SBI Woman Recruitment: ಪ್ರತಿಭಟನೆಯ ನಂತರ ಮಹಿಳಾ ನೇಮಕಾತಿ ನೀತಿಯನ್ನು ಬದಲಾಯಿಸಿದ ಎಸ್‌ಬಿಐ!

ಭಾರತೀಯ ಸ್ಟೇಟ್ ಬ್ಯಾಂಕ್ (SBI) ಟೀಕೆಗಳ ನಂತರ ಗರ್ಭಿಣಿಯರ ನೇಮಕಾತಿಗೆ ಸಂಬಂಧಿಸಿದ ಹೊಸ ನಿಯಮಗಳನ್ನು ಹಿಂತೆಗೆದುಕೊಳ್ಳಬೇಕಾಯಿತು. ಈ ಪ್ರಕರಣದಲ್ಲಿ ದೆಹಲಿ ಮಹಿಳಾ ಆಯೋಗವೂ ಬ್ಯಾಂಕ್ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ.

Written by - Zee Kannada News Desk | Last Updated : Jan 30, 2022, 08:20 AM IST
  • 3 ತಿಂಗಳು ಮೇಲ್ಪಟ್ಟ ಗರ್ಭಿಣಿಯರು ‘ಕೆಲಸಕ್ಕೆ ಅನರ್ಹ’ವೆಂಬ ಎಸ್‌ಬಿಐ ನಿಯಮಕ್ಕೆ ವ್ಯಾಪಕ ವಿರೋಧ
  • ನೋಟಿಸ್ ಜಾರಿ ಮಾಡಿ ಎಸ್‌ಬಿಐಗೆ ಛೀಮಾರಿ ಹಾಕಿದ ದೆಹಲಿ ಮಹಿಳಾ ಆಯೋಗ
  • ಪ್ರತಿಭಟನೆ & ತೀವ್ರ ಟೀಕೆಗಳ ಬಳಿಕ ಹೊಸ ನಿಯಮ ಹಿಂಪಡೆದ ಎಸ್‌ಬಿಐ ಬ್ಯಾಂಕ್
SBI Woman Recruitment: ಪ್ರತಿಭಟನೆಯ ನಂತರ ಮಹಿಳಾ ನೇಮಕಾತಿ ನೀತಿಯನ್ನು ಬದಲಾಯಿಸಿದ ಎಸ್‌ಬಿಐ!   title=
ಎಸ್‌ಬಿಐಗೆ ಛೀಮಾರಿ ಹಾಕಿದ ದೆಹಲಿ ಮಹಿಳಾ ಆಯೋಗ

ನವದೆಹಲಿ: ಪ್ರತಿಭಟನೆ ಮತ್ತು ತೀವ್ರ ಟೀಕೆಗಳ ಬಳಿಕ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗರ್ಭಿಣಿ ಮಹಿಳೆಯರಿಗೆ ಪ್ರಕಟಿಸಿದ್ದ ಪರಿಷ್ಕೃತ ನೇಮಕಾತಿ ನೀತಿಯನ್ನು ಹಿಂಪಡೆದಿದೆ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್(Swati Maliwal) ಅವರು ಶನಿವಾರ ಬ್ಯಾಂಕ್ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿದ್ದು, 48 ಗಂಟೆಗಳ ಒಳಗೆ ತಮ್ಮ ಉತ್ತರವನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.

ಬ್ಯಾಂಕ್ ಇತ್ತೀಚೆಗೆ ಹೊಸ ನಿಯಮ ಹೊರಡಿಸಿತ್ತು

ಇತ್ತೀಚೆಗೆ ಎಸ್‌ಬಿಐ ಹೊರಡಿಸಿದ್ದ ಹೊಸ ನೀತಿ(SBI New Rules)ಯಲ್ಲಿ 3 ತಿಂಗಳು ಹಾಗೂ ಅದಕ್ಕಿಂತ ಮೇಲ್ಪಟ್ಟ ಗರ್ಭಿಣಿ ಮಹಿಳೆಯರನ್ನು ತಾತ್ಕಾಲಿಕವಾಗಿ ಅನರ್ಹ ಎಂದು ಪರಿಗಣಿಸಿ ಹೆರಿಗೆಯಾದ ಬಳಿಕ 4 ತಿಂಗಳ ನಂತರ ಪುನಃ ಬ್ಯಾಂಕ್ ಉದ್ಯೋಗಕ್ಕೆ ಸೇರಬಹುದು ಎಂಬ ನಿಬಂಧನೆಯನ್ನು ವಿಧಿಸಲಾಗಿತ್ತು.

ಇದನ್ನೂ ಓದಿ: "ಹಿಂದು-ಮುಸ್ಲಿಂ ಧ್ರುವೀಕರಣ ರಾಜಕೀಯ ಉತ್ತರ ಪ್ರದೇಶದಲ್ಲಿ ನಡೆಯಲ್ಲ"

