ಕೋಟ್ಯಂತರ ರೈತರ ಖಾತೆಗೆ ಈ ದಿನದಂದು ಬರಲಿದೆ ರೂ.2000: 16ನೇ ಕಂತು ಬಿಡುಗಡೆ ಮಾಡಲಿರುವ ಪ್ರಧಾನಿ ಮೋದಿ

PM Kisan Samman Nidhi Yojana: ಕೇಂದ್ರ ಸರ್ಕಾರದಿಂದ ನೀಡಲಾದ ಈ ಹಣವನ್ನು ಮೂರು ಸಮಾನ ಕಂತುಗಳಲ್ಲಿ ತಲಾ 2,000 ರೂ.ನಂತೆ ನೀಡಲಾಗುತ್ತದೆ. ಈ ಹಿಂದೆ, 15 ನೇ ಕಂತಿನ ರೂ 2000 ಅನ್ನು ಡಿಬಿಟಿ ಮೂಲಕ 15 ನವೆಂಬರ್ 2023 ರಂದು ಫಲಾನುಭವಿಗಳ ಖಾತೆಗಳಿಗೆ ವರ್ಗಾಯಿಸಲಾಗಿದೆ.

Written by - Bhavishya Shetty | Last Updated : Feb 27, 2024, 11:08 AM IST
    • ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 16 ನೇ ಕಂತಿನ ಹಣ
    • ಪ್ರಧಾನಿ ಮೋದಿ ಅವರು ಯೋಜನೆಯ ಕಂತನ್ನು ಬಿಡುಗಡೆ ಮಾಡಲಿದ್ದಾರೆ
    • ಮೂರು ಸಮಾನ ಕಂತುಗಳಲ್ಲಿ ತಲಾ 2,000 ರೂ.ನಂತೆ ನೀಡಲಾಗುತ್ತದೆ
ಕೋಟ್ಯಂತರ ರೈತರ ಖಾತೆಗೆ ಈ ದಿನದಂದು ಬರಲಿದೆ ರೂ.2000: 16ನೇ ಕಂತು ಬಿಡುಗಡೆ ಮಾಡಲಿರುವ ಪ್ರಧಾನಿ ಮೋದಿ title=
Pradhan Mantri Kisan Samman Nidhi

PM Kisan Samman Nidhi Yojana: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 16 ನೇ ಕಂತಿನ ಹಣ, ಫೆಬ್ರವರಿ 28ರಂದು ಬಿಡುಗಡೆಯಾಗಲಿದೆ. ಪ್ರಧಾನಿ ಮೋದಿ ಅವರು ಯೋಜನೆಯ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ಸುಮಾರು ಒಂಬತ್ತು ಕೋಟಿ ಫಲಾನುಭವಿ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ. ಇತ್ತೀಚೆಗೆ, ಅಧಿಕೃತ ವೆಬ್‌ಸೈಟ್‌’ನಲ್ಲಿ (https://pmkisan.gov.in) ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಕಂತು ಬಿಡುಗಡೆಯ ಮಾಹಿತಿಯನ್ನು ನೀಡಲಾಗಿದೆ.

ಕೇಂದ್ರ ಸರ್ಕಾರದಿಂದ ನೀಡಲಾದ ಈ ಹಣವನ್ನು ಮೂರು ಸಮಾನ ಕಂತುಗಳಲ್ಲಿ ತಲಾ 2,000 ರೂ.ನಂತೆ ನೀಡಲಾಗುತ್ತದೆ. ಈ ಹಿಂದೆ, 15 ನೇ ಕಂತಿನ ರೂ 2000 ಅನ್ನು ಡಿಬಿಟಿ ಮೂಲಕ 15 ನವೆಂಬರ್ 2023 ರಂದು ಫಲಾನುಭವಿಗಳ ಖಾತೆಗಳಿಗೆ ವರ್ಗಾಯಿಸಲಾಗಿದೆ. ಆ ಸಮಯದಲ್ಲೂ 8 ಕೋಟಿಗೂ ಹೆಚ್ಚು ರೈತರಿಗೆ 18 ಸಾವಿರ ಕೋಟಿ ರೂ.ಗಳನ್ನು ತಲುಪಿಸಲಾಗಿತ್ತು.

ಇದನ್ನೂ ಓದಿ: ಅಕಾಯ್ ಜೊತೆ ಅನುಷ್ಕಾ… ವಾಮಿಕಾ ಜೊತೆ ವಿರಾಟ್: ಲಂಡನ್ ಹೊಟೇಲ್’ನಲ್ಲಿ ಊಟ ಮಾಡುತ್ತಿರುವ ಫೋಟೋ ವೈರಲ್

ಇ-ಕೆವೈಸಿ ಪೂರ್ಣಗೊಳಿಸದ ಕಾರಣ ಅಥವಾ ಇತರೆ ದಾಖಲೆಗಳ ಕೊರತೆಯಿಂದ 15ನೇ ಕಂತು ಸಿಗದೇ ಇದ್ದ ರೈತರು, ಈಗ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಅಂತಹವರಿಗೆ ಈ ಬಾರಿ 4000 ರೂಪಾಯಿ ಬರುವ ನಿರೀಕ್ಷೆ ಇದೆ.

