SBI New Feature: ತನ್ನ ಗ್ರಾಹಕರಿಗೆ ಅದ್ಭುತ ಉಡುಗೊರೆ ನೀಡಿದ ಎಸ್ಬಿಐ, ಮನೆಯಲ್ಲಿಯೇ ಕುಳಿತು 35 ಲಕ್ಷ ರೂ ಸಾಲ ಪಡೆಯಬಹುದು

SBI New Feature: SBI ತನ್ನ ಗ್ರಾಹಕರಿಗೆ ಅದ್ಭುತವಾದ ಉಡುಗೊರೆಯನ್ನು ತಂದಿದೆ. ಈ ವಿಶೇಷ ಸೌಲಭ್ಯದ ಅಡಿಯಲ್ಲಿ, ಎಸ್‌ಬಿಐ ಗ್ರಾಹಕರು ಮನೆಯಲ್ಲಿ ಕುಳಿತು 35 ಲಕ್ಷ ರೂ.ವರೆಗಿನ ವೈಯಕ್ತಿಕ ಸಾಲವನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ.  

Written by - Nitin Tabib | Last Updated : May 23, 2022, 08:57 PM IST
  • ತನ್ನ ಗ್ರಾಹಕರಿಗೆ ಅದ್ಭುತ ಉಡುಗೊರೆ ನೀಡಿದ ಎಸ್ಬಿಐ
  • ಮನೆಯಲ್ಲಿಯೇ ಕುಳಿತು 35 ಲಕ್ಷ ರೂ.ವರೆಗೆ ಸಾಲ ಪಡೆಯಬಹುದು
  • ಯಾವ ಗ್ರಾಹಕರಿಗೆ ಈ ಸೌಲಭ್ಯ ಸಿಗಲಿದೆ ತಿಳಿಯಲು ಸುದ್ದಿ ಓದಿ
SBI New Feature: ತನ್ನ ಗ್ರಾಹಕರಿಗೆ ಅದ್ಭುತ ಉಡುಗೊರೆ ನೀಡಿದ ಎಸ್ಬಿಐ, ಮನೆಯಲ್ಲಿಯೇ ಕುಳಿತು 35 ಲಕ್ಷ ರೂ ಸಾಲ ಪಡೆಯಬಹುದು title=
SBI New Feature

SBI New Feature: ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ ಗ್ರಾಹಕರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಹೌದು , ಎಸ್ಬಿಐ ತನ್ನ ಗ್ರಾಹಕರಿಗೆ ವೈಯಕ್ತಿಕ ಸಾಲ ನೀಡಲು ಹೊಸ ಸೇವೆಯೊಂದನ್ನು ಪ್ರಾರಂಭಿಸಿದೆ. ರಿಯಲ್ ಟೈಮ್ ಎಕ್ಸ್‌ಪ್ರೆಸ್ ಕ್ರೆಡಿಟ್ ಹೆಸರಿನ ಈ ಸೌಲಭ್ಯದೊಂದಿಗೆ ಗ್ರಾಹಕರು ಮನೆಯಲ್ಲೇ ಕುಳಿತು 35 ಲಕ್ಷ ರೂ.ವರೆಗಿನ ಸಾಲವನ್ನು ಸುಲಭವಾಗಿ ಪಡೆಯಬಹುದು. ಇದನ್ನು SBI ನ YONO ಆಪ್‌ನಲ್ಲಿ ಪ್ರಾರಂಭಿಸಲಾಗಿದೆ. ಈ ವಿಶೇಷ ವೈಶಿಷ್ಟ್ಯದ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ

ಭರ್ಜರಿ ಉಡುಗೊರೆ ನೀಡಿದ ಎಸ್ಬಿಐ
SBI ರಿಯಲ್ ಟೈಮ್ ಎಕ್ಸ್‌ಪ್ರೆಸ್ ಕ್ರೆಡಿಟ್‌ನ ಈ ವಿಶೇಷ ಸೌಲಭ್ಯದ ಪ್ರಯೋಜನವನ್ನು ಎಲ್ಲಾ ಗ್ರಾಹಕರಿಗೆ ಲಭ್ಯವಿಲ್ಲ ಎಂಬುದು ಇಲ್ಲಿ ಗಮಹಾರ್ಹ. ಇದರ ಪ್ರಯೋಜನವು ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಮತ್ತು ರಕ್ಷಣಾ ಸೇವೆಗಳಲ್ಲಿ ನಿರತ ಗ್ರಾಹಕರಿಗೆ ಮಾತ್ರ ಲಭ್ಯವಿರಲಿದೆ. ಈ ವಿಶೇಷ ಸೌಲಭ್ಯದ ಅಡಿಯಲ್ಲಿ, ಗ್ರಾಹಕರು YONO ಅಪ್ಲಿಕೇಶನ್‌ನ ಸಹಾಯದಿಂದ ಮನೆಯಲ್ಲಿ ಕುಳಿತು ಕ್ರೆಡಿಟ್ ಚೆಕ್, ಅರ್ಹತೆ ಮತ್ತು ಇತರ ದಾಖಲೆಗಳ ಪರಿಶೀಲನೆಯಂತಹ ಕೆಲಸವನ್ನು ಮಾಡಲು ಸಾಧ್ಯವಾಗಲಿದೆ.

