ಈ ವಾರಾಂತ್ಯದಲ್ಲಿ ತಪ್ಪದೇ ವೀಕ್ಷಿಸಿ ಜೀ ಕನ್ನಡ ನ್ಯೂಸ್‌ನ 'ಯುವರತ್ನ ಅವಾರ್ಡ್ಸ್'

Zee Kannada News Yuvaratna Awards: ಯುವಜನಕ್ಕೆ ಸ್ಪೂರ್ತಿಯಾಗುವ ನಿಟ್ಟಿನಲ್ಲಿ ಸಾಧಕರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಜೀ ಕನ್ನಡ ನ್ಯೂಸ್‌ ಮಾಡುತ್ತಿದೆ. ಅದರಂತೆ 2023-24 ರ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ,  ಒಟ್ಟು 35 ಜನ ಯುವ ಸಾಧಕರು ಆಯ್ಕೆಯಾಗಿದ್ದರು. ಅವರೆಲ್ಲರನ್ನೂ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿ ಗೌರವಿಸಿ "ಯುವರತ್ನ ಪ್ರಶಸ್ತಿ" ಪ್ರಧಾನ ಮಾಡಲಾಯಿತು. 

Written by - Yashaswini V | Last Updated : Mar 13, 2024, 01:29 PM IST
  • ಇಂತಹ ಕಾರ್ಯಕ್ರಮಗಳು ಯುವಜನತೆಗೆ ಸ್ಪೂರ್ತಿ- ಸಚಿವ ಸಂತೋಷ್‌ಲಾಡ್‌
  • ಯುವ ಸಾಧಕರ ಸಾಧನೆ ಯುವ ಪೀಳಿಗೆಗೆ ಸ್ಪೂರ್ತಿಯಾಗಲಿದೆ- ಅಶ್ವಿನಿ ಪುನೀತ್‌ರಾಜ್‌ಕುಮಾರ್‌
  • ಯುವರತ್ನ ಎಂಬ ಹೆಸರಿನ ಸ್ಪೂರ್ತಿಯೇ ಪುನೀತ್‌ರಾಜ್‌ಕುಮಾರ್‌ ಎಂದು ಪುನೀತ್‌ ಅವರ ಸ್ಮರಣೆ ಮಾಡಿದ ನಟ ವಿಜಯರಾಘವೇಂದ್ರ
ಈ ವಾರಾಂತ್ಯದಲ್ಲಿ ತಪ್ಪದೇ ವೀಕ್ಷಿಸಿ ಜೀ ಕನ್ನಡ ನ್ಯೂಸ್‌ನ 'ಯುವರತ್ನ ಅವಾರ್ಡ್ಸ್'  title=

Zee Kannada News Yuvaratna Awards: ಜೀ ಕನ್ನಡ ನ್ಯೂಸ್‌ ವತಿಯಿಂದ ಬೆಂಗಳೂರಿನ, ದ ಲಲಿತ್‌ ಅಶೋಕ್‌ ಹೋಟೆಲ್‌ನಲ್ಲಿ ಯುವ ಸಾಧಕರನ್ನು ಗುರುತಿಸಿ ಗೌರವಿಸುವ "ಯುವರತ್ನ" ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಸಮಾಜಿಕ, ರಾಜಕೀಯ, ಶಿಕ್ಷಣ, ವೈದ್ಯಕೀಯ, ಕ್ರೀಕಾ, ಕೈಗಾರಿಕಾ, ಖಾಸಗೀ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು, ತಳಮಟ್ಟದಿಂದ ಬೆಳೆದು ಎಲೆಮರೆ ಕಾಯಿಯಂತೆ ಇರುವ ಉದ್ಯಮಿಗಳನ್ನು ಗುರ್ತಿಸುವ ಕಾರ್ಯಕ್ರಮವೇ ಯುವರತ್ನ. 

