ಗೃಹ ಸಚಿವರ ಮನೆಗೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ: ಭದ್ರತಾ ವೈಫಲ್ಯ ಕಾರಣವೆಂದು ಡಿಸಿಪಿ ವರದಿ

ಗೃಹ ಸಚಿವ ಆರಗ ಜ್ಞಾನೇಂದ್ರ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ವಿಭಾಗ ಡಿಸಿಪಿ ವಿನಾಯಕ್ ಪಾಟೀಲ್ ಕಮೀಷನರ್ ಗೆ ವರದಿ ಸಲ್ಲಿಸಿದ್ದಾರೆ.

Written by - VISHWANATH HARIHARA | Edited by - Manjunath N | Last Updated : Aug 1, 2022, 05:03 PM IST
  • ಗೃಹ ಸಚಿವರ ನಿವಾಸಕ್ಕೆ ಸೂಕ್ತ ರೀತಿಯಲ್ಲಿ ಭದ್ರತೆ ಕಲ್ಪಿಸದ ಬಗ್ಗೆ ಪ್ರಸ್ತಾಪಿಸಿದ್ದಾರೆ.
  • ಗೃಹ ಸಚಿವರ ನಿವಾಸದ ಬಳಿ ಸಿಎಆರ್ ಪೊಲೀಸರು ಸೇರಿ ಐವರಿಂದ ಮಾತ್ರ ಭದ್ರತೆ ಇತ್ತು.
ಗೃಹ ಸಚಿವರ ಮನೆಗೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ: ಭದ್ರತಾ ವೈಫಲ್ಯ ಕಾರಣವೆಂದು ಡಿಸಿಪಿ ವರದಿ title=
Photo Courtsey: ANI

ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ವಿಭಾಗ ಡಿಸಿಪಿ ವಿನಾಯಕ್ ಪಾಟೀಲ್ ಕಮೀಷನರ್ ಗೆ ವರದಿ ಸಲ್ಲಿಸಿದ್ದಾರೆ.

ವರದಿಯಲ್ಲಿ ಕರ್ತವ್ಯ ಲೋಪ ಹಾಗೂ ಭದ್ರತಾ ವೈಫಲ್ಯದ ಬಗ್ಗೆ ಉಲ್ಲೇಖಿಸಿದ್ದು,ಗೃಹ ಸಚಿವರ ನಿವಾಸಕ್ಕೆ ಸೂಕ್ತ ರೀತಿಯಲ್ಲಿ ಭದ್ರತೆ ಕಲ್ಪಿಸದ ಬಗ್ಗೆ ಪ್ರಸ್ತಾಪಿಸಿದ್ದಾರೆ.ಗೃಹ ಸಚಿವರ ನಿವಾಸದ ಬಳಿ ಸಿಎಆರ್ ಪೊಲೀಸರು ಸೇರಿ ಐವರಿಂದ ಮಾತ್ರ ಭದ್ರತೆ ಇತ್ತು.

ಇವೇಳೆ ಗೃಹ ಸಚಿವರ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಸಿಎಆರ್ ಕಾನ್ಸ್‌ಟೇಬಲ್ ಜೆಸಿ ನಗರ ಠಾಣೆಗೆ ಮಾಹಿತಿ ನೀಡಿದ ಮೇಲೆ ಪೊಲೀಸರು ಅಲರ್ಟ್ ಆಗಿದ್ದಾರೆ.

ಇದನ್ನೂ ಓದಿ: WhatsApp Mistakes: ಅಪ್ಪಿತಪ್ಪಿಯೂ ಗ್ರೂಪ್‌ಗಳಿಗೆ ಈ 4 ವಿಷಯ ಕಳುಹಿಸಬೇಡಿ..!

ಆದರೆ ಕಳೆದ ಹತ್ತು ದಿನಗಳ ಹಿಂದೆ ಜೆಸಿ ನಗರ ಇನ್ಸ್‌ಪೆಕ್ಟರ್ ಟ್ರಾನ್ಸ್‌ಫರ್ ಆಗಿದ್ದು, ಹೊಸ ಇನ್ಸ್‌ಪೆಕ್ಟರ್ ಇನ್ನೂ ನಿಯೋಜನೆ ಆಗಿರಲಿಲ್ಲ.ಈ ವೇಳೆ ಸಬ್ ಇನ್ಸ್‌ಪೆಕ್ಟರ್ ಗೆ ಜವಾಬ್ದಾರಿ ನೀಡಲಾಗಿತ್ತು.ಎಬಿವಿಪಿ ಪ್ರತಿಭಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲ.ಘಟನೆ ನಡೆದಾಗ ಠಾಣೆಯಲ್ಲಿ ಸೂಕ್ತ ಪೊಲೀಸ್ ಪೋರ್ಸ್ ಸಹ ಇರಲಿಲ್ಲ.ಜವಾಬ್ದಾರಿ ಹೊತ್ತಿದ್ದ ಸಬ್ ಇನ್ಸ್‌ಪೆಕ್ಟರ್ ಸ್ಥಳಕ್ಕೆ ಬರಲು ತಡವಾಗಿತ್ತು.ಅಷ್ಟರಲ್ಲಿ ಎಬಿವಿಪಿ ಕಾರ್ಯಕರ್ತರು ರಂಪಾಟ ಮಾಡಿದ್ದರು.

ಇದನ್ನೂ ಓದಿ: Amazon Great Freedom Festival: ಮೊಬೈಲ್ ಮೇಲೆ ಶೇ.40, ಟಿವಿಗಳಿಗೆ ಶೇ.60ರಷ್ಟು ರಿಯಾಯಿತಿ!

ಮೇಲ್ನೋಟಕ್ಕೆ ಭದ್ರತಾ ವೈಫಲ್ಯ ಹಾಗೂ ಪ್ರತಿಭಟನೆ ಮಾಹಿತಿ ಕಲೆ ಹಾಕುವಲ್ಲಿ ಪೊಲೀಸರ ವಿಳಂಬ ಕಾರಣ ಎಂದು ತನಿಖೆ ನಡೆಸಿ ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿಗೆ  ಡಿಸಿಪಿ ವಿನಾಯಕ ಪಾಟೀಲ್ ವರದಿ‌ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News