Car Recall: ತಕ್ಷಣ ಈ ಕಾರುಗಳನ್ನು ಬಳಸುವುದನ್ನು ನಿಲ್ಲಿಸಿ, ಜೀವಕ್ಕೆ ಅಪಾಯವಿದೆ!

Toyota Cars: ಟೊಯೋಟಾ 8 ಡಿಸೆಂಬರ್ 2022 ಮತ್ತು 12 ಜನವರಿ 2023 ರ ನಡುವೆ ತಯಾರಿಸಲಾದ ಹೈರೈಡರ್ ಮತ್ತು ಗ್ಲಾನ್ಜಾ ಘಟಕಗಳನ್ನು ಹಿಂಪಡೆದಿದೆ. ಈ ಮಾದರಿಗಳ ಘಟಕಗಳಲ್ಲಿ ದೋಷವಿರಬಹುದು, ಅದನ್ನು ತಕ್ಷಣವೇ ಸರಿಪಡಿಸಬೇಕಾಗಿದೆ.

Written by - Chetana Devarmani | Last Updated : Jan 19, 2023, 10:02 AM IST
  • ತಕ್ಷಣ ಈ ಕಾರುಗಳನ್ನು ಬಳಸುವುದನ್ನು ನಿಲ್ಲಿಸಿ
  • ಈ ಮಾದರಿಗಳ ಘಟಕಗಳಲ್ಲಿ ದೋಷವಿರಬಹುದು
  • ಟೊಯೊಟಾ ವಾಹನಗಳನ್ನು ವಾಪಸ್ ಪಡೆದಿದೆ
Car Recall: ತಕ್ಷಣ ಈ ಕಾರುಗಳನ್ನು ಬಳಸುವುದನ್ನು ನಿಲ್ಲಿಸಿ, ಜೀವಕ್ಕೆ ಅಪಾಯವಿದೆ!   title=

Toyota Recalls 1400 Units: ಟೊಯೋಟಾವು 8 ಡಿಸೆಂಬರ್ 2022 ಮತ್ತು 12 ಜನವರಿ 2023 ರ ನಡುವೆ ತಯಾರಿಸಲಾದ ಹೈರೈಡರ್ ಮತ್ತು ಗ್ಲ್ಯಾನ್ಜಾ ಘಟಕಗಳನ್ನು ಹಿಂಪಡೆದಿದೆ. ಈ ಮಾದರಿಗಳ 1,390 ಘಟಕಗಳಲ್ಲಿ ದೋಷವಿರಬಹುದು, ಅದನ್ನು ತಕ್ಷಣವೇ ಸರಿಪಡಿಸಬೇಕಾಗಿದೆ. ಈ ಕಾರುಗಳ ಏರ್‌ಬ್ಯಾಗ್ ನಿಯಂತ್ರಕ ದೋಷಯುಕ್ತವಾಗಿರಬಹುದು. ಈ ಪರಿಸ್ಥಿತಿಯಲ್ಲಿ, ಅಪಘಾತ ಸಂಭವಿಸಿದಲ್ಲಿ, ಏರ್‌ಬ್ಯಾಗ್‌ಗಳು ತೆರೆಯುವುದಿಲ್ಲ. ಆದರೆ ಅಂತಹ ಯಾವುದೇ ಘಟನೆ ಬೆಳಕಿಗೆ ಬಂದಿಲ್ಲ. ಆದರೆ, ಮುನ್ನೆಚ್ಚರಿಕೆಯಾಗಿ ಟೊಯೊಟಾ ವಾಹನಗಳನ್ನು ವಾಪಸ್ ಪಡೆದಿದೆ. 

