PPF Latest Update: ನೀವು PPF ನಲ್ಲಿ ಹೂಡಿಕೆ ಮಾಡುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಈ ಬಾರಿ PPF ಖಾತೆಯಲ್ಲಿ ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು, ನೀವು ಈ ನಿಯಮಗಳನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ. ಸಣ್ಣ ಉಳಿತಾಯ ಯೋಜನೆಗಳ ನಿಯಮಗಳನ್ನು ಸರ್ಕಾರವು ಕಾಲಕಾಲಕ್ಕೆ ಬದಲಾಯಿಸುತ್ತಿರುತ್ತದೆ. ಹೀಗಿರುವಾಗ, ಈ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯವಾದ ಸಂಗತಿಯಾಗಿದೆ.
ಕೆಲವೊಮ್ಮೆ ದೊಡ್ಡ ಬದಲಾವಣೆಗಳಾಗಿರುತ್ತವೆ
ನಿಯಮಿತವಾಗಿ ಕೇಂದ್ರ ಸರ್ಕಾರದ ವತಿಯಿಂದ ನಡೆಸಲಾಗುವ ಈ ಬದಲಾವಣೆಗಳು ಕೆಲವೊಮ್ಮೆ ಚಿಕ್ಕದಾಗಿರುತ್ತವೆ ಮತ್ತು ಕೆಲವೊಮ್ಮೆ ದೊಡ್ಡದಾಗಿರುತ್ತವೆ. ಕಳೆದ ದಿನಗಳಲ್ಲಿ, ಸುಕನ್ಯಾ ಸಮೃದ್ಧಿ ಯೋಜನೆ (SSY) ಯಲ್ಲಿನ ಬದಲಾವಣೆಗಳ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ನೀಡಿದ್ದೇವೆ. ಅದರಂತೆಯೇ ಇದೀಗ ಸರ್ಕಾರವು ಪಿಪಿಎಫ್‌ನ ಕೆಲವು ನಿಯಮಗಳನ್ನು ಸಹ ಬದಲಾಯಿಸಿದೆ. PPF ಗೆ ಸಂಬಂಧಿಸಿದ 5 ಮಹತ್ವದ ಬದಲಾವಣೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪದೆದ್ದುಕೊಳ್ಳೋಣ.
PPF ಮೇಲೆ ಸಾಲ ಪಡೆಯುವ ನಿಯಮ
ಒಂದು ವೇಳೆ ನೀವು ನಿಮ್ಮ PPF ಖಾತೆಯ ಮೇಲೆ ಸಾಲವನ್ನು ತೆಗೆದುಕೊಳ್ಳಲು ಬಯಸುತ್ತಿದ್ದರೆ, ಅರ್ಜಿಯ ದಿನಾಂಕದ ಎರಡು ವರ್ಷಗಳ ಮೊದಲು, ನೀವು ನಿಮ್ಮ ಖಾತೆಯಲ್ಲಿರುವ ಒಟ್ಟು PPF ಬ್ಯಾಲೆನ್ಸ್‌ನ ಶೇ. 25 ರಷ್ಟು ಮಾತ್ರ ಸಾಲವನ್ನು ಪಡೆದುಕೊಳ್ಳಬಹುದು. ಅಂದರೆ, ನೀವು 31ನೇ ಮಾರ್ಚ್ 2022 ರಂದು ಲೋನ್‌ಗಾಗಿ ಅರ್ಜಿ ಸಲ್ಲಿಸಿದ್ದೀರಿ ಎಂದಿಟ್ಟುಕೊಳ್ಳಿ. ಇದಕ್ಕೂ ಎರಡು ವರ್ಷಗಳ ಹಿಂದೆ (ಮಾರ್ಚ್ 31, 2020), ಪಿಪಿಎಫ್ ಖಾತೆಯಲ್ಲಿ 1 ಲಕ್ಷ ರೂಪಾಯಿ ಇದ್ದರೆ, ನೀವು ಅದರಲ್ಲಿ ಶೇ.25 ರಷ್ಟನ್ನು ಅಂದರೆ 25 ಸಾವಿರ ಸಾಲವನ್ನು ಪಡೆಯಬಹುದು.
ಬಡ್ಡಿದರ ಇಳಿಕೆ
ಒಂದು ವೇಳೆ ನೀವೂ ಕೂಡ ನಿಮ್ಮ ಪಿಪಿಎಫ್ ಖಾತೆಯಲ್ಲಿನ ಬ್ಯಾಲೆನ್ಸ್ ಆಧಾರದ ಮೇಲೆ ಸಾಲ ತೆಗೆದುಕೊಂಡರೆ, ಬಡ್ಡಿ ದರವನ್ನು ಶೇ. 2 ರಿಂದ ಶೇ. 1 ಕ್ಕೆ ಇಳಿಕೆ ಮಾಡಲಾಗಿದೆ ಎಂಬುದು ನಿಮಗೆ ಗೊತ್ತಿರಲಿ. ಸಾಲದ ಅಸಲು ಮೊತ್ತವನ್ನು ಪಾವತಿಸಿದ ನಂತರ, ನೀವು ಎರಡು ಕಂತುಗಳಲ್ಲಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಪ್ರತಿ ತಿಂಗಳ 1ನೇ ತಾರೀಖಿನಿಂದ ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತದೆ.
