RBI Update: RBI ನಿಂದ ನೂತನ ನಿಯಮ ಜಾರಿ, ನಿಮ್ಮ ಹಣಕಾಸಿನ ಮೇಲೂ ನೇರ ಪ್ರಭಾವ!

RBI Latest Rule - ದೇಶದ ದೊಡ್ಡ ಬ್ಯಾಂಕೇತರ ಹಣಕಾಸು ಕಂಪನಿಗಳಿಗಾಗಿ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳು ನಿಮ್ಮ ಜೇಬಿನ ಮೇಲೆ ನೇರ ಪ್ರಭಾವ ಬೀರಲಿವೆ. ಹಾಗಾದರೆ ಬನ್ನಿ ಹೇಗೆ ಈ ನಿಯಮಗಳು ನಿಮ್ಮ ಹಣಕಾಸಿನ ಮೇಲೆ ಪ್ರಭಾವ ಬೀರಲಿದೆ ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Mar 13, 2022, 04:59 PM IST
  • ನೂತನ ನಿಯಮಗಳನ್ನು ಜಾರಿಗೊಳಿಸಿದ RBI
  • NBFC ಕಂಪನಿಗಳ ಸ್ಥಿತಿಯನ್ನು ಸುಧಾರಿಸಲು RBI ನಿಂದ ಕಠಿಣ ನಿಯಮ ಜಾರಿ
  • ನಿಮ್ಮ ಹಣಕಾಸಿನ ಮೇಲೂ ಕೂಡ ಇದು ಪ್ರಭಾವ ಬೀರಲಿದೆ.
RBI Update: RBI ನಿಂದ ನೂತನ ನಿಯಮ ಜಾರಿ, ನಿಮ್ಮ ಹಣಕಾಸಿನ ಮೇಲೂ ನೇರ ಪ್ರಭಾವ! title=
RBI Latest Rule (File Photo)

ನವದೆಹಲಿ: RBI New Rule - ಬ್ಯಾಂಕಿಂಗ್ ಅಲ್ಲದ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಅಂದರೆ NBFC ಕಂಪನಿಗಳಿಗೆ RBI ಕಟ್ಟುನಿಟ್ಟಿನ ನಿಯಮಗಳನ್ನು ಹೊರಡಿಸಿದೆ. ಈ ನಿಯಮಗಳ ಅನುಷ್ಠಾನದ ನಂತರ, NBFC ಕಂಪನಿಗಳ ಸ್ಥಾನಮಾನ ಹೇಗಿದೆ ಎಂಬುದು ಸ್ಪಷ್ಟವಾಗಿ ತಿಲಿದ್ಯಲಿದೆ. ಇನ್ ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್ (PCA) ನಿಯಮಗಳ ಅನುಷ್ಠಾನದ ಬಳಿಕ, NBFC ಕಂಪನಿಯನ್ನು 3 ವಿಭಿನ್ನ ನಿಯತಾಂಕಗಳಲ್ಲಿ ಪರೀಕ್ಷಿಸಲಾಗುವ್ದು. ಈ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ ಬನ್ನಿ.

ಈ ನಿಯಮದ  ಮೊದಲ ನಿಯತಾಂಕ ಅಥವಾ ಪ್ಯಾರಾಮೀಟರ್‌ನಲ್ಲಿ ವಿಫಲವಾದ ನಂತರ, ರಿಸರ್ವ್ ಬ್ಯಾಂಕ್ NBFC ಕಂಪನಿಯ ಲಾಭಾಂಶ ವಿತರಣೆಯನ್ನು ನಿಲ್ಲಿಸಬಹುದು. ಅಷ್ಟೇ ಅಲ್ಲ, ಪ್ರವರ್ತಕರಿಗೆ ಹಣ ಹಾಕುವಂತೆ ಕಂಪನಿಗಳಿಗೆ RBI ಕೇಳಬಹುದು. ಇದೇ ವೇಳೆ ಎರಡನೇ ಪ್ಯಾರಾಮೀಟರ್ನಲ್ಲಿ ವಿಫಲವಾದರೆ, RBI ಕಂಪನಿಯ ಹೊಸ ಶಾಖೆಗಳನ್ನು ತೆರೆಯುವುದನ್ನು ನಿಷೇಧಿಸಬಹುದು ಮತ್ತು ವ್ಯಾಪಾರ ವಿಸ್ತರಣೆಯನ್ನು ನಿಲ್ಲಿಸಬಹುದು. ಕೊನೆಯದಾಗಿ ಮೂರನೇ ಪ್ಯಾರಾಮೀಟರ್‌ನಲ್ಲಿ ವಿಫಲವಾದ ನಂತರ, NBFC ಕಂಪನಿಯ ಆರೋಗ್ಯವು ಚೇತರಿಸಿಕೊಳ್ಳುವವರೆಗೆ ರಿಸರ್ವ್ ಬ್ಯಾಂಕ್ ಅದರ ವ್ಯವಹಾರವನ್ನು ನಿಲ್ಲಿಸಬಹುದು.