ಇದನ್ನೂ ಓದಿ : ಶೀಘ್ರದಲ್ಲಿಯೇ ಸರ್ಕಾರಿ ನೌಕರರ ಮೇಲೆ ಹಣದ ಸುರಿಮಳೆ, ಮಾರ್ಚ್ 2023 ರಲ್ಲಿ ವೇತನದಲ್ಲಿ 90 ಸಾವಿರ ಹೆಚ್ಚಳ! ಇಲ್ಲಿದೆ ಲೆಕ್ಕಾಚಾರ

ತಪಾಸಣೆಯ ನಂತರ ಯಾವುದೇ ಭಾಗವು ದೋಷಯುಕ್ತವೆಂದು ಕಂಡುಬಂದರೆ, ಗ್ರಾಹಕರಿಗೆ ಯಾವುದೇ ವೆಚ್ಚವಿಲ್ಲದೆ ಉಚಿತವಾಗಿ ಆ ವಾಹನವನ್ನು ಬದಲಾಯಿಸಲಾಗುತ್ತದೆ. ಸಂಭಾವ್ಯ ದೋಷಪೂರಿತ ಭಾಗವು ಪ್ರಯಾಣಿಕರ ಸುರಕ್ಷತೆಗೆ ನೇರವಾಗಿ ಸಂಬಂಧಿಸಿರುವುದರಿಂದ, ಹಿಂಪಡೆಯಲಾದ ಕಾರುಗಳ (ಗ್ಲಾನ್ಜಾ ಮತ್ತು ಹೈರೈಡರ್) ಮಾಲೀಕರಿಗೆ ತನಿಖೆ ನಡೆಯುವವರೆಗೆ ತಮ್ಮ ಕಾರುಗಳನ್ನು ಮಿತವಾಗಿ ಬಳಸುವಂತೆ ಕಾರು ತಯಾರಕರು ವಿನಂತಿಸಿದ್ದಾರೆ. ಸಂಬಂಧಪಟ್ಟ ಟೊಯೋಟಾ ಡೀಲರ್ ಖರೀದಿದಾರರನ್ನು ಸಂಪರ್ಕಿಸುತ್ತಾರೆ ಅಥವಾ ಗ್ರಾಹಕರು ಸ್ವತಃ ಡೀಲರ್ ಅನ್ನು ಸಂಪರ್ಕಿಸಬಹುದು.

ಅಪಘಾತದ ಸಂದರ್ಭದಲ್ಲಿ ಕಾರಿನಲ್ಲಿರುವ ಏರ್‌ಬ್ಯಾಗ್‌ಗಳು ತೆರೆದುಕೊಳ್ಳದಿದ್ದರೆ, ಅದರಲ್ಲಿ ಕುಳಿತಿರುವವರ ಜೀವಕ್ಕೆ ಅಪಾಯವಿದೆ. ಅಪಘಾತದ ಸಂದರ್ಭದಲ್ಲಿ, ಪ್ರಯಾಣಿಕರ ಜೀವ ಉಳಿಸುವಲ್ಲಿ ಏರ್ ಬ್ಯಾಗ್ ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕಾಗಿಯೇ, ಯಾವುದೇ ಕಾರಿನಲ್ಲಿ ಕನಿಷ್ಠ 2 ಏರ್‌ಬ್ಯಾಗ್‌ಗಳನ್ನು ಹೊಂದಿರಬೇಕು ಎಂದು ಸರ್ಕಾರವು ಈಗಾಗಲೇ ಕಡ್ಡಾಯಗೊಳಿಸಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕಾರಿನ ಏರ್‌ಬ್ಯಾಗ್‌ಗಳನ್ನು ಪ್ರಧಾನ ಸುರಕ್ಷತಾ ವೈಶಿಷ್ಟ್ಯಗಳಾಗಿ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ : ಹಳೆ ಪಿಂಚಣಿ ಯೋಜನೆ ಬಗ್ಗೆ ಶಾಕಿಂಗ್ ಮಾಹಿತಿ ನೀಡಿದ ರಿಸರ್ವ್ ಬ್ಯಾಂಕ್ !

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News