ಸ್ಮಾರ್ಟ್‌ಫೋನ್‌ನಲ್ಲಿ ಭಾರತೀಯರು ಏನನ್ನು ಹೆಚ್ಚು ವೀಕ್ಷಿಸುತ್ತಾರೆ..?

ಭಾರತೀಯರು ಸ್ಮಾರ್ಟ್ ಫೋನ್‍ಗಳಲ್ಲಿ ಎಷ್ಟು ಸಮಯ ಕಳೆಯುತ್ತಾರೆ ಎಂಬುದನ್ನು ವರದಿಯೊಂದು ಬಹಿರಂಗಪಡಿಸಿದೆ. ಭಾರತೀಯ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಸರಾಸರಿ 3 ಗಂಟೆಗಳಿಗಿಂತ ಹೆಚ್ಚು ಮತ್ತು ದಿನಕ್ಕೆ 46 ನಿಮಿಷಗಳಿಗಿಂತ ಹೆಚ್ಚು ಆನ್‌ಲೈನ್ ಗೇಮಿಂಗ್‌ನಲ್ಲಿ ಕಳೆಯುತ್ತಾರೆ.

Written by - Puttaraj K Alur | Last Updated : Aug 19, 2023, 08:52 AM IST
  • ಭಾರತೀಯರು ಸಾಮಾಜಿಕ ಮಾಧ್ಯಮದಲ್ಲಿ 3 ಗಂಟೆಗಿಂತ ಹೆಚ್ಚು ಸಮಯ ಕಳೆಯುತ್ತಾರೆ
  • ದಿನಕ್ಕೆ 46 ನಿಮಿಷಗಳಿಗಿಂತ ಹೆಚ್ಚು ಆನ್‌ಲೈನ್ ಗೇಮಿಂಗ್‌ನಲ್ಲಿ ಕಳೆಯುತ್ತಾರೆ
  • ಭಾರತೀಯರು OTTಯಲ್ಲಿ 44 ನಿಮಿಷ ಕಾಲ ಕಳೆಯುತ್ತಾರೆ
ಸ್ಮಾರ್ಟ್‌ಫೋನ್‌ನಲ್ಲಿ ಭಾರತೀಯರು ಏನನ್ನು ಹೆಚ್ಚು ವೀಕ್ಷಿಸುತ್ತಾರೆ..? title=
ಭಾರತೀಯರು ಏನನ್ನು ಹೆಚ್ಚು ವೀಕ್ಷಿಸುತ್ತಾರೆ..?

ನವದೆಹಲಿ: ಸ್ಮಾರ್ಟ್‌ಫೋನ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಫೋನ್‌ನಲ್ಲಿ ಮಾತನಾಡುವುದು, ಸಂದೇಶ ಕಳುಹಿಸುವುದು ಅಥವಾ ಇಂಟರ್ನೆಟ್‌ನಲ್ಲಿಯೇ ಹಲವಾರು ಕೆಲಸ ಹೀಗೆ ಎಲ್ಲದಕ್ಕೂ ಫೋನ್ ಬಳಸುತ್ತಾರೆ. ಆದರೆ ನಾವು ದಿನಕ್ಕೆ ಎಷ್ಟು ಗಂಟೆಗಳ ಕಾಲ ಫೋನ್‌ನಲ್ಲಿ ಕಳೆಯುತ್ತೇವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಹೊಸ ವರದಿಯೊಂದು ಹೊರಬಿದ್ದಿದ್ದು, ಇದರಲ್ಲಿ ಭಾರತೀಯರು ಫೋನ್‌ನಲ್ಲಿ ಹೆಚ್ಚು ಏನನ್ನು ನೋಡುತ್ತಾರೆ ಮತ್ತು ಅವರು ಎಷ್ಟು ಸಮಯವನ್ನು ಕಳೆಯುತ್ತಾರೆ ಎಂಬುದು ತಿಳಿದುಬಂದಿದೆ.

