣೆ ಮಾಡಿದ್ದಾರೆ. ಇದರಿಂದ ಹೊರ ದೇಶದಿಂದಲೇ  ಇಮೇಲ್ ಬಂದಿರೋದು ಕನ್ಫರ್ಮ್ ಆಗಿದೆ‌.

Trending News