ಯುವಜನಕ್ಕೆ ಸ್ಪೂರ್ತಿಯಾಗುವ ನಿಟ್ಟಿನಲ್ಲಿ ಸಾಧಕರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಜೀ ಕನ್ನಡ ನ್ಯೂಸ್‌ ಮಾಡುತ್ತಿದೆ. ಅದರಂತೆ 2023-24 ರ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ,  ಒಟ್ಟು 35 ಜನ ಯುವ ಸಾಧಕರು ಆಯ್ಕೆಯಾಗಿದ್ದರು. ಅವರೆಲ್ಲರನ್ನೂ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿ ಗೌರವಿಸಿ "ಯುವರತ್ನ ಪ್ರಶಸ್ತಿ" ಪ್ರಧಾನ ಮಾಡಲಾಯಿತು. 

ಜೀ ಕನ್ನಡ ನ್ಯೂಸ್‌ನ 'ಯುವರತ್ನ ಅವಾರ್ಡ್ಸ್'  ಕಾರ್ಯಕ್ರಮಕ್ಕೆ ಸಚಿವರಾದ ರಾಮಲಿಂಗರೆಡ್ಡಿ, ಚಲುವರಾಯಸ್ವಾಮೀ, ಸಂತೋಷ್‌ಲಾಡ್‌ ಮತ್ತು ಶಿವರಾಜ್‌ ತಂಗಡಗಿ ಆಗಮಿಸಿದ್ದರು. 

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಶಿವರಾಜ್‌ತಂಗಡಗಿ, ಹೈದರಬಾದ್‌ ಕರ್ನಾಟಕದಲ್ಲಿಯೂ ಇಂಥಹ ಕಾರ್ಯಕ್ರಮಗಳು ಆಗಬೇಕು ಎಂದರು. ಸಚಿವ ಸಂತೋಷ್‌ಲಾಡ್‌ ಮಾತನಾಡಿ, ಇಂತಹ ಕಾರ್ಯಕ್ರಮಗಳು ಯುವಜನತೆಗೆ ಸ್ಪೂರ್ತಿ ಎಂದರು. ಸಚಿವ ಚಲುವರಾಯಸ್ವಾಮೀ ಅವರು ಮಾತನಾಡಿ, ಸಾಧಕರ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದರು. ರಾಮಲಿಂಗರೆಡ್ಡಿ ಅವರು ಯುವ ಸಾಧಕರ ಸಾಧನೆಯನ್ನು ಕೊಂಡಾಡಿದರು. ಇವರ ಜೊತೆಗೆ ಚಿತ್ರರಂಗದ ಗಣ್ಯರಾದ ನಿರ್ಮಾಪಕಿ ಅಶ್ವಿನಿ ಪುನೀತ್‌ರಾಜ್‌ಕುಮಾರ್‌, ಯುವ ಸಾಧಕರ  ಸಾಧನೆ ಯುವ ಪೀಳಿಗೆಗೆ ಸ್ಪೂರ್ತಿಯಾಗಲಿದೆ ಎಂದು ನುಡಿದರೆ, ನಟ ವಿಜಯರಾಘವೇಂದ್ರ ಮಾತನಾಡಿ, ಯುವರತ್ನ ಎಂಬ ಹೆಸರಿನ ಸ್ಪೂರ್ತಿಯೇ ಪುನೀತ್‌ರಾಜ್‌ಕುಮಾರ್‌ ಎಂದು ಪುನೀತ್‌ ಅವರ ಸ್ಮರಣೆ ಮಾಡಿದರು.  

