ATM ನಿಂದ ಹಣ ವಿತ್ ಡ್ರಾ ನಿಯಮ ಬದಲಿಸಿದ RBI : ಇಲ್ಲಿದೆ ಹೊಸ ನಿಯಮಗಳು!

ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂನಿಂದ ಕಾರ್ಡ್ ಕಾರ್ಡ್ ಲೆಸ್ ವಿತ್ ಡ್ರಾ ಬ್ಯಾಂಕ್‌ಗಳು ಮತ್ತು ಎಟಿಎಂ ಆಪರೇಟರ್‌ಗಳಿಗೆ ಮಹತ್ವದ ಆದೇಶ ಒಂದನ್ನು ನೀಡಿದೆ.

Written by - Channabasava A Kashinakunti | Last Updated : May 20, 2022, 03:44 PM IST
  • ನಗದು ಹಿಂಪಡೆಯುವ ವಿಧಾನ ಸಂಪೂರ್ಣವಾಗಿ ಬದಲಿಸಿದೆ
  • NPCI ಗೆ UPI ಇಂಟಿಗ್ರೇಷನ್ ಸೂಚನೆಗಳು
  • ಯಾವುದೇ ಬದಲಾವಣೆ ಇಲ್
ATM ನಿಂದ ಹಣ ವಿತ್ ಡ್ರಾ ನಿಯಮ ಬದಲಿಸಿದ RBI : ಇಲ್ಲಿದೆ ಹೊಸ ನಿಯಮಗಳು! title=

RBI Cardless Withdrawals Rule : ಡಿಜಿಟಲ್ ವಹಿವಾಟಿನ ಯುಗದಲ್ಲಿ ಎಟಿಎಂನಿಂದ ಹಣ ತೆಗೆಯುವವರ ಸಂಖ್ಯೆ ಕಡಿಮೆಯಾಗಿದೆ. ಆದರೂ ಎಟಿಎಂ ಬಳಸುವವರ ಸಂಖ್ಯೆ ಕೂಡ ಕಡಿಮೆ ಇಲ್ಲ. ಇಂದು ನಾವು ತಂದಿರುವ ಸುದ್ದಿ ಎಟಿಎಂ ಬಳಕೆದಾರರಿಗೆ ಹೆಚ್ಚು ಉಪಯುಕ್ತವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂನಿಂದ ಕಾರ್ಡ್ ಕಾರ್ಡ್ ಲೆಸ್ ವಿತ್ ಡ್ರಾ ಬ್ಯಾಂಕ್‌ಗಳು ಮತ್ತು ಎಟಿಎಂ ಆಪರೇಟರ್‌ಗಳಿಗೆ ಮಹತ್ವದ ಆದೇಶ ಒಂದನ್ನು ನೀಡಿದೆ.

ನಗದು ಹಿಂಪಡೆಯುವ ವಿಧಾನ ಸಂಪೂರ್ಣವಾಗಿ ಬದಲಿಸಿದೆ

ರಿಸರ್ವ್ ಬ್ಯಾಂಕ್ ಈ ನಿಯಮ ಜಾರಿಯಾದ ನಂತರ ಎಟಿಎಂನಿಂದ ಹಣ ತೆಗೆಯುವ ವಿಧಾನ ಸಂಪೂರ್ಣ ಬದಲಾಗಲಿದೆ. ಇದರ ಪ್ರಯೋಜನವೆಂದರೆ ಕಾರ್ಡ್ ಕ್ಲೋನಿಂಗ್, ಕಾರ್ಡ್ ಸ್ಕಿಮ್ಮಿಂಗ್ ಮತ್ತು ಇತರ ಬ್ಯಾಂಕ್ ವಂಚನೆಗಳು ಕಡಿಮೆಯಾಗುತ್ತವೆ. ಕಾರ್ಡ್ ರಹಿತ ವಹಿವಾಟಿನಲ್ಲಿ ಹಣವನ್ನು ಹಿಂಪಡೆಯಲು ನಿಮಗೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅಗತ್ಯವಿಲ್ಲ. ಇದರಲ್ಲಿ, ಪೇಟಿಎಂ, ಗೂಗಲ್ ಪೇ, ಅಮೆಜಾನ್ ಪೇ ಅಥವಾ ಫೋನ್‌ಪೇಯಂತಹ ಯುಪಿಐ ಪಾವತಿ ಅಪ್ಲಿಕೇಶನ್‌ಗಳ ಮೂಲಕ ಮಾತ್ರ ನೀವು ಎಟಿಎಂನಿಂದ ಹಣವನ್ನು ಹಿಂಪಡೆಯುವ ಅವಕಾಶ ನೀಡಲಾಗಿದೆ.

