ನವದೆಹಲಿ: ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಕಾರುಗಳ ಭರಾಟೆ ಜೋರಾಗಿದೆ. ಎಸ್‌ಯುವಿ ಕಾರುಗಳ ಹೆಚ್ಚುತ್ತಿರುವ ಜನಪ್ರಿಯತೆಯ ನಡುವೆ, ಮಾರುಕಟ್ಟೆಯಲ್ಲಿ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಎಸ್‌ಯುವಿ ಕಾರುಗಳು ಲಭ್ಯವಿವೆ. ನೀವೂ ಸಹ ಕೈಗೆಟುಕುವ ಮತ್ತು ಶಕ್ತಿಯುತ SUV ಖರೀದಿಸಲು ಯೋಚಿಸುತ್ತಿದ್ದರೆ ಇಲ್ಲಿದೆ ಉತ್ತಮ ಅವಕಾಶ. ಇಲ್ಲಿ ನಾವು 10 ಲಕ್ಷದೊಳಗಿನ 5 ಕೈಗೆಟುಕುವ SUVಗಳ ಮಾಹಿತಿ ನೀಡಿದ್ದೇವೆ.
1. ಟಾಟಾ ನೆಕ್ಸಾನ್: ಟಾಟಾ ನೆಕ್ಸಾನ್ ಕಂಪನಿಯ ಅತ್ಯುತ್ತಮ ಮಾರಾಟವಾದ ಕಾರು ಮತ್ತು ಜನಪ್ರಿಯ ಎಸ್‌ಯುವಿ ಆಗಿದೆ. ಇದು ಗ್ಲೋಬಲ್ NCAP ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳಲ್ಲಿ ಮ್ಯಾನುಯಲ್ ಮತ್ತು ಆಟೋಮೇಟೆಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಟಾಟಾ ನೆಕ್ಸಾನ್ ಬೆಲೆ 7.7 ಲಕ್ಷದಿಂದ 14 ಲಕ್ಷದವರೆಗೆ ಇದೆ.
2. ಮಾರುತಿ ಬ್ರೆಝಾ: ಮಾರುತಿ ಬ್ರೆಝಾ ಸಹ ಜನಪ್ರಿಯ ಎಸ್‌ಯುವಿ ಕಾರು ಆಗಿದ್ದು, ಫೆಬ್ರವರಿ 2023ರಲ್ಲಿ ಹೆಚ್ಚು ಮಾರಾಟವಾದ ಕಾರು ಎನಿಸಿಕೊಂಡಿದೆ. ಇದು ಅತ್ಯಂತ ಕೈಗೆಟುಕುವ ಬೆಲೆಯಲ್ಲಿದೆ ಮತ್ತು 7-ಇಂಚಿನ ಸ್ಮಾರ್ಟ್‌ಪ್ಲೇ ಸ್ಟುಡಿಯೋ ಟಚ್‌ಸ್ಕ್ರೀನ್ ಮತ್ತು LED ಟೈಲ್‌ಲೈಟ್‌ಗಳಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಮಾರುತಿ ಬ್ರೆಝಾ ಬೆಲೆ 8.19 ಲಕ್ಷದಿಂದ 14.04 ಲಕ್ಷ ರೂ.ವರೆಗೆ ಇದೆ.
ಇದನ್ನೂ ಓದಿ: Post Office ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದವರಿಗೆ ಹೊಡೀತು ಬಂಪರ್ ಲಾಟರಿ
3. ಹ್ಯುಂಡೈ ವೆನ್ಯೂ: ಹ್ಯುಂಡೈ ಕಳೆದ ವರ್ಷ ತನ್ನ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಿತು. ನೋಟ ಮತ್ತು ವೈಶಿಷ್ಟ್ಯಗಳೆರಡರಲ್ಲೂ ಇದು ಅದ್ಭುತವಾಗಿದೆ. ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಡೀಸೆಲ್ ಮತ್ತು ಪೆಟ್ರೋಲ್ ಎರಡರಲ್ಲೂ ಲಭ್ಯವಿದೆ. ಹುಂಡೈ ವೆನ್ಯೂ ಬೆಲೆ 7.68 ಲಕ್ಷದಿಂದ 13.11 ಲಕ್ಷದವರೆಗೆ ಇರುತ್ತದೆ.
4. ಮಹೀಂದ್ರಾ XUV 300: ಇದು ಮಹೀಂದ್ರಾದ ಶಕ್ತಿಶಾಲಿ SUV ಕಾರಾಗಿದ್ದು, ಇದು ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಮತ್ತು ಸನ್‌ರೂಫ್‌ನಂತಹ ಹಲವು ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು ಮ್ಯಾನುಯಲ್ ಮತ್ತು AMT ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ಲಭ್ಯವಿದೆ. ಮಹೀಂದ್ರಾ XUV 300 ಬೆಲೆ 8.41 ಲಕ್ಷದಿಂದ 14.07 ಲಕ್ಷ ರೂ.ವರೆಗೆ ಇದೆ.
5. ರೆನಾಲ್ಟ್ ಕಿಗರ್: ಇದು ದೇಶದ ಅಗ್ಗದ ಸಬ್-ಕಾಂಪ್ಯಾಕ್ಟ್ SUV ಕಾರುಗಳಲ್ಲಿ ಒಂದಾಗಿದೆ. ಇದು ಎಲ್ಇಡಿ ಹೆಡ್ಲೈಟ್ಗಳು, ಪುಶ್ ಸ್ಟಾರ್ಟ್ ಮತ್ತು ವೈರ್ಲೆಸ್ ಚಾರ್ಜಿಂಗ್ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ರೆನಾಲ್ಟ್ ಕಿಗರ್ ಬೆಲೆ 6.5 ಲಕ್ಷದಿಂದ ಪ್ರಾರಂಭವಾಗಿ 11.23 ಲಕ್ಷ ರೂ.ವರೆಗೆ ಇರುತ್ತದೆ.
ಇದನ್ನೂ ಓದಿ: New Rules from 1st April: ಇಂದಿನಿಂದ ಬದಲಾಗುತ್ತಿವೆ ಈ ನಿಯಮಗಳು, ಸರ್ಕಾರದ ಬಹುಮುಖ್ಯ ನಿರ್ಧಾರ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.