Stock Market Updates: ಷೇರುಪೇಟೆಯಲ್ಲಿ ʼಕರಡಿʼ ಕುಣಿತಕ್ಕೆ ಕರಗಿತು ₹6 ಲಕ್ಷ ಕೋಟಿ ಸಂಪತ್ತು..!

Stock Market Updates: ಬುಧವಾರದ ದಿನದ ವಹಿವಾಟಿನ ಅಂತ್ಯಕ್ಕೆ SENSEX  ಬರೋಬ್ಬರಿ 790.34 ಪಾಯಿಂಟ್ಸ್‌ (1.08%) ಕುಸಿತ ಕಂಡು 72,304.88ಕ್ಕೆ ತಲುಪಿದರೆ, NIFTY 50 247.20 ಪಾಯಿಂಟ್ಸ್‌  ಕಳೆದುಕೊಂಡು  21,951.15(1.11%)ಕ್ಕೆ ಕುಸಿತ ಕಂಡಿದೆ. 

Written by - Puttaraj K Alur | Last Updated : Feb 28, 2024, 08:42 PM IST
  • ಷೇರುಪೇಟೆಯಲ್ಲಿ ಕರಡಿ ಕುಣಿತದ ಹೊಡೆತಕ್ಕೆ ನಲುಗಿದ ಹೂಡಿಕೆದಾರರು
  • ಭಾರೀ ಕುಸಿತ ಕಂಡ Sensex & Nifty, ಕೈಸುಟ್ಟುಕೊಂಡ ಹೂಡಿಕೆದಾರರು
  • ಒಂದೇ ದಿನ ಕರಗಿದ ಹೂಡಿಕೆದಾರರ 6 ಲಕ್ಷ ಕೋಟಿ ರೂ. ಸಂಪತ್ತು
Stock Market Updates: ಷೇರುಪೇಟೆಯಲ್ಲಿ ʼಕರಡಿʼ ಕುಣಿತಕ್ಕೆ ಕರಗಿತು ₹6 ಲಕ್ಷ ಕೋಟಿ ಸಂಪತ್ತು..!  title=
Sensex & Nifty ಭಾರೀ ಕುಸಿತ!

Stock Market Updates: ಭಾರತೀಯ ಷೇರುಪೇಟೆಯಲ್ಲಿ ಮತ್ತೆ ಕರಡಿ ಕುಣಿತದ ಪರಿಣಾಮ ಹೂಡಿಕೆದಾರರಿಗೆ ಭಾರೀ ನಷ್ಟವಾಗಿದೆ. ಬುಧವಾರದ ವಹಿವಾಟಿನಲ್ಲಿ ಒಂದು ರೀತಿ Bloodbath ಆದಂತಾಗಿದೆ. ಫೆಬ್ರವರಿ ತಿಂಗಳ ಕೊನೆಯ ವಾರದ ಸೋಮವಾರ ಕುಸಿತ ಕಂಡಿದ್ದ ಷೇರುಪೇಟೆ, ಮಂಗಳವಾರ ಚೇತರಿಕೆ ಕಂಡಿತ್ತು. ಆದರೆ ಇಂದು ಮತ್ತೆ ಭಾರೀ ಕುಸಿತ ಕಾಣುವ ಮೂಲಕ ಹೂಡಿಕೆದಾರರಿಗೆ ದೊಡ್ಡ ಹೊಡೆತ ನೀಡಿದೆ.

ಬುಧವಾರದ ಟ್ರೇಡಿಂಗ್‌ ಸೆಷನ್‌ನಲ್ಲಿ ಷೇರುಮಾರುಕಟ್ಟೆಯಿಂದ ಬರೋಬ್ಬರಿ 6 ಲಕ್ಷ ಕೋಟಿ ರೂ. ಸಂಪತ್ತು ಕರಗಿಹೋಗಿದೆ. ಪ್ರಮುಖ ಷೇರುಗಳಾದ POWERGRID(ಶೇ.4.22), BAJAJ-AUTO(3.82 ), APOLLO HOSPITAL(ಶೇ.3.77), RELIANCE INDUSTRIES(ಶೇ.1.89), ICICI(ಶೇ.1.28), HDFC(ಶೇ.0.99), KOTAK MAHINDRA BANK (ಶೇ.1.57) ಮುಂತಾದ ಕಂಪನಿಗಳ ಷೇರುಗಳು ಭಾರೀ ಕುಸಿತ ಕಂಡಿವೆ. 