ಇದನ್ನೂ ಓದಿ : ಈ ಯೋಜನೆಯಲ್ಲಿ ಸರ್ಕಾರ ಮಹಿಳೆಯರಿಗೆ ಉಚಿತವಾಗಿ ನೀಡುತ್ತಿದೆ ಹೊಲಿಗೆ ಯಂತ್ರ

NPCI ಗೆ UPI ಇಂಟಿಗ್ರೇಷನ್ ಸೂಚನೆಗಳು

ಆರ್‌ಬಿಐ ಆದೇಶದ ನಂತರ, ಈಗ ಎಲ್ಲಾ ಬ್ಯಾಂಕ್‌ಗಳು ಮತ್ತು ಎಟಿಎಂ ಆಪರೇಟರ್‌ಗಳು ಕಾರ್ಡ್‌ಲೆಸ್ ನಗದು ಹಿಂಪಡೆಯುವಿಕೆಗಾಗಿ ಕಾಯಬೇಕಾಗುತ್ತದೆ. ರಿಸರ್ವ್ ಬ್ಯಾಂಕ್ ಅನ್ವಯಿಸುವ ನಿಯಮಗಳ ಅಡಿಯಲ್ಲಿ, ಯಾವುದೇ ಬ್ಯಾಂಕ್ ಯಾವುದೇ ಬ್ಯಾಂಕಿನ ಖಾತೆದಾರರಿಗೆ ಈ ಸೌಲಭ್ಯವನ್ನು ನೀಡಬಹುದು. ಇದಕ್ಕಾಗಿ, NPCI ಯುಪಿಐ ಇಂಟಿಗ್ರೇಷನ್ ಗಾಗಿ ಸೂಚನೆಗಳನ್ನು ನೀಡಿದೆ.

ಯಾವುದೇ ಬದಲಾವಣೆ ಇಲ್ಲ

ಪ್ರಸ್ತುತ ಎಟಿಎಂ ಕಾರ್ಡ್‌ಗೆ ವಿಧಿಸುವ ಶುಲ್ಕದ ಬಗ್ಗೆ ಯಾವುದೆ ಬದಲಾವಣೆಗಳಿಲ್ಲ. ಇದಲ್ಲದೇ ನಗದು ರಹಿತ ವಹಿವಾಟಿನಿಂದ ಹಣ ಹಿಂಪಡೆಯುವ ಮಿತಿಯಲ್ಲಿ ಕೂಡ ಮೊದಲಿನಂತೆಯೇ ಇರುತ್ತದೆ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ

ಕಾರ್ಡ್‌ಲೆಸ್ ವಹಿವಾಟಿನ ಸೌಲಭ್ಯವು ಪ್ರಸ್ತುತ ಕೆಲವು ಬ್ಯಾಂಕ್‌ಗಳ ಎಟಿಎಂಗಳಲ್ಲಿ ಮಾತ್ರ ಲಭ್ಯವಿದೆ. ಈ ಹೊಸ ವ್ಯವಸ್ಥೆಯಲ್ಲಿ, ಗ್ರಾಹಕರು ಇನ್ನು ಮುಂದೆ ಎಟಿಎಂನಲ್ಲಿ ಡೆಬಿಟ್ ಕಾರ್ಡ್ ಬಳಸುವ ಅಗತ್ಯವಿಲ್ಲ. ಇದಕ್ಕಾಗಿ ಗ್ರಾಹಕರು ಎಟಿಎಂನಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು. ಅದರ ನಂತರ, 6-ಅಂಕಿಯ UPI ಅನ್ನು ನಮೂದಿಸಿದರೆ ನಿಮ್ಮ ಹಣವು ಮಷಿನ್ ನಿಂದ ಹೊರಬರುತ್ತದೆ.

ಇದನ್ನೂ ಓದಿ : Gold Price Today:ಬಂಗಾರ ಪ್ರಿಯರಿಗೆ ಶಾಕ್ , ಗಗನ ಮುಖಿಯಾದ ಬಂಗಾರದ ಬೆಲೆ , ಬೆಳ್ಳಿಯನ್ನಂತೂ ಮುಟ್ಟುವಂತೆಯೂ ಇಲ್ಲ

ಆರ್‌ಬಿಐ ಉದ್ದೇಶವೇನು?

ಹೆಚ್ಚುತ್ತಿರುವ ವಂಚನೆಯ ಘಟನೆಗಳನ್ನು ಕಡಿಮೆ ಮಾಡುವುದು ನಗದು ರಹಿತ ನಗದು ಹಿಂಪಡೆಯುವ ವ್ಯವಸ್ಥೆಯನ್ನು ಜಾರಿಗೆ ತರುವುದರ ಹಿಂದೆ RBI ಉದ್ದೇಶವಾಗಿದೆ. ಇದು ಕಾರ್ಡ್ ಕ್ಲೋನಿಂಗ್, ಕಾರ್ಡ್ ಸ್ಕಿಮ್ಮಿಂಗ್ ಮತ್ತು ಇತರ ಬ್ಯಾಂಕ್ ವಂಚನೆಗಳನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ, ಹಣವನ್ನು ಹಿಂಪಡೆಯಲು ನಿಮಗೆ ಕಾರ್ಡ್ ಅಗತ್ಯವಿಲ್ಲ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News