Belagavi : ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು ನಾಲ್ವರು ಯುವತಿಯರ ಸಾವು!

ಈ ವೇಳೆ ಐವರು ಯುವತಿಯರು ಒಬ್ಬರಿಗೊಬ್ಬರು ಕೈ ಹಿಡಿದು ಸೆಲ್ಫಿ ಫೋಟೋ ತಗೆದುಕೊಳ್ಳುವ ವೇಳೆ ಆಯಾತಪ್ಪಿ ಕಾಲು ಜಾರಿ ಬಿದ್ದಿದ್ದಾರೆ. ಐವರು ಯುವತಿಯರ ಪೈಕಿ ನಾಲ್ವರ ಸಾವನ್ನಪ್ಪಿದ್ದಾರೆ, ಓರ್ವ ಯುವತಿಯ ಸ್ಥಿತಿ ಗಂಭೀರವಾಗಿದೆ.

Last Updated : Nov 26, 2022, 04:07 PM IST
  • ಕರ್ನಾಟಕ ಮಹಾರಾಷ್ಟ್ರ ಗಡಿಭಾಗದಲ್ಲಿರುವ ಕಿತವಾಡ ಫಾಲ್ಸ್‌
  • ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು ನಾಲ್ವರು ಯುವತಿಯರ ಸಾವು
  • ಓರ್ವ ಯುವತಿಯ ಸ್ಥಿತಿ ಗಂಭೀರವಾಗಿದೆ.
Belagavi : ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು ನಾಲ್ವರು ಯುವತಿಯರ ಸಾವು! title=

ಬೆಳಗಾವಿ : ಕರ್ನಾಟಕ ಮಹಾರಾಷ್ಟ್ರ ಗಡಿಭಾಗದಲ್ಲಿರುವ ಕಿತವಾಡ ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು ನಾಲ್ವರು ಯುವತಿಯರು ಸಾವನ್ನಪ್ಪಿದ್ದಾರೆ. 

ಬಾಶೆಬಾನ್ ಪ್ರೌಢಶಾಲೆಯ 40 ಯುವತಿಯರು ಬೆಳಗಾವಿಯಿಂದ ಕಿತಾವಾಡ ಜಲಪಾತಕ್ಕೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಐವರು ಯುವತಿಯರು ಒಬ್ಬರಿಗೊಬ್ಬರು ಕೈ ಹಿಡಿದು ಸೆಲ್ಫಿ ಫೋಟೋ ತಗೆದುಕೊಳ್ಳುವ ವೇಳೆ ಆಯಾತಪ್ಪಿ ಕಾಲು ಜಾರಿ ಬಿದ್ದಿದ್ದಾರೆ. ಐವರು ಯುವತಿಯರ ಪೈಕಿ ನಾಲ್ವರ ಸಾವನ್ನಪ್ಪಿದ್ದಾರೆ, ಓರ್ವ ಯುವತಿಯ ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ : ಲೈಂಗಿಕ ಕ್ರಿಯೆ ವೇಳೆ ಹೃದಯಾಘಾತದಿಂದ ವೃದ್ಧ ಸಾವು: ಗಂಡನ ಸಹಾಯದಿಂದ ಮೃತ ದೇಹ ಸಾಗಿಸಿದ್ದ ಮಹಿಳೆ..!?

ಉಜ್ವಲ್ ನಗರ ಆಸೀಯಾ ಮುಜಾವರ್(17), ಅನಗೋಳದ ಕುದ್‌ಶೀಯಾ ಹಸ್ಮ್ ಪಟೇಲ್(20), ಝಟ್‌ಪಟ್ ಕಾಲೋನಿಯ ರುಕ್ಕಶಾರ್ ಭಿಸ್ತಿ(20), ತಸ್ಮಿಯಾ(20) ಸಾವನ್ನಪ್ಪಿದ್ದಾರೆ. 

ಓರ್ವ ಯುವತಿಯ ಸ್ಥಿತಿ ಚಿಂತಾಜನಕ, ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆಸ್ಪತ್ರೆ ಬಳಿ ಮೃತ ಯುವತಿಯರ ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹೀಗಾಗಿ, ಬಿಮ್ಸ್ ಆಸ್ಪತ್ರೆ ಬಳಿ ಕೆಎಸ್‌ಆರ್‌ಪಿ ತುಕಡಿಯನ್ನು ಬಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ : ಬೆಳಗಾವಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಕಿತ್ತೂರು ತಹಶೀಲ್ದಾರ ಲೋಕಾಯಕ್ತ ಬಲೆಗೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News