3 ಗಂಟೆಗೂ ಹೆಚ್ಚು ಸಮಯ  

ಭಾರತೀಯ ಬಳಕೆದಾರರು ಸರಾಸರಿ ಸಾಮಾಜಿಕ ಮಾಧ್ಯಮದಲ್ಲಿ 3 ಗಂಟೆಗಳಿಗಿಂತ ಹೆಚ್ಚು ಮತ್ತು ದಿನಕ್ಕೆ 46 ನಿಮಿಷಗಳಿಗಿಂತ ಹೆಚ್ಚು ಆನ್‌ಲೈನ್ ಗೇಮಿಂಗ್‌ನಲ್ಲಿ ಕಳೆಯುತ್ತಾರೆ. ಇದನ್ನು ಹೊಸ ವರದಿಯಲ್ಲಿ ಹೇಳಲಾಗಿದೆ. ತಂತ್ರಜ್ಞಾನ ನೀತಿ ಥಿಂಕ್ ಟ್ಯಾಂಕ್ ಏಷ್ಯಾ ಸೆಂಟರ್ ಪ್ರಕಾರ, ಸಾಮಾಜಿಕ ಮಾಧ್ಯಮವು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಜನರು ಪ್ರತಿದಿನ 194 ನಿಮಿಷಗಳಿಗಿಂತ ಹೆಚ್ಚು ಸಾಮಾಜಿಕ ಮಾಧ್ಯಮದಲ್ಲಿ ಕಳೆಯುತ್ತಾರೆ. ಅದೇ ರೀತಿ OTTಯಲ್ಲಿ 44 ನಿಮಿಷಗಳು ಮತ್ತು ಆನ್‌ಲೈನ್ ಗೇಮಿಂಗ್ 46 ನಿಮಿಷ ಕಳೆಯುತ್ತಾರಂತೆ.

ಇದನ್ನೂ ಓದಿ: ಬುರ್ಖಾ ಧರಿಸಿ ಬಾಲಕಿಯರ ವಾಶ್‍ರೂಂಗೆ ಹೋದ ವ್ಯಕ್ತಿ! ಮುಂದೆನಾಯ್ತು ಗೊತ್ತಾ?

ಆನ್‌ಲೈನ್ ಗೇಮಿಂಗ್‍ಗೆ ಹೆಚ್ಚು ಖರ್ಚು!  

ಸರಾಸರಿ ಬಳಕೆದಾರರು ಆನ್‌ಲೈನ್ ಗೇಮಿಂಗ್‌ನಲ್ಲಿ ತಿಂಗಳಿಗೆ 100 ರೂ.ಗಿಂತ ಕಡಿಮೆ ಮತ್ತು ದಿನಕ್ಕೆ 1 ಗಂಟೆಗಿಂತ ಕಡಿಮೆ ಖರ್ಚು ಮಾಡುತ್ತಾರೆ. ಅವರು OTTನಲ್ಲಿ 200-400 ರೂ. ಖರ್ಚು ಮಾಡುತ್ತಾರಂತೆ. ಸುಮಾರು 2 ಸಾವಿರ ಭಾಗವಹಿಸುವವರ ನಡುವೆ ಸಮೀಕ್ಷೆ ನಡೆಸಲಾಗಿದ್ದು, 143 ಮೊಬೈಲ್ ಅಪ್ಲಿಕೇಶನ್‌ಗಳ 20.6 ಲಕ್ಷಕ್ಕೂ ಹೆಚ್ಚು ಬಳಕೆದಾರರ ಅಪ್ಲಿಕೇಶನ್‌ನಲ್ಲಿನ ಡೇಟಾದ ಆಧಾರದ ಮೇಲೆ ಈ ವರದಿಯನ್ನು ಸಿದ್ಧಪಡಿಸಲಾಗಿದೆ.

ಹೆಚ್ಚುವರಿಯಾಗಿ ಆನ್‌ಲೈನ್ ಆಟಗಳಿಗೆ ಭಾಗವಹಿಸುವಿಕೆಯ ಶುಲ್ಕದಲ್ಲಿ 30% ಹೆಚ್ಚಳವು Engagementನಲ್ಲಿ 71% ಕುಸಿತಕ್ಕೆ ಕಾರಣವಾಗಬಹುದು ಎಂದು ಬಳಕೆದಾರರು ಹೇಳಿದ್ದಾರೆ. ಇದು ಹೆಚ್ಚಿನ ಬೆಲೆ ಸಂವೇದನೆಯನ್ನು ಸೂಚಿಸುತ್ತದೆ. ಒಟಿಟಿಗೆ ಈ ಸಂಖ್ಯೆ ಕೇವಲ 17 ಪ್ರತಿಶತ ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Chandrayaan 3 : ಚಂದ್ರನ ಅತೀ ಸಮೀಪದ ಫೋಟೋ ತೆಗೆದ ʻವಿಕ್ರಮ್‌ʼ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News