ಇದನ್ನೂ ಓದಿ-7th Pay Commission: ಹೊಸ ಸೂತ್ರದಡಿ ಸರ್ಕಾರಿ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳ, ಪ್ರತಿವರ್ಷ ಮೂಲವೇತನದಲ್ಲಿ ಪರಿಷ್ಕರಣೆ!

35 ಲಕ್ಷದವರೆಗೆ ಸಾಲ ಪಡೆಯಬಹುದು
ಎಸ್‌ಬಿಐನ ಈ ಸೌಲಭ್ಯದ ಅಡಿಯಲ್ಲಿ, ನೀವು 35 ಲಕ್ಷದವರೆಗೆ ಸಾಲವನ್ನು ಪಡೆಯಬಹುದು. ಇದರ ಸಂಪೂರ್ಣ ಪ್ರಕ್ರಿಯೆಯು ಆನ್‌ಲೈನ್ ಆಗಿರಲಿದೆ. ಕ್ರೆಡಿಟ್ ವಿಚಾರಣೆ, ಸಾಲದ ಅರ್ಹತೆ, ಸಾಲ ಮಂಜೂರಾತಿ ಮತ್ತು ದಾಖಲೆ ಸಲ್ಲಿಕೆಯಂತಹ ಎಲ್ಲಾ ಕೆಲಸಗಳನ್ನು ಸಹ ನೀವು ಆನ್‌ಲೈನ್‌ನಲ್ಲಿ ಮಾಡಬಹುದು.

ಇದನ್ನೂ ಓದಿ-Service Charge: ಇನ್ಮುಂದೆ ಹೋಟೆಲ್-ರೆಸ್ಟಾರೆಂಟ್ ಗಳಲ್ಲಿ ಸೇವಾ ಶುಲ್ಕ ನೀಡುವ ಅವಶ್ಯಕತೆ ಇಲ್ಲ, ಸರ್ಕಾರದ ಮಹತ್ವದ ಘೋಷಣೆ

ಎಸ್‌ಬಿಐ ನೀಡಿದ ಮಾಹಿತಿ ಏನು?
ಈ ಕುರಿತು ಮಾಹಿತಿ ನೀಡಿದ ಭಾರತೀಯ ಸ್ಟೇಟ್ ಬ್ಯಾಂಕ್ ಅಧ್ಯಕ್ಷ ದಿನೇಶ್ ಖಾರಾ, “ಯೋನೋದಲ್ಲಿ ರಿಯಲ್ ಟೈಮ್ ಎಕ್ಸ್‌ಪ್ರೆಸ್ ಕ್ರೆಡಿಟ್ ಲೋನ್ ಸೌಲಭ್ಯವನ್ನು ತನ್ನ ಅರ್ಹ ಮತ್ತು ವೆತನ ಪಡೆಯುತ್ತಿರುವ ಗ್ರಾಹಕರಿಗೆ ಪರಿಚಯಿಸುವುದರಿಂದ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಎಕ್ಸ್‌ಪ್ರೆಸ್ ಕ್ರೆಡಿಟ್ ಉತ್ಪನ್ನವು ಗ್ರಾಹಕರಿಗೆ ಯಾವುದೇ ತೊಂದರೆಗಳಿಲ್ಲದೆ ಡಿಜಿಟಲ್ ರೂಪದಲ್ಲಿ ಸಾಲವನ್ನು ಪಡೆಯಲು ಸಹಾಯ ಮಾಡಲಿದೆ. ಬ್ಯಾಂಕಿಂಗ್ ಅನ್ನು ಸುಲಭಗೊಳಿಸಲು ಗ್ರಾಹಕರಿಗೆ ಸಂಪೂರ್ಣ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸಲು ಎಸ್‌ಬಿಐ ಶ್ರಮಿಸುತ್ತಿದೆ' ಎಂದು ಅವರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News