ಶ್ರೇಷ್ಠ ತೋಟಗಾರಿಕೆ ರೈತ ಮತ್ತು ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ

2023-24 ನೇ ಸಾಲಿನ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಬಾಗಲಕೋಟೆಯಲ್ಲಿ ಡಿಸೆಂಬರ್ 23 ರಿಂದ 25 ರ ವರೆಗೆ ಸಾವಯವ ಕೃಷಿಗಾಗಿ ತೋಟಗಾರಿಕೆ ಎಂಬ ಧ್ಯೇಯದೊಂದಿಗೆ ತೋಟಗಾರಿಕೆ ಮೇಳವನ್ನು ಬಾಗಲಕೋಟೆಯ ಉದ್ಯಾನಗಿರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

Written by - Manjunath N | Last Updated : Sep 19, 2023, 08:53 PM IST
  • ನವೆಂಬರ್ 6 ರೊಳಗಾಗಿ ಸಹ ಸಂಶೋಧನೆ ಹಾಗೂ ವಿಸ್ತರಣಾ ನಿರ್ದೇಶಕರು, ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ಪಿ. ಬಿ. ರಸ್ತೆ, ಕುಂದಾಪುರ ಫಾರ್ಮ್ ಧಾರವಾಡ - 580005 ಗೆ ಸಲ್ಲಿಸಬಹುದು.
  • ಹೆಚ್ಚಿನ ಮಾಹಿತಿಗಾಗಿ : 9482709079 ಅಥವಾ 9880036097, 9449872863 ಗೆ ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ
 ಶ್ರೇಷ್ಠ ತೋಟಗಾರಿಕೆ ರೈತ ಮತ್ತು ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ title=

ಧಾರವಾಡ : 2023-24 ನೇ ಸಾಲಿನ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಬಾಗಲಕೋಟೆಯಲ್ಲಿ ಡಿಸೆಂಬರ್ 23 ರಿಂದ 25 ರ ವರೆಗೆ ಸಾವಯವ ಕೃಷಿಗಾಗಿ ತೋಟಗಾರಿಕೆ ಎಂಬ ಧ್ಯೇಯದೊಂದಿಗೆ ತೋಟಗಾರಿಕೆ ಮೇಳವನ್ನು ಬಾಗಲಕೋಟೆಯ ಉದ್ಯಾನಗಿರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ:  ಆಣೆಕಟ್ಟು ನಾವು ಕಟ್ಟಿ, 200 ವರ್ಷಗಳಿಂದ ಅವರ ದಬ್ಬಾಳಿಕೆ ಸಹಿಸಿಕೊಂದಿದ್ದೇವೆ : ಹೆಚ್‌ಡಿಕೆ

ಮೇಳದಲ್ಲಿ ತೋಟಗಾರಿಕಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ರೈತರಿಗೆ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯದ 24 ಜಿಲ್ಲೆಗಳಿಗೆ ಪ್ರತಿಯೊಂದು ಜಿಲ್ಲೆಗೆ ಒಬ್ಬ ಶ್ರೇಷ್ಠ ತೋಟಗಾರಿಕೆ ರೈತ ಅಥವಾ ರೈತ ಮಹಿಳೆ ಎಂದು ಆಯ್ಕೆ ಮಾಡಿ ಬಹುಮಾನದೊಂದಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.

ಇದನ್ನೂ ಓದಿ: ಉಪೇಂದ್ರ ಸ್ಟೈಲ್ ನಲ್ಲಿ 'UI' ಟೀಸರ್.. ನೋ ವಿಶುವಲ್ ಓನ್ಲೀ ಆಡಿಯೋ!

ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲುಬಯಸುವ ಧಾರವಾಡ ಜಿಲ್ಲೆಯ ರೈತ ಮತ್ತು ರೈತ ಮಹಿಳೆಯರು ಅರ್ಜಿ ನಮೂನೆಯನ್ನು ಸಹ ಸಂಶೋಧನಾ ಹಾಗೂ ವಿಸ್ತರಣಾ ನಿರ್ದೇಶಕರು ಅಥವಾ ಮುಖ್ಯಸ್ಥರು, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ಕುಂಬಾಪುರ ಫಾರ್ಮ್, ಧಾರವಾಡ ಪಡೆಯಬಹುದು ಅಥವಾ ತೋಟಗಾರಿಕೆ ವಿವಿಯ ವೆಬ್ ಸೈಟ್ : www.uhsbagalkot.karnataka.gov.in ಮೂಲಕ ಅರ್ಜಿಗಳನ್ನು ನವೆಂಬರ್ 6 ರೊಳಗಾಗಿ ಸಹ ಸಂಶೋಧನೆ ಹಾಗೂ ವಿಸ್ತರಣಾ ನಿರ್ದೇಶಕರು, ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ಪಿ. ಬಿ. ರಸ್ತೆ, ಕುಂದಾಪುರ ಫಾರ್ಮ್ ಧಾರವಾಡ - 580005 ಗೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ : 9482709079 ಅಥವಾ 9880036097, 9449872863 ಗೆ ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News