ಯಾವುದೇ ಸಮಸ್ಯೆಯಿದ್ದಲ್ಲಿ ಇಲ್ಲಿ ಸಂಪರ್ಕಿಸಿ:

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಯಿದ್ದಲ್ಲಿ, ರೈತರು pmkisan-ict@gov.in ಗೆ ಇ-ಮೇಲ್ ಮಾಡಬಹುದು. ಇದರ ಹೊರತಾಗಿ ನೀವು 155261 ಅಥವಾ 1800115526 (ಟೋಲ್ ಫ್ರೀ) ಅಥವಾ 011-23381092 ಅನ್ನು ಸಂಪರ್ಕಿಸಬಹುದು. ಪಿಎಂ-ಕಿಸಾನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಾಟ್‌-ಬಾಟ್ (ಕಿಸಾನ್ ಇ-ಮಿತ್ರ) ಅನ್ನು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ವಿವಿಧ ಭಾಷೆಗಳಲ್ಲಿ ಪರಿಚಯಿಸಿದೆ. ಈ ಮೂಲಕವೂ ರೈತರ ಸಮಸ್ಯೆಗಳನ್ನು ಆಲಿಸಲಾಗುತ್ತಿದೆ.

ಫಲಾನುಭವಿ ಸ್ಟೇಟಸ್ ಪರಿಶೀಲಿಸಿ

> ಮೊದಲಿಗೆ PM-Kisan Nidhi pmkisan.gov.in ನ ಅಧಿಕೃತ ವೆಬ್‌ಸೈಟ್‌’ಗೆ ಹೋಗಿ.

> ಇದರ ನಂತರ ಮುಖಪುಟದಲ್ಲಿ ನೀಡಿರುವ 'ಫಾರ್ಮರ್ ಕಾರ್ನರ್' ಗೆ ಹೋಗಿ.

> ಈಗ 'ಫಲಾನುಭವಿ ಸ್ಟೇಟಸ್' ಮೇಲೆ ಕ್ಲಿಕ್ ಮಾಡಿ.

> ಡ್ರಾಪ್-ಡೌನ್ ಮೆನುಗೆ ಹೋಗಿ. ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಅಥವಾ ಗ್ರಾಮವನ್ನು ಆಯ್ಕೆಮಾಡಿ.

> ಈಗ ಸ್ಟೇಟಸ್ ಅನ್ನು ನೋಡಲು 'ವರದಿ ಪಡೆಯಿರಿ' ಮೇಲೆ ಕ್ಲಿಕ್ ಮಾಡಿ.

ಯೋಜನೆಗೆ ಯಾರು ಅರ್ಹರಲ್ಲ?

ಪಿಎಂ-ಕಿಸಾನ್ ಯೋಜನೆಯ ಲಾಭವು ಆದಾಯ ತೆರಿಗೆ ಪಾವತಿಸುವ ರೈತರಿಗೆ ಲಭ್ಯವಿರುವುದಿಲ್ಲ. ಇದಲ್ಲದೆ, ಮಹಾನಗರ ಪಾಲಿಕೆಗಳ ಮೇಯರ್‌’ಗಳು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಮತ್ತು ರಾಜ್ಯ ವಿಧಾನಸಭೆಗಳು, ರಾಜ್ಯ ವಿಧಾನ ಪರಿಷತ್ತುಗಳು, ಲೋಕಸಭೆ ಅಥವಾ ರಾಜ್ಯಸಭೆಯ ಮಾಜಿ ಅಥವಾ ಹಾಲಿ ಸದಸ್ಯರಂತಹ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು ಸಹ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅರ್ಹರಲ್ಲ. 2024-25ರ ಮಧ್ಯಂತರ ಬಜೆಟ್ ಅನ್ನು ಮಂಡಿಸುವಾಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೃಷಿ ವಲಯದಲ್ಲಿ ಮೌಲ್ಯವರ್ಧನೆ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಪ್ರಯತ್ನಗಳನ್ನು ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭವಿಷ್ಯದ ನಿರ್ದೇಶಕರಿಗೆ 'ಜುಗಲ್ ಬಂದಿ' ಅರ್ಪಣೆ: ಅಸಿಸ್ಟೆಂಟ್ ಡೈರೆಕ್ಟರ್’ಗಳಿಗೆ ಸ್ಪೆಷಲ್ ಶೋ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News