Gold And Silver Price, August 9, 2023: ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಳಿಕೆಯಾಗುತ್ತಲೇ ಇವೆ. ವಾರದ ಎರಡನೇ ವಹಿವಾಟಿನ ದಿನವೂ ಬೆಲೆ ಕುಸಿದಿದ್ದು, ಇಂದು 60,000 ಕ್ಕಿಂತ ಕಡಿಮೆಯಾಗಿದೆ. ಇದಲ್ಲದೇ ಬೆಳ್ಳಿ ಬೆಲೆಯೂ ಇಳಿಕೆಯಾಗಿದೆ. ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ನಲ್ಲಿ (MCX ಚಿನ್ನದ ಬೆಲೆ) ಈ ಬಗ್ಗೆ ಮಾಹಿತಿ ಲಭ್ಯವಿದೆ.
ಇದನ್ನೂ ಓದಿ: Horoscope: ಪಾರ್ವತಿತನಯನ ಆಶೀರ್ವಾದದಿಂದ ಇಂದು ಈ ರಾಶಿಗೆ ಸಂಪತ್ತಿನ ಮಳೆ: ವೃತ್ತಿಯಲ್ಲಿ ಯಶಸ್ಸು
ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆ ಕುಸಿತದ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲೂ ಕಂಡುಬರುತ್ತಿದೆ. ಪ್ರತಿ 10 ಗ್ರಾಂ ಚಿನ್ನದ ಬೆಲೆ 59,409 ರೂ.ನಲ್ಲಿ ವಹಿವಾಟು ನಡೆಸುತ್ತಿದ್ದು, ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್’ನಲ್ಲಿ ಶೇಕಡಾ 0.02 ರಷ್ಟು ಇಳಿಕೆಯಾಗಿದೆ. ಇದಲ್ಲದೇ ಬೆಳ್ಳಿಯ ದರದಲ್ಲಿ ಶೇ.0.09ರಷ್ಟು ಇಳಿಕೆಯಾಗಿ ಪ್ರತಿ ಕೆಜಿಗೆ ರೂ.71201ಕ್ಕೆ ತಲುಪಿದೆ.
ಫೆಡರಲ್ ರಿಸರ್ವ್ ಗವರ್ನರ್ ಹೇಳಿಕೆಯ ನಂತರ ಯುಎಸ್ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕುಸಿಯುತ್ತಲೇ ಇದ್ದವು. ಫೆಡ್ ರಿಸರ್ವ್ ಬಡ್ಡಿದರಗಳಲ್ಲಿ ಹೆಚ್ಚಳವನ್ನು ಸೂಚಿಸಿದೆ. ಈ ಕಾರಣದಿಂದಾಗಿ ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕುಸಿದಿವೆ. ಹಣದುಬ್ಬರವನ್ನು ನಿಗ್ರಹಿಸಲು ಬಡ್ಡಿದರಗಳು ಮತ್ತಷ್ಟು ಹೆಚ್ಚಾಗಬಹುದು ಎಂದು ಮಿಚೆಲ್ ಬೌಮನ್ ವರದಿ ಮಾಡಿದ್ದಾರೆ.
ಇದನ್ನೂ ಓದಿ: ಮುಂದಿನ 45 ದಿನ ಈ ರಾಶಿಯ ಬಾಳಲ್ಲಿ ಅಷ್ಟಲಕ್ಷ್ಮೀ ಅನುಗ್ರಹ: ಕಷ್ಟವೆಂಬುದೇ ಇರಲ್ಲ-ಅಖಂಡ ಸಂಪತ್ತು ನಿಮ್ಮ ಪಾಲು!
ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಸಹ ಪರಿಶೀಲಿಸಬಹುದು:
ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಪ್ರಕಾರ, ನೀವು 8955664433 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಮನೆಯಲ್ಲಿ ಕುಳಿತುಕೊಂಡೇ ಬೆಲೆಯನ್ನು ಪರಿಶೀಲಿಸಬಹುದು. ನೀವು ಸಂದೇಶವನ್ನು ಕಳುಹಿಸಿದ ಅದೇ ಸಂಖ್ಯೆಗೆ ಮರು ಸಂದೇಶವು ಬರುತ್ತದೆ. ಇನ್ನು ನೀವೂ ಕೂಡ ಮಾರುಕಟ್ಟೆಯಲ್ಲಿ ಚಿನ್ನ ಖರೀದಿಸಲು ಹೊರಟಿದ್ದರೆ ಹಾಲ್ ಮಾರ್ಕ್ ನೋಡಿದ ನಂತರವೇ ಚಿನ್ನ ಖರೀದಿಸಿ. ಚಿನ್ನದ ಶುದ್ಧತೆಯನ್ನು ಪರಿಶೀಲಿಸಲು ಸರ್ಕಾರಿ ಆ್ಯಪ್ ಅನ್ನು ಸಹ ಬಳಸಬಹುದು. ‘ಬಿಐಎಸ್ ಕೇರ್ ಆ್ಯಪ್’ ಮೂಲಕ ಚಿನ್ನ ನಿಜವೇ ಅಥವಾ ನಕಲಿಯೇ ಎಂಬುದನ್ನು ನೀವು ಪರಿಶೀಲಿಸಬಹುದು. ಇದಲ್ಲದೇ ಈ ಆಪ್ ಮೂಲಕವೂ ದೂರು ನೀಡಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.