ಕಾರ್ಯಕ್ರಮಕ್ಕೆ ಆಗಮಿಸಿದ್ದ ಆಕ್ಷನ್ ಪ್ರಿನ್ಸ್ ಧೃವಸರ್ಜಾ ಇದೊಂದು ಉತ್ತಮ ಕಾರ್ಯಕ್ರಮ ಇಂಥಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದರು. ಕಾಟೇರ ಚಿತ್ರದ ನಾಯಕಿ ಆರಾಧಾನ ಯುವ ಸಾಧಕರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಜೀ ಕನ್ನಡ ಗನ್ಯೂಸ್ ಗುರುತಿಸಿದ್ದ ಯುವರತ್ನ ಪ್ರಶಸ್ತಿಗೆ ಭಾಜನರಾದ ಸಾಧಕರಿಗೆ, ರಾಜಕೀಯ ಗಣ್ಯರು ಮತ್ತು ಚಿತ್ರ ತಾರೆಯರು ಸನ್ಮಾನ ಮಾಡಿ ಯುವರತ್ನ ಪ್ರಶಸ್ತಿ ಪ್ರಧಾನ ಮಾಡಿದರು. ಜೀ ಕನ್ನಡ ನ್ಯೂಸ್‌ ಪ್ರಧಾನ ಸಂಪಾಕ ರವಿ.ಎಸ್‌ ಗೌಡ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು ಹಾಗೂ ಯುವರತ್ನ ಪ್ರಶಸ್ತಿಗೆ ಭಾಜನರಾದ ಎಲ್ಲರಿಗೂ ಶುಭಕೋರಿದರು. ರಾಜಕೀಯ ಗಣ್ಯರು ಹಾಗೂ ಚಿತ್ರ ತಾರೆಯರ ಆಗಮನದಿಂದ ಕಾರ್ಯಕ್ರಮದ ಮೆರಗು ಮತ್ತಷ್ಟು ಹೆಚ್ಚಾಗಿತ್ತು. ಈ ಕಾರ್ಯಕ್ರಮ ಇದೇ ಮಾರ್ಚ್ 17 ರ ಭಾನುವಾರದಂದು ಸಂಜೆ 6 ಗಂಟೆಗೆ ನಿಮ್ಮ ನೆಚ್ಚಿನ ಜೀ ಕನ್ನಡ ನ್ಯೂಸ್‌ನಲ್ಲಿ ಪ್ರಸಾರವಾಗಲಿದೆ. 
 
