Best Selling Sedan Cars: ಮಾರುತಿ ಡಿಜೈರ್ ಸೆಪ್ಟೆಂಬರ್ 2022 ರಲ್ಲಿ ಸೆಡಾನ್ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟಗೊಂಡ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ತಿಂಗಳು, ಕಂಪನಿಯು ಈ ಕಾರಿನ ಒಟ್ಟು 9,601 ಯುನಿಟ್ ಗಳನ್ನು ಮಾರಾಟ ಮಾಡಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ ಮಾರಾಟವಾದ 2,141 ಯುನಿಟ್ಗಳಿಗೆ ಇದನ್ನು ಹೋಲಿಸಿದರೆ. DZire ವರ್ಷದಿಂದ ವರ್ಷಕ್ಕೆ 7,460 ಯೂನಿಟ್ ಗಳ ಹೆಚ್ಚಳ ಸಾಧಿಸಿದೆ. ಸೆಪ್ಟೆಂಬರ್ 2021 ಕ್ಕೆ ಹೋಲಿಸಿದರೆ ಸೆಪ್ಟೆಂಬರ್ 2022 ರಲ್ಲಿ ಅದರ ಮಾರಾಟದಲ್ಲಿ ಶೇ.348.44ರಷ್ಟು ಪ್ರಚಂಡ ಬೆಳವಣಿಗೆಯನ್ನು ದಾಖಲಿಸಲಾಗಿದೆ. ಆದರೆ, ಮಾಸಿಕ ಲೆಕ್ಕಾಚಾರದಲ್ಲಿ ಕುಸಿತನ್ನು ಗಮನಿಸಲಾಗಿದೆ. ಕಂಪನಿಯು ಆಗಸ್ಟ್ 2022 ರಲ್ಲಿ ಕಂಪನಿಯು 11,868 ಯುನಿಟ್ ಡಿಜೈರ್ಗಳನ್ನು ಮಾರಾಟ ಮಾಡಿತ್ತು, ಸೆಪ್ಟೆಂಬರ್ನಲ್ಲಿ ಅದು ಶೇ.19.10 ರಷ್ಟು ಕುಸಿತ ಅನುಭವಿಸಿದೆ. ಆದರೆ, ಇದರ ನಂತರವೂ ಇದು ಸೆಪ್ಟೆಂಬರ್ 2022 ರಲ್ಲಿ ಹೆಚ್ಚು ಮಾರಾಟವಾದ ಸೆಡಾನ್ ಕಾರ್ ಎಂಬ ಹೆಸರನ್ನು ಅದು ಉಳಿಸಿಕೊಂಡಿದೆ. ಇದರ ಬೆಲೆ ರೂ 5.98 ಲಕ್ಷದಿಂದ (ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತದೆ. ಇದು ಈ ಪಟ್ಟಿಯಲ್ಲಿರುವ ಅತ್ಯಂತ ಅಗ್ಗದ ಸೆಡಾನ್ ಕಾರ್ ಆಗಿದೆ.
ಇದರ ನಂತರ ಹ್ಯುಂಡೈ ಔರಾ ಎರಡನೇ ಅತಿ ಹೆಚ್ಚು ಮಾರಾಟವಾಗುವ ಸೆಡಾನ್ ಆಗಿದೆ. ಕಳೆದ ತಿಂಗಳು 4,239 ಯುನಿಟ್ಗಳನ್ನು ಮಾರಾಟ ಮಾಡಿತ್ತು. ಇದರ ಮಾರಾಟವು 48.11% ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ ಮತ್ತು 3.17% ನಷ್ಟು ಮಾಸಿಕ ಕುಸಿತ ಅನುಭವಿಸಿದೆ. ಇದರ ಮಾರುಕಟ್ಟೆ ಪಾಲು ಶೇಕಡಾ 13.52 ರಷ್ಟಿದೆ. ಇದಾದ ನಂತರ ಹೋಂಡಾ ಅಮೇಜ್ ಸೆಡಾನ್ ಮೂರನೇ ಸ್ಥಾನದಲ್ಲಿತ್ತು. ಸೆಪ್ಟೆಂಬರ್ 2022 ರಲ್ಲಿ, ಹೋಂಡಾ ಅಮೇಜ್ನ ಒಟ್ಟು 4,082 ಯುನಿಟ್ಗಳು ಮಾರಾಟವಾಗಿವೆ. ಅಮೇಜ್ ಮಾರಾಟವು ವಾರ್ಷಿಕ ಆಧಾರದ ಮೇಲೆ 97.87 ಪ್ರತಿಶತದಷ್ಟು ಹೆಚ್ಚಾಗಿದೆ. ಮಾಸಿಕ ಆಧಾರದ ಮೇಲೆ ಈ ಕಾರು ಶೇ.19.43 ರಷ್ಟು ಬೆಳವಣಿಗೆಯನ್ನು ದಾಖಲಿಸಿರುವುದು ಇಲ್ಲಿ ವಿಶೇಷ ಗಮನಾರ್ಹ.
