ಹೆಚ್ಚು ಸಂಭಾವನೆ ಲಭ್ಯವಿರುವ ವಿಶ್ವದ ಟಾಪ್ 8 ಉದ್ಯೋಗಗಳಿವು

Top 8 Highest Paying Jobs: ಪ್ರತಿಯೊಬ್ಬರಿಗೂ ತಾವೂ ಕೂಡ ಚೆನ್ನಾಗಿ ದುಡಿಯಬೇಕು. ಕೈತುಂಬಾ ವೇತನ ಪಡೆಯಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅಂತಹವರಲ್ಲಿ ನೀವೂ ಒಬ್ಬರಾಗಿದ್ದರೆ ಇಲ್ಲಿದೆ ಅತಿ ಹೆಚ್ಚು ಸಂಬಳ ಪಡೆಯುವ ವಿಶ್ವದ ಟಾಪ್ 8 ಉದ್ಯೋಗಗಳ ಬಗ್ಗೆ ಮಾಹಿತಿ. 

Written by - Yashaswini V | Last Updated : Dec 15, 2023, 02:05 PM IST
  • ಅತಿ ಹೆಚ್ಚು ವೇತನ ಲಭ್ಯವಿರುವ ಉದ್ಯೋಗಗಳು
  • ಕೆಲವು ಉದಯೋನ್ಮುಖ ಕ್ಷೇತ್ರಗಳಲ್ಲಿಯೂ ಸಿಗುತ್ತೆ ಕೈತುಂಬಾ ವೇತನ
  • ಮಾಸಿಕ ಲಕ್ಷಾಂತರ ರೂ. ಗಳಿಸಲು ಸಾಧ್ಯವಾಗುವ ಉದ್ಯೋಗಗಳ ಬಗ್ಗೆ ಇಲ್ಲಿದೆ ಮಾಹಿತಿ
ಹೆಚ್ಚು ಸಂಭಾವನೆ ಲಭ್ಯವಿರುವ ವಿಶ್ವದ ಟಾಪ್ 8 ಉದ್ಯೋಗಗಳಿವು  title=

Top 8 Highest Paying Jobs: ನಾವೂ ಕೂಡ ಕೈತುಂಬಾ ಗಳಿಸಬೇಕು, ಹೆಚ್ಚು ವೇತನ ಸಿಗುವ ಕೆಲಸಕ್ಕೆ ಸೇರಬೇಕು ಎಂಬ ಆಸೆ ಪ್ರತಿಯೊಬ್ಬರಲ್ಲೂ ಇರುತ್ತದೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ ಇಲ್ಲಿದೆ ಅತಿ ಹೆಚ್ಚು ಸಂಭಾವನೆ ಪಡೆಯಲು ಸಾಧ್ಯವಾಗುವ ಪ್ರಪಂಚದ ಟಾಪ್ 8 ಉದ್ಯೋಗಗಳ ಬಗ್ಗೆ ಮಾಹಿತಿ. 

ಅತಿ ಹೆಚ್ಚು ಸಂಭಾವನೆ ಲಭ್ಯವಿರುವ ವಿಶ್ವದ ಟಾಪ್ 8 ಉದ್ಯೋಗಗಳೆಂದರೆ:- 
ವ್ಯಾಪಾರ ವಿಶ್ಲೇಷಕ (Business Analyst): 

ಅತಿ ಹೆಚ್ಚು ವೇತನ ಲಭ್ಯವಿರುವ ಉದ್ಯೋಗದ ಬಗ್ಗೆ ಮಾತನಾಡುವುದಾದರೆ ಇಡೀ ಜಗತ್ತಿನಲ್ಲಿ ವ್ಯಾಪಾರ ವಿಶ್ಲೇಷಕರ ಹೆಸರು ಅಗ್ರಸ್ಥಾನದಲ್ಲಿ ಬರುತ್ತದೆ. ಓರ್ವ ಬಿಸಿನೆಸ್ ಅನಾಲಿಸ್ಟ್ ಪ್ರಾರಂಭಿಕ ಹಂತದಲ್ಲಿ ಸುಮಾರು 8 ಲಕ್ಷ ರೂ. ಮಾಸಿಕ ವೇತನವನ್ನು ಪಡೆಯಬಹುದು. ಅನುಭವಿ ವ್ಯಾಪಾರ ವಿಶ್ಲೇಷಕರ ತಿಂಗಳ ವೇತನ ಅಂದಾಜು 25 ಲಕ್ಷ ರೂ.ವರೆಗೆ ಇರಲಿದೆ. 

ಲಾ ಪ್ರೊಫೆಷನಲ್ (A legal professional): 
ವಿಶ್ವದಾದ್ಯಂತ ಕಾನೂನು ವೃತ್ತಿಪರರು ತಮ್ಮ ಅನುಭವ ಮತ್ತು ಚಾಣಾಕ್ಷತೆಯ ಆಧಾರದ ಮೇಲೆ ಹೆಚ್ಚಿನ ವೇತನ ಗಳಿಸುತ್ತಾರೆ. ಅನುಭವಿ ಕಾನೂನು ವೃತ್ತಿಪರರ ಸಂಬಳ ತಿಂಗಳಿಗೆ ಅಂದಾಜು 15 ರಿಂದ 20 ಲಕ್ಷ ರೂ.ವರೆಗೆ ಇರಲಿದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- ಕೊಪ್ಪಳ ವಿವಿಗೆ ಪ್ರವೇಶ: ಅರ್ಜಿ ಸಲ್ಲಿಕೆ ಅವಧಿ ಡಿ.19 ರವರೆಗೆ ವಿಸ್ತರಣೆ