ಇದನ್ನೂ ಓದಿ-Post Office: April ನಿಂದ ಬದಲಾಗುತ್ತಿವೆ ಈ ನಿಯಮಗಳು, ಗಮನಿಸದೆ ಹೋದರೆ ತೊಂದರೆ ತಪ್ಪಿದ್ದಲ್ಲ

ನಿಯಮಗಳು ಯಾವಾಗ ಜಾರಿಗೆ ಬರುತ್ತವೆ?
ಹೊಸ ನಿಯಮಗಳ ಅನುಷ್ಠಾನದ ನಂತರ, ರಿಸರ್ವ್ ಬ್ಯಾಂಕ್, ಕಂಪನಿಯು ವ್ಯಾಪಾರ ಮಾಡಲು ಯೋಗ್ಯವಾಗಿದೆ ಎಂದು ಭಾವಿಸಿದರೆ ಮಾತ್ರ NBFC ಕಂಪನಿಯನ್ನು PCA ವ್ಯಾಪ್ತಿಯಿಂದ ಹೊರಗಿಡಲಿದೆ. ಈ ಹೊಸ ಮತ್ತು ಕಟ್ಟುನಿಟ್ಟಾದ ನಿಯಮಗಳು ಈ ವರ್ಷದ ಅಕ್ಟೋಬರ್‌ನಿಂದ ಅನ್ವಯಿಸಲಿವೆ. ರಿಸರ್ವ್ ಬ್ಯಾಂಕ್ ನ ಈ ಕ್ರಮವು NBFC ವಲಯದ ಸ್ಥಿತಿಯನ್ನು ಸುಧಾರಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ-7th Pay Commission : ಕೇಂದ್ರ ನೌಕರರಿಗೆ ಹೋಳಿ ಉಡುಗೊರೆ! ವೇತನದಲ್ಲಿ ₹8,000 ಹೆಚ್ಚಳ

ಈ ಹೊಸ ನಿಯಮಗಳು NBFC ವಲಯಕ್ಕೆ ಪ್ರಯೋಜನಕಾರಿ ಸಾಬೀತಾಗಲಿವೆ ಎಂಬುದು ತಜ್ಞರು ಅಭಿಮತ. ವಾಸ್ತವದಲ್ಲಿ, ಕಳೆದ 3 ವರ್ಷಗಳಲ್ಲಿ, 4 ದೊಡ್ಡ NBFC ಕಂಪನಿಗಳಲ್ಲಿ ಅನೇಕ ಅಕ್ರಮಗಳು ಮುನ್ನೆಲೆಗೆ ಬಂದಿವೆ. ಈ ನಿಯಮ ಜಾರಿಯಾದ ನಂತರ ಈ ವಲಯದಲ್ಲಿ ಸುಧಾರಣೆಯಾಗುವ ನಿರೀಕ್ಷೆ ಇದೆ. RBI ಕೂಡ ಅದೇ ನಿರೀಕ್ಷೆಯೊಂದಿಗೆ ಈ ನಿಯಮಗಳನ್ನು ಹೊರಡಿಸಿದೆ.

ಇದನ್ನೂ ಓದಿ-NPS ನಿಯಮಗಳಲ್ಲಿ ಭಾರೀ ಬದಲಾವಣೆ : ಈಗ ನಿಮಗೆ 75 ವರ್ಷಗಳವರೆಗೆ ಪಿಂಚಣಿ ಮತ್ತು ಹೆಚ್ಚಿನ ಪ್ರಯೋಜನಗಳು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News