ಮಹಿಳಾ ವಿರೋಧಿ ನೀತಿ ಎಂದಿದ್ದ ಕಾರ್ಮಿಕ ಸಂಘಟನೆಗಳು

ಈ ಪರಿಷ್ಕೃತ ನೀತಿ(SBI Women Recruitment)ಗೆ ಹಲವು ಸಂಘಟನೆಗಳು, ಕಾರ್ಮಿಕ ಒಕ್ಕೂಟಗಳು, ದೆಹಲಿ ಮಹಿಳಾ ಆಯೋಗದಿಂದ ತೀವ್ರ ವಿರೋಧ, ಟೀಕೆ ವ್ಯಕ್ತವಾಗಿತ್ತು. ಎಸ್‌ಬಿಐ ಜಾರಿಗೆ ತಂದಿದ್ದ ಮಹಿಳಾ ವಿರೋಧಿ ಹೊಸ ನಿಯಮವನ್ನು ಹಿಂಪಡೆಯುವಂತೆ ದೆಹಲಿ ಮಹಿಳಾ ಆಯೋಗ ನೋಟಿಸ್ ಜಾರಿಮಾಡಿತ್ತು. ಎಸ್‌ಬಿಐ ಬ್ಯಾಂಕಿನ ಈ ಮಹಿಳಾ ವಿರೋಧಿ ನಡೆ ಖಂಡಿಸಿದ್ದ ದೆಹಲಿ ಮಹಿಳಾ ಆಯೋಗ ಮುಖ್ಯಸ್ಥೆ ಸ್ವಾತಿ, ‘ಎಸ್‌ಬಿಐ ಬ್ಯಾಂಕಿನ ಈ ನಿಯಮ ತಾರತಮ್ಯ ಮತ್ತು ಕಾನೂನು ಬಾಹಿರ ನಿಲುವಾಗಿದೆ. ಈ ನಿಯಮವನ್ನು ತಕ್ಷಣವೇ ಹಿಂಪಡೆಯಬೇಕೆಂದು ನೋಟಿಸ್ ನೀಡಿದ್ದೇವೆ. ಜೊತೆಗೆ ಹಿಂದಿನ ನಿಯಮ ಮತ್ತು ಬದಲಾವಣೆಯಾದ ನಿಯಮಗಳ ಒಂದು ಪ್ರತಿಯನ್ನು ಸಹ ಕೇಳಿದ್ದೇವೆ’ ಎಂದು ಹೇಳಿದ್ದರು.

‘ಗರ್ಭಿಣಿ ಮಹಿಳೆಯನ್ನು ತಾತ್ಕಾಲಿಕವಾಗಿ ಅನರ್ಹ ಎಂದು ಘೋಷಿಸುವುದನ್ನು ಒಪ್ಪಲು ಸಾಧ್ಯವಿಲ್ಲ. ಒಬ್ಬ ಮಹಿಳೆ ಗರ್ಭಿಣಿ(SBI Women Recruitment)ಯಾಗಿದ್ದಾಳೆಂದು ಅವಳಿಗೆ ಕೆಲಸದ ಅವಕಾಶಗಳನ್ನು ನಿರಾಕರಿಸುವುದು ಸರಿಯಲ್ಲ. ಇದು ಪಿತೃಪ್ರಭುತ್ವದ ಮನಸ್ಥಿತಿ ಮತ್ತು ಮಹಿಳಾ ವಿರೋಧಿ ಚಿಂತನೆಯನ್ನು ತೋರಿಸುತ್ತದೆ. ಈ ರೀತಿಯ ನಡೆಗಳನ್ನು ಸಹಿಸಲಾಗುವುದಿಲ್ಲವೆಂದು’ ಸ್ವಾತಿ ಅವರು ಖಡಕ್ ಎಚ್ಚರಿಕೆ ಸಂದೇಶ ನೀಡಿದ್ದರು.

ಇದನ್ನೂ ಓದಿ: ಹಸುವಿನ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ ಮಧ್ಯಪ್ರದೇಶದ ವ್ಯಕ್ತಿಗೆ ಥಳಿತ...!

ಪ್ರತಿಭಟನೆಗೆ ತಲೆಬಾಗಿದ ಬ್ಯಾಂಕ್ ಆಡಳಿತ ಮಂಡಳಿ

ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆ ಎಸ್‌ಬಿಐ ಗರ್ಭಿಣಿ ಮಹಿಳೆಯರ ನೇಮಕಾತಿ(SBI Women Recruitment)ಗೆ ಸಂಬಂಧಿಸಿದಂತೆ ಪರಿಷ್ಕೃತ ನೀತಿಗಳನ್ನು ತಡೆಹಿಡಿದಿದ್ದು, ಎಂದಿನ ನೀತಿಗಳನ್ನೇ ಪಾಲಿಸಲು ಸೂಚಿಸಲಾಗಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ‘ಗರ್ಭಿಣಿಯರ ನೇಮಕಾತಿಗೆ ಸಂಬಂಧಿಸಿದ ಹಳೆಯ ನಿಯಮಗಳೇ ಜಾರಿಯಾಗಲಿವೆ. ನೇಮಕಾತಿ ಸಂಬಂಧಿತ ಮಾನದಂಡಗಳಲ್ಲಿನ ತಿದ್ದುಪಡಿಯ ಹಿಂದಿನ ಉದ್ದೇಶವು ಅಸ್ಪಷ್ಟ ಅಥವಾ ಹಳೆಯ ಅಂಶಗಳನ್ನು ತೆಗೆದುಹಾಕಲಾಗಿದೆ. ಯಾರ ಭಾವನೆಗಳಿಗೂ ಧಕ್ಕೆ ತರುವುದು ನಮ್ಮ ಉದ್ದೇಶವಾಗಿರಲಿಲ್ಲ’ವೆಂದು ಬ್ಯಾಂಕ್ ಆಡಳಿತ ಮಂಡಳಿ ಹೇಳಿಕೆ ನೀಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News