ಇದನ್ನೂ ಓದಿ-Good News: ದೇಶಾದ್ಯಂತದ ಬ್ಯಾಂಕ್ ನೌಕರರಿಗೊಂದು ಭಾರಿ ಸಂತಸದ ಸುದ್ದಿ!
ಸೆಪ್ಟೆಂಬರ್ 2022 ರಲ್ಲಿ, ಟಾಟಾ ಟಿಗೋರ್, ಮಾರುತಿ ಡಿಜೈರ್, ಹುಂಡೈ ಔರಾ ಮತ್ತು ಹೋಂಡಾ ಅಮೇಜ್ ನಂತರ ಮಾರಾಟದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಟಾಟಾ ಟಿಗೋರ್ನ ಒಟ್ಟು 3,700 ಯುನಿಟ್ಗಳು ಮಾರಾಟವಾಗಿವೆ. ವರ್ಷದಿಂದ ವರ್ಷಕ್ಕೆ ಟಿಗೋರ್ನ ಮಾರಾಟವು 183.74% ರಷ್ಟು ಬೆಳೆದರೆ, MoM ಬೆಳವಣಿಗೆಯು 6.14% ರಷ್ಟಿದೆ. ಈ ವರ್ಷದ ಆರಂಭದಲ್ಲಿ ಈ ಸೆಡಾನ್ನ ಸಿಎನ್ಜಿ ಆವೃತ್ತಿಯನ್ನು ಸಹ ಬಿಡುಗಡೆ ಮಾಡಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-7th Pay Commission: ತುಟ್ಟಿ ಭತ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದ ಕೇಂದ್ರ ಸರ್ಕಾರ ಹೇಳಿದ್ದೇನು?
ಇದರ ನಂತರ, ಐದನೇ ಸಂಖ್ಯೆ ಹೋಂಡಾ ಸಿಟಿಯದ್ದಾಗಿದೆ. ಇದು ದೇಶದ ಅತ್ಯಂತ ಜನಪ್ರಿಯ ಸೆಡಾನ್ ಕಾರು. ಇದು ಸೆಪ್ಟೆಂಬರ್ 2022 ರಲ್ಲಿ 3,420 ಯುನಿಟ್ಗಳನ್ನು ಮಾರಾಟ ಮಾಡಿದೆ, ಇದು 2.15% ವಾರ್ಷಿಕ ಬೆಳವಣಿಗೆಯಾಗಿದೆ. ಆದಾಗ್ಯೂ, ಆಗಸ್ಟ್ 2022 ಕ್ಕೆ ಹೋಲಿಸಿದರೆ ಸೆಪ್ಟೆಂಬರ್ 2022 ರಲ್ಲಿ ಮಾರಾಟವು 1.95% ರಷ್ಟು ಕಡಿಮೆಯಾಗಿದೆ. ಆದಾಗ್ಯೂ, ಸೆಡಾನ್ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ ಇನ್ನೂ 10.91% ಪಾಲನ್ನು ಹೊಂದಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.