RRC Recruitment 2022: 1659 ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

RRC Recruitment 2022: ರೈಲ್ವೇ ನೇಮಕಾತಿ ಸೆಲ್ , ಉತ್ತರ ಮಧ್ಯ ರೈಲ್ವೆ (NCR) ಅಪ್ರೆಂಟಿಸ್ ಹುದ್ದೆಗೆ ತನ್ನ ಅಧಿಕೃತ ವೆಬ್‌ಸೈಟ್ ಅಂದರೆ www.rrcpryj.org ನಲ್ಲಿ ಆನ್‌ಲೈನ್ ಮೋಡ್ ಮೂಲಕ ಅರ್ಜಿಗಳನ್ನು ಆಹ್ವಾನಿದೆ.

Written by - Yashaswini V | Last Updated : Jul 4, 2022, 07:30 PM IST
  • ರೈಲ್ವೆ ನೇಮಕಾತಿ ಸೆಲ್ 1650 ಕ್ಕೂ ಹೆಚ್ಚು ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನಿಸಿದೆ
  • ಉತ್ತರ ಮಧ್ಯ ರೈಲ್ವೆ 1659 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
  • ಅಭ್ಯರ್ಥಿಗಳು ಅಧಿಕೃತ ಸೈಟ್, rrcpryj.org ಗೆ ಭೇಟಿ ನೀಡುವ ಮೂಲಕ ರೈಲ್ವೆ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
RRC Recruitment 2022:  1659 ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ  title=
RRC Recruitment 2022

ನಾರ್ತ್ ಸೆಂಟ್ರಲ್ ರೈಲ್ವೇ ನೇಮಕಾತಿ 2022 : ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಸುವರ್ಣಾವಕಾಶವಿದೆ. ರೈಲ್ವೆ ನೇಮಕಾತಿ ಸೆಲ್ (ಆರ್ಆರ್ಸಿ), ಉತ್ತರ ಮಧ್ಯ ರೈಲ್ವೆ ಶನಿವಾರ (ಜುಲೈ 2) ಹೊಸ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅಪ್ರೆಂಟಿಸ್ ಹುದ್ದೆಗಳಿಗೆ  ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು  01 ಆಗಸ್ಟ್ 2022 ರ ಮೊದಲು  ಎನ್‌ಸಿಆರ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳು ಅಧಿಕೃತ ಸೈಟ್, rrcpryj.org ಗೆ ಭೇಟಿ ನೀಡುವ ಮೂಲಕ ರೈಲ್ವೆ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಎನ್‌ಸಿಆರ್ ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 1659 ಹುದ್ದೆಗಳನ್ನು ಭರ್ತಿ ಮಾಡುವ ಸಾಧ್ಯತೆಯಿದೆ. 

ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ - 02 ಜುಲೈ 2022
ಆನ್‌ಲೈನ್ ಅಪ್ಲಿಕೇಶನ್‌ನ ಕೊನೆಯ ದಿನಾಂಕ - 01 ಆಗಸ್ಟ್ 2022

ಇದನ್ನೂ ಓದಿ- NVS Recruitment 2022 : ನವೋದಯ ವಿದ್ಯಾಲಯ ಸಮಿತಿಯಲ್ಲಿ 1,616 ಹುದ್ದೆಗಳಿಗೆ ಅರ್ಜಿ!

ಅಪ್ರೆಂಟಿಸ್ ಹುದ್ದೆಗಳಿಗೆ  ಅರ್ಜಿ ಸಲ್ಲಿಸಲು ವಿದ್ಯಾರ್ಹತೆ:
ಅಭ್ಯರ್ಥಿಯು ಎಸ್‌ಎಸ್‌ಸಿ/ಮೆಟ್ರಿಕ್ಯುಲೇಷನ್/10ನೇ ತರಗತಿ ಪರೀಕ್ಷೆ ಅಥವಾ ಅದಕ್ಕೆ ಸಮಾನವಾದ (10+2 ಪರೀಕ್ಷಾ ವ್ಯವಸ್ಥೆ ಅಡಿಯಲ್ಲಿ) ಕನಿಷ್ಠ 50% ಅಂಕಗಳೊಂದಿಗೆ,  ಮಾನ್ಯತೆ ಪಡೆದ ಮಂಡಳಿಯಿಂದ ಉತ್ತೀರ್ಣರಾಗಿರಬೇಕು ಮತ್ತು ಭಾರತ ಸರ್ಕಾರದಿಂದ ಮಾನ್ಯತೆ ಪಡೆದಿರುವ ಎನ್‌ಸಿವಿಟಿ/ಎಸ್‌ಸಿವಿಟಿಯಿಂದ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಉತ್ತೀರ್ಣರಾಗಿರಬೇಕು. 

ವಯೋಮಿತಿ: 
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 15 ವರ್ಷಗಳನ್ನು ಪೂರ್ಣಗೊಳಿಸಿರಬೇಕು ಮತ್ತು ಆಗಸ್ಟ್ 1, 2022 ಕ್ಕೆ 24 ವರ್ಷಗಳನ್ನು ಮೀರಿರಬಾರದು. ಆದಾಗ್ಯೂ,  SC/ST ಅರ್ಜಿದಾರರಿಗೆ  05 ವರ್ಷಗಳು ಮತ್ತು ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳ ವಯೋಮಿತಿ ಸಡಿಲಿಕೆ ದೊರೆಯಲಿದೆ. ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ (PWD), ಗರಿಷ್ಠ ವಯಸ್ಸಿನ ಮಿತಿಯನ್ನು 10 ವರ್ಷಗಳವರೆಗೆ ಸಡಿಲಿಸಲಾಗಗುವುದು.

ಅರ್ಜಿ ಶುಲ್ಕ: 
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ  100 ರೂ. ಠೇವಣಿ ಮಾಡಬೇಕಾಗುತ್ತದೆ. ಆದಾಗ್ಯೂ, SC, ST, PWD ಮತ್ತು ಮಹಿಳಾ ಅಭ್ಯರ್ಥಿಗಳಿಂದ ಯಾವುದೇ ಅರ್ಜಿ ಶುಲ್ಕವನ್ನು ವಿಧಿಸಲಾಗುವುದಿಲ್ಲ.

ಇದನ್ನೂ ಓದಿ- ಉಚಿತ ಸಿಸಿಟಿವಿ ಕ್ಯಾಮರಾ ಅಳವಡಿಕೆ ತರಬೇತಿ: ಅರ್ಜಿ ಆಹ್ವಾನ
 
ಆಯ್ಕೆ ಪ್ರಕ್ರಿಯೆ:

ಅಪ್ರೆಂಟಿಸ್ ಆಕ್ಟ್, 1961 ರ ಅಡಿಯಲ್ಲಿ ತರಬೇತಿ ನೀಡಲು ಅರ್ಹ ಅರ್ಜಿದಾರರ ಆಯ್ಕೆಯು ಮೆರಿಟ್ ಪಟ್ಟಿಯನ್ನು ಆಧರಿಸಿರುತ್ತದೆ. ಇದಕ್ಕಾಗಿ ಅಭ್ಯರ್ಥಿಯ 10ನೇ ತರಗತಿ ಮತ್ತು ಐಐಟಿಯಲ್ಲಿ ಪಡೆದ ಸರಾಸರಿ ಶೇಕಡಾವಾರು ಅಂಕಗಳನ್ನು ತೆಗೆದುಕೊಂಡು ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News