ಜ್ಯೂಸ್ ಮಾದರಿಯಲ್ಲಿ ಡ್ರಗ್ಸ್ ಮಾರುವ ಜಾಲದ ಸದಸ್ಯನ ಬಂಧನ

ಜ್ಯೂಸ್ ಮಾದರಿಯಲ್ಲಿ ಡ್ರಗ್ಸ್ ಮಾರುವ ಜಾಲದ ಸದಸ್ಯನೊಬ್ಬನನ್ನು ದಕ್ಷಿಣ ವಿಭಾಗದ ವಿವಿಪುರ ಪೊಲೀಸರು ಬಂಧಿಸಿದ್ದಾರೆ.

Written by - Bhavya Sunil Bangera | Edited by - Manjunath N | Last Updated : Jul 6, 2023, 10:08 PM IST
  • 100 ಲೀಟರ್ ನೀರಿನ ಜೊತೆಗೆಒಂದು ಲೀಟರ್ ಮಾದಕ ದ್ರಾವಣವನ್ನು ಬೆರೆಸುತ್ತಿದ್ದರು.
  • ಈ ನೀರು ಹೆಚ್ಚಾಗಿ ಘಾಟು ಇರುವುದರಿಂದ ವಿವಿಧ ಕಂಪನಿಗಳ ಜ್ಯೂಸ್ ನೊಳಗೆ ಬೆರೆಸಿ ಕೊಡುತ್ತಿದ್ದರು.
  • ವಿವಿ ಪುರಂನಲ್ಲಿ ಶೇಖರಣೆ ಮಾಡಲಾಗಿದ್ದ ಗೋಡೌನ್ ಮೇಲೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ
ಜ್ಯೂಸ್ ಮಾದರಿಯಲ್ಲಿ ಡ್ರಗ್ಸ್ ಮಾರುವ ಜಾಲದ ಸದಸ್ಯನ ಬಂಧನ  title=

ಬೆಂಗಳೂರು: ಜ್ಯೂಸ್ ಮಾದರಿಯಲ್ಲಿ ಡ್ರಗ್ಸ್ ಮಾರುವ ಜಾಲದ ಸದಸ್ಯನೊಬ್ಬನನ್ನು ದಕ್ಷಿಣ ವಿಭಾಗದ ವಿವಿಪುರ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ಗುನಾಂ ಸಿಂಗ್ ಬಂಧಿತ ಆರೋಪಿಯಾಗಿದ್ದು, ಖಚಿತ ಮಾಹಿತಿ ಮೇರೆಗೆ ಆರೋಪಿಯ ಗೋದಾಮಿನ ಮೇಲೆ ದಾಳಿ ನಡೆಸಿದ ಪೊಲೀಸರು 55 ಕೆಜಿ ತೂಕದ 60 ಲಕ್ಷದ ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ- ಅಧಿಕಾರವಿಲ್ಲದೆ ಹತಾಶರಾಗಿರುವ ಕುಮಾರಸ್ವಾಮಿ ಆರೋಪ ಹಿಟ್ ಅಂಡ್ ರನ್ ಇದ್ದಂತೆ: ಸಿದ್ದರಾಮಯ್ಯ

100 ಲೀಟರ್ ನೀರಿನ ಜೊತೆಗೆಒಂದು ಲೀಟರ್ ಮಾದಕ ದ್ರಾವಣವನ್ನು ಬೆರೆಸುತ್ತಿದ್ದರು. ಈ ನೀರು ಹೆಚ್ಚಾಗಿ ಘಾಟು ಇರುವುದರಿಂದ ವಿವಿಧ ಕಂಪನಿಗಳ ಜ್ಯೂಸ್ ನೊಳಗೆ ಬೆರೆಸಿ ಕೊಡುತ್ತಿದ್ದರು. ವಿವಿ ಪುರಂನಲ್ಲಿ ಶೇಖರಣೆ ಮಾಡಲಾಗಿದ್ದ ಗೋಡೌನ್ ಮೇಲೆ ದಾಳಿ ಮಾಡಿ  ಆರೋಪಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.ಈ ಮಾದಕ ಪದಾರ್ಥ ಅಫೀಮಿನ ವಿಧವಾಗಿದೆ ಇದನ್ನು ಹೆಚ್ಚಾಗಿ ರಾಜಸ್ಥಾನದಲ್ಲಿ ಬೆಳೆಯಲಾಗುತ್ತದೆ. ಇದರಿಂದ ಅಫೀಮು ತಯಾರು ಮಾಡಿ ಲಕ್ಷ ಲಕ್ಷ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಇದನ್ನು ದೇಶದ ವಿವಿಧ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ- ಫ್ರೀ ರೇಶನ್ ಜೊತೆಗೆ ಈ ಸೌಲಭ್ಯ ಕೂಡಾ ಇನ್ನು ಸಂಪೂರ್ಣ ಉಚಿತ ! ಪಡಿತರ ಚೀಟಿದಾರರಿಗೆ ಜಾಕ್ ಪಾಟ್

ಮೊದಲಿಗೆ ತೋಟದಲ್ಲಿ ಅಫೀಮು ಗಿಡ ಬೆಳೆಯುತ್ತಾರೆ. ಅದೇ ಗಿಡ ದೊಡ್ಡದಾದ ಬಳಿಕ ಬಿಡುವ ಕಾಯಿಯನ್ನು ಬ್ಲೇಡ್ ಬಳಸಿ ಅದರಿಂದ ಬರುವ ಹಾಲನ್ನು ಸಂಗ್ರಹಿಸಲಾಗುತ್ತದೆ.ಅದು ಮಾದಕ ಪದಾರ್ಥವಾಗಿದ್ದು ಅದನ್ನು ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತದೆ. ನಂತರ ಆ ಕಾಯಿಯನ್ನು ಕತ್ತರಿಸಿ ತರುವ ಪೆಡ್ಲರ್ ಗಳು ಅದನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಎರಡು ದಿನಗಳ ಕಾಲ ನೀರಿನಲ್ಲಿ ಹಾಕಿ ನೆನೆಸುತ್ತಾರೆ. ನಂತರ ಅದರ ಪುಡಿಯನ್ನ ಬಟ್ಟೆಯಲ್ಲಿ ಸೋಸಿ ಬಾಟಲ್‌ನಲ್ಲಿ ಶೇಖರಿಸುತ್ತಾರೆ. ನಂತರ ಆ ಬಾಟಲ್ ನೀರನ್ನು ಸಾಮಾನ್ಯ ನೀರಿನ ಜೊತೆಗೆ ಬೆರೆಸಿ ಪಾರ್ಟಿಗಳಲ್ಲಿ ಬಳಸುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=38l6m8543Vk

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

 

Trending News