ಪಿಪಿಎಫ್ ಖಾತೆಯನ್ನು ನೀವು 15 ವರ್ಷಗಳ ನಂತರವೂ ಮುಂದುವರೆಸಬಹುದು
15 ವರ್ಷಗಳ ನಂತರ ಒಂದು ವೇಳೆ ನೀವು ನಿಮ್ಮ ಖಾತೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಿಲ್ಲ ಎಂದಾದರೂ ಕೂಡ, ಸಮಯದ ಮಿತಿಯ ನಂತರ ನೀವು ಹೂಡಿಕೆಯಿಲ್ಲದೆ ನಿಮ್ಮ PPF ಖಾತೆಯನ್ನು ಮುಂದುವರಿಸಬಹುದು. 15 ವರ್ಷಗಳ ನಂತರ ಹಣವನ್ನು ಠೇವಣಿ ಮಾಡಲು ನಿಮ್ಮ ಮೇಲೆ ಯಾವುದೇ ಬಾಧ್ಯತೆ ಇಲ್ಲ. ಮೆಚ್ಯೂರಿಟಿಯ ನಂತರ, ನೀವು PPF ಖಾತೆಯನ್ನು ವಿಸ್ತರಿಸಲು ಆರಿಸಿಕೊಂಡರೆ, ನೀವು ಆರ್ಥಿಕ ವರ್ಷದಲ್ಲಿ ಒಮ್ಮೆ ಮಾತ್ರ ಹಣವನ್ನು ಹಿಂಪಡೆಯಬಹುದು.
ಇದನ್ನೂ ಓದಿ-Bullet Train : ಮುಂಬೈ-ಅಹಮದಾಬಾದ್ ನಡುವೆ ಬುಲೆಟ್ ಟ್ರೈನ್ : ಟಿಕೆಟ್ ದರ ತಿಳಿಸಿದ ಸರ್ಕಾರ!
ಖಾತೆಯನ್ನು ತೆರೆಯಲು ಈ ಫಾರ್ಮ್ ಅನ್ನು ಭರ್ತಿ ಮಾಡಿ
PPF ಖಾತೆಯನ್ನು ತೆರೆಯಲು, ಇದೀಗ ಫಾರ್ಮ್-ಎ ಬದಲಿಗೆ ಫಾರ್ಮ್-1 (ಫಾರ್ಮ್-1) ಅನ್ನು ಸಲ್ಲಿಸಬೇಕು. 15 ವರ್ಷಗಳ ನಂತರ (ಠೇವಣಿಗಳೊಂದಿಗೆ) PPF ಖಾತೆಯನ್ನು ವಿಸ್ತರಿಸಲು ಒಂದು ವರ್ಷದ ಮೊದಲು, ಫಾರ್ಮ್ H ಬದಲಿಗೆ ಫಾರ್ಮ್-4 ರಲ್ಲಿ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ-SBI Vs Post Office RD: ಪೋಸ್ಟ್ ಆಫೀಸ್/ಎಸ್‌ಬಿಐ ಎಲ್ಲಿ ಆರ್‌ಡಿ ಮಾಡುವುದರಿಂದ ಹೆಚ್ಚು ಪ್ರಯೋಜನ
ತಿಂಗಳಿಗೊಮ್ಮೆ ಮೊತ್ತವನ್ನು ಠೇವಣಿ ಮಾಡಬಹುದು
ಪಿಪಿಎಫ್ ಖಾತೆಯಲ್ಲಿ ನೀವು ಮಾಡುವ ಹೂಡಿಕೆಯು ರೂ.50ರ ಗುನಕದಲ್ಲಿರ್ವಬೇಕು. ಈ ಮೊತ್ತವು ವಾರ್ಷಿಕವಾಗಿ ಕನಿಷ್ಠ 500 ರೂ ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು. ಆದರೆ PPF ಖಾತೆಯಲ್ಲಿ, ನೀವು ಇಡೀ ವರ್ಷದಲ್ಲಿ ಗರಿಷ್ಠ 1.5 ಲಕ್ಷ ರೂಪಾಯಿಗಳವರೆಗೆ ಠೇವಣಿ ಮಾಡಬಹುದು. ಈ ಹೂಡಿಕೆಯ ಮೇಲೆ ಮಾತ್ರ ನೀವು ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯುತ್ತೀರಿ. ಇದಲ್ಲದೆ, ನೀವು ತಿಂಗಳಿಗೊಮ್ಮೆ ಮಾತ್ರ ಪಿಪಿಎಫ್ ಖಾತೆಯಲ್ಲಿ ಹಣವನ್ನು ಜಮಾ ಮಾಡಬಹುದು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.