ಜೀ ಕನ್ನಡ ನ್ಯೂಸ್‌ನ ಯುವರತ್ನ ಪ್ರಶಸ್ತಿಗೆ ಆಯ್ಕೆಯಾದವರ ವಿವರ ಕೆಳಕಂಡತಿದೆ.  
1 ಡಾ. ಮನೋಜ್ ಕುಮಾರ್ ಕೃಷ್ಣಪ್ಪ - ಇಟಾಚಿ ಸಂಸ್ಥೆಯ ಹೋಲ್ ಟೈಮ್ ಡೈರೆಕ್ಟರ್ ಮತ್ತು ಕಂಟ್ರಿ ಹೆಡ್
2 ಬಸವರಾಜಪ್ಪ ಮಲ್ಲಪ್ಪ ಜರಾಲಿ - ಹಿರಿಯ ವಕೀಲರು ಹಾಗೂ ಬಾರ್ ಅಸೋಷಿಯೇಷನ್ ಅಧ್ಯಕ್ಷರು  
3 ಸಿಎ ದಯಾನಂದ್ ಬೊಂಗಾಳೆ - ಹೂಡಿಕೆದಾರರು, ವರ್ತಕರು, ತರಬೇತುದಾರರು 
4 ನವೀನ್ ಅಲ್ಮಾಜೆ - ಉದ್ಯಮಿ
5 ಡಾ. ಸತ್ಯಪ್ರಸಾದ್ ಶೆಟ್ಟಿ- ವೈದ್ಯರು 
6 ಭರತ್ ಗೌಡ S V - ರಾಜಕೀಯ ಸಂಘಟಕರು 
7 Dr. M.G.ರಂಗಧಾಮಯ್ಯ-ರಾಜಕೀಯ ಮುಖಂಡರು ಹಾಗೂ ಸಮಾಜ ಸೇವಕರು 
8 ಶಿವರಾಜ್ ದೇಶ್ಮುಖ್ - ಸಮಾಜ ಸೇವಕರು
9 ಗಿರಿಮಲ್ಲಪ್ಪ ಕಲ್ಲಪ್ಪ ಜೋಗೂರ್-ಉದ್ಯ್ಯಮಿ
10 ಡಾ.S .ಛಾಯಾಕುಮಾರಿ-ಶಿಕ್ಷಣ ತಜ್ಞರು 
11 ವಿಶ್ವನಾಥ್ G P. - ಕನ್ನಡಪರ ಹೋರಾಟಗಾರರು 
12 T V. ಬಾಬು - ಸಮಾಜ ಸೇವಕರು ಹಾಗೂ ಯುವ ಮುಖಂಡರು 
13 ಶ್ರೀ ಮಹದೇಶ್ವರ ಸ್ವಾಮೀಜಿ - ಉಪಾಧ್ಯಕ್ಷರು, ಬಸವಧರ್ಮ ಪೀಠ - ಮಹಾಮನೆ ಮಹಾಮಠ ಕೂಡಲಸಂಗಮ 
14 ಬಸಲಿಂಗಪ್ಪ ನಿಂಗನೂರ್ - ಶಿಕ್ಷಣ ಪ್ರೇಮಿ
15 ಮಹಾಂತೇಶ್ ಟಿ. ಪೂಜಾರ್ - ಉದ್ಯಮಿ
16 ಅದಿತಿ - ಹೆಲ್ಪಿಂಗ್ ಹಾರ್ಟ್ಸ್ ಸಂಸ್ಥೆಯ ಅಧ್ಯಕ್ಷರು 
17 G D.ಹರೀಶ್ ಗೌಡ - ಜನಪ್ರಿಯ ಶಾಸಕರು, ಹುಣಸೂರು ಕ್ಷೇತ್ರ 
18 ಅರುಣ್ ಯೋಗಿರಾಜ್ - ಶಿಲ್ಪಿ 
19 ಉದಯ್ ಶಿವಕುಮಾರ್ - ಉದ್ಯಮಿ
20 M.ಬಸವರಾಜ್ ಪಡುಕೋಟೆ - ಕನ್ನಡಪರ ಹೋರಾಟಗಾರ 
21 ಸುರೇಶ್ ಸಿದ್ದಗೌಡ ನಾರಪ್ಪಗೋಳ - ಉದ್ಯಮಿ
22 ಡಾ.R S.ಶೆಟ್ಟಿಯನ್ - ಅಥೇನಾ ಹಾಸ್ಪಿಟಲ್ ಸಂಸ್ಥಾಪಕರು
23 ವೀಣಾ ಕಾಶಪ್ಪನವರ್ - ರಾಜಕೀಯ ಮುಖಂಡರು ಹಾಗೂ ಸಮಾಜ ಸೇವಕರು 
24 ರಾಮೋಜಿಗೌಡ - ಶಿಕ್ಷಣ ಪ್ರೇಮಿ , ಯುವ ನಾಯಕರು 
25 ಗಿರಿಧರ್ ರಾಜು K K - ಜ್ಯೋತಿಷಿ ಹಾಗೂ ವಾಸ್ತು ತಜ್ಞರು
26 ಡಾ. ಶ್ರೀಹರಿ ಕುಲಕರ್ಣಿ - ವೈದ್ಯ್ಯರು 
27 ಚಿರಂತ್ ಗೌಡ  - ಯುವ ಉದ್ಯಮಿ
28 ಡಾ. ಗೀತಾ ಗುಡ್ಡೆಮನೆ - ಕ್ರೀಡೆ ಮತ್ತು ಶಿಕ್ಷಣ 
29 M. ವೆಂಕಟೇಶ್ - ರಾಜಕೀಯ ಮುಖಂಡರು ಹಾಗೂ ಸಮಾಜ ಸೇವಕರು 
30 ಅನಿಲ್ ನಾಚಪ್ಪ - ರಾಜಕೀಯ ಮುಖಂಡರು, ಉದ್ಯಮಿ
31 ಸಂದೀಪ್ ಕುಮಾರ್ K K - ನುಕೋಟ್ ಸಂಸ್ಥೆಯ ನಿರ್ದೇಶಕರು
32 ಮುನಿರಾಜಪ್ಪ N . - ಅಣ್ಣೇಶ್ವರ ಗ್ರಾ.ಪಂ ಉಪಾಧ್ಯಕ್ಷರು 
33 N K ಮಹೇಶ್ ಕುಮಾರ್ - ಯುವ ನಾಯಕರು ಹಾಗೂ ಸಮಾಜ ಸೇವಕರು
34 ಡಾ. ಶೇಖರ್ R ಮಾನೆ - ವೈದ್ಯರು ಹಾಗೂ ಸಮಾಜ ಸೇವಕರು
35 ACF ಕೃಷ್ಣಮೂರ್ತಿ-ಸಮಾಜ ಸೇವಕರು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News