ಇದನ್ನೂ ಓದಿ: Salary hike update : ಲೋಕಸಭೆ ಚುನಾವಣೆಗೂ ಮುನ್ನ ಸರ್ಕಾರಿ ಉದ್ಯೋಗಿಗಳಿಗೆ 3 ಪ್ರಮುಖ ಘೋಷಣೆಗಳು! ವೇತನದಲ್ಲಿ ಆಗುವುದು ಭಾರೀ ಹೆಚ್ಚಳ

ಮಿಡ್‌ ಕ್ಯಾಪ್‌ ಇಂಡೆಕ್ಸ್‌ನ ಬರೋಬ್ಬರಿ ಶೇ.80ರಷ್ಟು ಕಂಪನಿಗಳು ಭಾರೀ ನಷ್ಟದಲ್ಲಿ ವಹಿವಾಟು ಮಾಡಿವೆ. ಪವರ್‌, ಆಟೋ, ತೈಲ ಹಾಗೂ ರಿಯಾಲ್ಟಿ ಸೆಕ್ಟರ್‌ಗಳು ಶೇ.2ರಷ್ಟು ಕುಸಿದಿವೆ. ಈ ಸೆಕ್ಟರ್‌ಗಳಲ್ಲಿ ಹೆಚ್ಚಿನ ಸೆಲ್ಲಿಂಗ್‌ ಪ್ರೇಷರ್ ಕಂಡುಬಂದ ಕಾರಣ ಮಾರ್ಕೆಟ್‌ ಕುಸಿತಕ್ಕೆ ಕಾರಣವಾಗಿದೆ.‌

ಭಾರತ ಸೇರಿದಂತೆ ಏಲ್ಲಾ ಏಷ್ಯನ್‌ ಮಾರ್ಕೆಟ್‌ಗಳಲ್ಲೂ ಕುಸಿತ ಕಂಡುಬಂದಿದೆ. ಅಮೆರಿಕದ ಆರ್ಥಿಕ ಡೇಟಾಗಾಗಿ ಹೂಡಿಕೆದಾರರು ಕಾಯುತ್ತಿರುವುದು ಹಾಗೂ ಗುರುವಾರ ಬಿಡುಗಡೆಯಾಗಲಿರುವ 3ನೇ ಕ್ವಾರ್ಟರ್‌ನ GDP ಡೇಟಾದ ಮೇಲೂ ಹೂಡಿಕೆದಾರರು ಕಣ್ಣಿಟ್ಟಿದ್ದಾರೆ. 

ಇದನ್ನೂ ಓದಿ: Typical Farming: ಕಡಿಮೆ ಹೂಡಿಕೆ ಮತ್ತು ಹೆಚ್ಚು ಲಾಭ..! ಲಕ್ಷಗಟ್ಟಲೆ ದುಡಿಯುತ್ತಿರುವ ಆದರ್ಶ ರೈತ

ಬುಧವಾರದ ದಿನದ ವಹಿವಾಟಿನ ಅಂತ್ಯಕ್ಕೆ SENSEX ಬರೋಬ್ಬರಿ 790.34 ಪಾಯಿಂಟ್ಸ್‌ (1.08%) ಕುಸಿತ ಕಂಡು 72,304.88ಕ್ಕೆ ತಲುಪಿದರೆ, NIFTY 50 247.20 ಪಾಯಿಂಟ್ಸ್‌  ಕಳೆದುಕೊಂಡು  21,951.15(1.11%)ಕ್ಕೆ ಕುಸಿತ ಕಂಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News