Best Mileage Car: ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಮೈಲೇಜ್ ನೀಡುತ್ತೆ ಮಾರುತಿ ಸುಜುಕಿಯ ಈ ಕಾರ್

Best Mileage Car In Low Price: ಕಾರು ಖರೀದಿಸುವಾಗ ಕಾರಿನ ಬೆಲೆಯ ಜೊತೆಗೆ ಅದು ಎಷ್ಟು ಮೈಲೇಜ್ ನೀಡುತ್ತದೆ ಎಂಬ ವಿಷಯವೂ ಬಹಳ ಮುಖ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೈಗೆಟುವ ದರದಲ್ಲಿ ಅತ್ಯುತ್ತಮ ಮೈಲೇಜ್ ನೀಡುವಂತಹ ಹಲವು ಕಾರುಗಳು ಲಭ್ಯವಿದೆ. ಅಂತಹ ಕಾರಿನ ಬಗ್ಗೆ ಇಲ್ಲಿದೆ ಮಾಹಿತಿ.

Written by - Yashaswini V | Last Updated : Dec 5, 2022, 02:30 PM IST
  • ಬಹುತೇಕ ಕಾರು ತಯಾರಿಕ ಕಂಪನಿಗಳು ಸಿಎನ್‌ಜಿ ಕಾರು ವಿಭಾಗದತ್ತ ಗಮನ ಹರಿಸುತ್ತಿದ್ದಾರೆ.
  • ಈ ಕಂಪನಿಗಳಲ್ಲಿ ಮಾರುತಿ ಸುಜುಕಿ ಮುಂಚೂಣಿಯಲ್ಲಿದೆ.
  • ಮಾರುತಿ ಸುಜುಕಿ ಕಂಪನಿಯು ದೇಶದಲ್ಲಿ ಸಿಎನ್‌ಜಿ ಕಾರುಗಳ ಅತಿದೊಡ್ಡ ಪೋರ್ಟ್‌ಫೋಲಿಯೊವನ್ನು ಹೊಂದಿದೆ.
Best Mileage Car: ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಮೈಲೇಜ್ ನೀಡುತ್ತೆ ಮಾರುತಿ ಸುಜುಕಿಯ ಈ ಕಾರ್  title=
Best Mileage Car

Best Mileage Car In Low Price: ಪ್ರಸ್ತುತ ಗಗನಕ್ಕೇರುತ್ತಿರುವ ಪೆಟ್ರೋಲ್-ಡೀಸೆಲ್ ದರದಿಂದಾಗಿ ಹೆಚ್ಚಿನ ಜನರು ಎಲೆಕ್ಟ್ರಿಕ್ ಕಾರ್, ಇಲ್ಲವೇ ಸಿಎನ್‌ಜಿ ಕಾರುಗಳತ್ತ ಒಲವು ತೋರುತ್ತಿದ್ದಾರೆ. ಅದರಲ್ಲೂ, ಕೈಗೆಟುಕುವ ದರದಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕಾರುಗಳು ಜನರನ್ನು ಹೆಚ್ಚು ಆಕರ್ಷಿಸುತ್ತವೆ. ವರದಿಯೊಂದರ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಎಂಟ್ರಿ ಲೆವೆಲ್ ಕಾರುಗಳಲ್ಲಿ  ಸಿಎನ್‌ಜಿ ಕಿಟ್ ಇರುವ ಮಾಡೆಲ್ ಗಳಿಗೆ ಬಾರೀ ಬೇಡಿಕೆ ಇದೆ. ಮಾತ್ರವಲ್ಲ, ಭವಿಷ್ಯದಲ್ಲಿ ಹಲವು ಎಸ್‌ಯುವಿಗಳು ಸಿಎನ್‌ಜಿ ಕಿಟ್‌ನೊಂದಿಗೆ ಬರಲಿವೆ ಎಂದು ಹೇಳಲಾಗುತ್ತಿದೆ. ಈ ಎಲ್ಲದರ ನಡುವೆ, ಕಾರಿನ ಬೆಲೆ ಮಾತ್ರವಲ್ಲ, ಅತ್ಯುತ್ತಮ ಮೈಲೇಜ್ ನೀಡುವ ಕಾರುಗಳು ಹೆಚ್ಚು ಜನಪ್ರಿಯವಾಗುತ್ತಿವೆ. ನೀವೂ ಸಹ ಅತಿ ಹೆಚ್ಚು ಮೈಲೇಜ್ ನೀಡುವ ಸಿಎನ್‌ಜಿ ಕಾರನ್ನು ಖರೀದಿಸಲು ಬಯಸಿದರೆ ಮಾರುತಿ ಸುಜುಕಿ ಕಂಪನಿಯ ಸೆಲೆರಿಯೊ ಸಿಎನ್‌ಜಿ ಅತ್ಯುತ್ತಮ ಆಯ್ಕೆ ಎಂದು ಸಾಬೀತುಪಡಿಸಬಹುದು. ಮಾರುತಿ ಸೆಲೆರಿಯೋದ ಬೆಲೆ, ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ.