ಇನ್ವೆಸ್ಟ್ಮೆಂಟ್ ಬ್ಯಾಂಕರ್ (Investment Banker): 
ಗಮನಾರ್ಹವಾಗಿ ಇನ್ವೆಸ್ಟ್ಮೆಂಟ್  ಬ್ಯಾಂಕರ್‌ಗಳಿಗೆ ಯಾವುದೇ ನಿಗದಿತ ವೇತನವನ್ನು ಫಿಕ್ಸ್ ಮಾಡಲಾಗುವುದಿಲ್ಲ. ಆದರೆ ಇನ್ವೆಸ್ಟ್ಮೆಂಟ್  ಬ್ಯಾಂಕರ್‌ಗಳು ಸಹ ಸುಲಭವಾಗಿ ತಿಂಗಳಿಗೆ 5 ಲಕ್ಷದಿಂದ 25 ಲಕ್ಷ ರೂ. ವರೆಗೆ ಸಂಪಾದಿಸುತ್ತಾರೆ ಎಂದು ಅಂದಾಜಿಸಲಾಗಿದೆ. 

ಐಟಿ ಇಂಜಿನಿಯರ್ (IT Engineer): 
ಪ್ರಸ್ತುತ ಎಲ್ಲೆಗೆ ಸಾಫ್ಟ್‌ವೇರ್ ಇಲ್ಲವೇ ಐಟಿ ಎಂಜಿನಿಯರ್ ಎಂದರೆ ಅವರು ಅತಿ ಹೆಚ್ಚು ಸಂಬಳ ಪಡೆಯುವವರು ಎಂಬ ಕಲ್ಪನೆ ಇದೆ. ಈ ತಂತ್ರಜ್ಞಾನ ಯುಗದಲ್ಲಿ ಸಾಫ್ಟ್‌ವೇರ್ ಅಥವಾ ಐಟಿ ಎಂಜಿನಿಯರ್ ಗಳಿಗೆ ತಿಂಗಳಿಗೆ 2 ಲಕ್ಷದಿಂದ 20 ಲಕ್ಷ ರೂ.ವರೆಗೆ ವೇತನ ಸಿಗಬಹುದು. 

ಚಾರ್ಟರ್ಡ್ ಅಕೌಂಟೆಂಟ್ (Chartered Accountant): 
ಯಾವುದೇ ಸಂಸ್ಥೆಯಲ್ಲಿ ಕನಿಷ್ಠ 4 ರಿಂದ 5 ವರ್ಷಗಳ ಅನುಭವವನ್ನು ಹೊಂದಿರುವಾಗ ಚಾರ್ಟರ್ಡ್ ಅಕೌಂಟೆಂಟ್  ಗೆ ಮಾಸಿಕ  5 ಲಕ್ಷದಿಂದ 24 ಲಕ್ಷ ರೂ.ವರೆಗೆ ವೇತನ ಲಭ್ಯವಾಗಲಿದೆ. 

ಇದನ್ನೂ ಓದಿ- ಬಿ.ಇಡಿ ಕೋರ್ಸ್: ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟ; ದಾಖಲೆ ಪರಿಶೀಲನೆ ಡಿ.15 ರಿಂದ

ಡಿಜಿಟಲ್ ಮಾರ್ಕೆಟಿಂಗ್ (Digital marketing): 
ಪ್ರಸ್ತುತ ಮಾರುಕಟ್ಟೆಯಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಒಂದು ಉದಯೋನ್ಮುಖ ಕ್ಷೇತ್ರವಾಗಿ ಬೆಳೆಯುತ್ತಿದೆ. ಈ ಕ್ಷೇತ್ರದಲ್ಲಿ ವೃತ್ತಿಪರರು ತಮ್ಮ ಕೆಲಸಕ್ಕಾಗಿ ತಿಂಗಳಿಗೆ 15 ರಿಂದ 18 ಲಕ್ಷ ರೂ.ವರೆಗೆ ವೇತನ ಗಳಿಸಬಹುದು. 

ವಾಯುಯಾನ ಕ್ಷೇತ್ರ (Aviation sector): 
ವಿಮಾನಯಾನ ವಲಯದಲ್ಲಿಯೂ ಕೆಲವು ಉದ್ಯೋಗಗಳಿಗೆ ಮಾಸಿಕ ಲಕ್ಷಾಂತರ ರೂ ವೇತನವನ್ನು ಪಾವತಿಸಲಾಗುತ್ತದೆ. ವಿಮಾನಯಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಮೂಲಕ ನೀವು ತಿಂಗಳಿಗೆ 5 ರಿಂದ 10 ಲಕ್ಷ ರೂ.ವರೆಗೆ ಸಂಪಾದಿಸಬಹುದು. 

ಮ್ಯಾನೇಜ್‌ಮೆಂಟ್ ಪ್ರೊಫೆಷನಲ್ (Management Professional): 
ಮ್ಯಾನೇಜ್‌ಮೆಂಟ್ ಪ್ರೊಫೆಷನಲ್ ಎಂದರೆ ನಿರ್ವಹಣಾ ವೃತ್ತಿಪರರ ಆರಂಭಿಕ ವೇತನವು ತೀರಾ ಕಡಿಮೆಯೇ ಇರುತ್ತದೆ. ಆದರೆ, ಅನುಭವ ಮತ್ತು ಸಾಧನೆಯ ಆಧಾರದ ಮೇಲೆ ಮ್ಯಾನೇಜ್ಮೆಂಟ್ ವೃತ್ತಿಪರರು ತಿಂಗಳಿಗೆ 50 ಲಕ್ಷ ರೂ.ವರೆಗೆ ವೇತನ ಗಳಿಸಬಹುದು ಎಂದು ಹೇಳಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News