ಅತ್ಯಧಿಕ ಮೈಲೇಜ್ ನೀಡುವ ಸಿಎನ್‌ಜಿ ಮಾದರಿಯ ಕಾರ್:
ಪ್ರಸ್ತುತ, ಬಹುತೇಕ ಕಾರು ತಯಾರಿಕ ಕಂಪನಿಗಳು ಸಿಎನ್‌ಜಿ ಕಾರು ವಿಭಾಗದತ್ತ ಗಮನ ಹರಿಸುತ್ತಿದ್ದಾರೆ. ಈ ಕಂಪನಿಗಳಲ್ಲಿ ಮಾರುತಿ ಸುಜುಕಿ ಮುಂಚೂಣಿಯಲ್ಲಿದೆ. ಮಾರುತಿ ಸುಜುಕಿ ಕಂಪನಿಯು ದೇಶದಲ್ಲಿ ಸಿಎನ್‌ಜಿ ಕಾರುಗಳ ಅತಿದೊಡ್ಡ ಪೋರ್ಟ್‌ಫೋಲಿಯೊವನ್ನು ಹೊಂದಿದೆ. ಕಂಪನಿಯು ಸಿಎನ್‌ಜಿ ಕಾರು ವಿಭಾಗದಲ್ಲಿ ಉತ್ತಮ ಹಿಡಿತವನ್ನು ಹೊಂದಿದ್ದು ದೇಶದಲ್ಲಿ ಹತ್ತಕ್ಕೂ ಹೆಚ್ಚು ಸಿಎನ್‌ಜಿ ಮಾದರಿಯ ಕಾರುಗಳನ್ನು ಮಾರಾಟ ಮಾಡುತ್ತಿದೆ. ಅವುಗಳಲ್ಲಿ ಹೆಚ್ಚು ಇಂಧನ ದಕ್ಷತೆಯ ಕಾರು ಎಂದರೆ  ಮಾರುತಿ ಸೆಲೆರಿಯೊ ಕಾರ್ ಆಗಿದೆ.

ಇದನ್ನೂ ಓದಿ- Good News: ವಾಹನ ಸವಾರರಿಗೊಂದು ಭಾರಿ ಸಂತಸದ ಸುದ್ದಿ ಪ್ರಕಟಿಸಿದ Nitin Gadkari

ಮಾರುತಿ ಸೆಲೆರಿಯೊ ಸಿಎನ್‌ಜಿ ಕಾರ್ ಮೈಲೇಜ್:
ಮಾರುತಿ ಸುಜುಕಿ ಕಂಪನಿಯ ಮಾರುತಿ ಸೆಲೆರಿಯೊ ಸಿಎನ್‌ಜಿ ಕಾರ್ 35 ಕಿಮೀಗಿಂತ ಹೆಚ್ಚು ಮೈಲೇಜ್ ನೀಡಬಲ್ಲದು.  ಇದು ಸಿಎನ್‌ಜಿನಲ್ಲಿ 35.6 kmpl ವರೆಗೆ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ- Cheapest Bikes: iPhone ಬೆಲೆಯಲ್ಲಿ ಖರೀದಿಸಬಹುದಾದ 5 ಅಗ್ಗದ ಬೈಕ್ಸ್ ಇಲ್ಲಿವೆ!

ಮಾರುತಿ ಸೆಲೆರಿಯೊ ಬೆಲೆ: 
* ಮಾರುತಿ ಸೆಲೆರಿಯೊ ಎಕ್ಸ್ ಶೋ ರೂಂ ಬೆಲೆ 5.25 ಲಕ್ಷದಿಂದ 7 ಲಕ್ಷದವರೆಗೆ ಇರುತ್ತದೆ. ಇದು ನಾಲ್ಕು ಟ್ರಿಮ್ ಹಂತಗಳಲ್ಲಿ (LXI, VXI, ZXI ಮತ್ತು ZXI+) ಬರುತ್ತದೆ. 
* ಇದರ VXI ಟ್ರಿಮ್‌ನಲ್ಲಿ  ಸಿಎನ್‌ಜಿ ಆಯ್ಕೆಯನ್ನು ನೀಡಲಾಗಿದೆ. ಅಂದರೆ, ಪೆಟ್ರೋಲ್ ಮತ್ತು ಪೆಟ್ರೋಲ್+CNG ಆಯ್ಕೆಗಳು VXI ಟ್ರಿಮ್‌ನಲ್ಲಿ ಲಭ್ಯವಿದೆ.
*  ಮಾರುತಿ ಸೆಲೆರಿಯೊ ಸಿಎನ್‌ಜಿ ಕಾರ್ ಎಕ್ಸ್ ಶೋ ರೂಂ ಬೆಲೆ 6.69 ಲಕ್ಷ ರೂಪಾಯಿಗಳು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News