Post Office Rule: ಏಪ್ರಿಲ್ 01ರಿಂದ ಬದಲಾಗಲಿದೆ ಅಂಚೆ ಕಚೇರಿಯ ಈ ಯೋಜನೆಗಳ ನಿಯಮ

Post Office Scheme Rules Change: ಹೊಸ ಆರ್ಥಿಕ ವರ್ಷ ಎಂದರೆ 01 ಏಪ್ರಿಲ್ 2023ರಿಂದ ಅಂಚೆ ಕಚೇರಿಯ ಕೆಲವು ಯೋಜನೆಗಳ ನಿಯಮಗಳಲ್ಲಿ ಬದಲಾವಣೆ ಆಗಲಿದೆ. ನೀವೂ ಸಹ ಅಂಚೆ ಕಚೇರಿಯ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸಿದರೆ ತಪ್ಪದೇ ಈ ಸುದ್ದಿಯನ್ನು ಓದಿ... 

Written by - Yashaswini V | Last Updated : Mar 29, 2023, 12:21 PM IST
  • ವಾಸ್ತವವಾಗಿ, 2023ರ ಕೇಂದ್ರ ಬಜೆಟ್‌ನಲ್ಲಿ ಎರಡು ಜನಪ್ರಿಯ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.
  • ನೀವು ಈಗಾಗಲೇ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದರೆ ಅಥವಾ ಹೂಡಿಕೆ ಮಾಡಲು ಯೋಜಿಸುತ್ತಿದ್ಧೀರಾ...
  • ಹಾಗಿದ್ದರೆ, ಅಂಚೆ ಕಚೇರಿಯ ಯಾವ ಯೋಜನೆಗಳಲ್ಲಿ ಯಾವೆಲ್ಲಾ ಬದಲಾವಣೆಗಳು ಆಗಲಿವೆ ಎಂಬುದನ್ನೂ ತಪ್ಪದೇ ತಿಳಿಯಿರಿ
Post Office Rule: ಏಪ್ರಿಲ್ 01ರಿಂದ ಬದಲಾಗಲಿದೆ ಅಂಚೆ ಕಚೇರಿಯ ಈ ಯೋಜನೆಗಳ ನಿಯಮ title=
Post Office Scheme Rules Change

Post Office Scheme Rules Change: ನೀವು ವಿಶ್ವಾಶಾರ್ಹ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸಿದರೆ ಅಂಚೆ ಕಚೇರಿಯ ಯೋಜನೆಗಳನ್ನು ಆಯ್ಕೆ ಮಾಡಬಹುದು. ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ, ನಿಮ್ಮ ಹಣ ದ್ವಿಗುಣಗೊಳ್ಳುವುದರ ಜೊತೆಗೆ ನಿಶ್ಚಿತ ಆದಾಯವನ್ನೂ ಪಡೆಯಬಹುದು. ಅದಕ್ಕೂ ಮೊದಲು ಹೊಸ ಆರ್ಥಿಕ ವರ್ಷ 01 ಏಪ್ರಿಲ್ 2023ರಿಂದ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಯಾವೆಲ್ಲಾ ಬದಲಾವಣೆಗಳು ಆಗಲಿವೆ ಎಂಬುದನ್ನೂ ಸಹ ತಪ್ಪದೇ ತಿಳಿದಿರುವುದು ಮುಖ್ಯವಾಗಿದೆ. 

ನೀವು ಈಗಾಗಲೇ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದರೆ ಅಥವಾ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಅಂಚೆ ಕಚೇರಿಯ ಯಾವ ಯೋಜನೆಗಳಲ್ಲಿ ಯಾವೆಲ್ಲಾ ಬದಲಾವಣೆಗಳು ಆಗಲಿವೆ ಎಂಬುದನ್ನೂ ತಪ್ಪದೇ ತಿಳಿಯಲು ಮುಂದೆ ಓದಿ... 

ವಾಸ್ತವವಾಗಿ, 2023ರ ಕೇಂದ್ರ ಬಜೆಟ್‌ನಲ್ಲಿ ಎರಡು ಜನಪ್ರಿಯ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಅದುವೇ ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಮತ್ತು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS). 

ಇದನ್ನೂ ಓದಿ- PAN-Aadhaar Link: ನಿಮ್ಮ ಪ್ಯಾನ್ ಕಾರ್ಡ್ ಆಧಾರ್ ಜೊತೆ ಲಿಂಕ್ ಆಗಿದೆಯೇ? ಈ ರೀತಿ ಚೆಕ್ ಮಾಡಿ

ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS)ಯಲ್ಲಿ ಏನೆಲ್ಲಾ ಬದಲಾಗಲಿದೆ? 
ಹಿರಿಯ ನಾಗರಿಕರಿಗೆ ಅವರ ನಿವೃತ್ತಿಯ ನಂತರದ ವರ್ಷಗಳಲ್ಲಿ ವಿಶ್ವಾಸಾರ್ಹ ಮತ್ತು ಸುರಕ್ಷಿತ ಆದಾಯದ ಮೂಲವನ್ನು ಒದಗಿಸುವ ಉದ್ದೇಶದಿಂದ ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಅನ್ನು 2004 ರಲ್ಲಿ ಸ್ಥಾಪಿಸಲಾಯಿತು. ಇದೀಗ ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಹೂಡಿಕೆ ಮಿತಿಯನ್ನು 15 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸಲಾಗಿದೆ.  ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ SCSS ನಲ್ಲಿ ನೀಡಲಾಗುವ ಬಡ್ಡಿ ದರವು 8% ಆಗಿದೆ. ಆದರೆ, ಗಮನಿಸಬೇಕಾದ ಅಂಶವೆಂದರೆ ಈ ಉಳಿತಾಯ ಯೋಜನೆಯು ಹಿರಿಯ ನಾಗರಿಕರಿಗೆ ತೆರಿಗೆ ಮುಕ್ತವಾಗಿಲ್ಲ. 

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ(POMIS): 
ಯೂನಿಯನ್ ಬಜೆಟ್ 2023 ರ ಪ್ರಕಾರ, ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS) ಗಾಗಿ ಒಂದೇ ಖಾತೆದಾರರ ಮಿತಿಯನ್ನು 4.5 ಲಕ್ಷದಿಂದ 9 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಜಂಟಿ ಖಾತೆದಾರರ ಹೂಡಿಕೆ ಮಿತಿಯನ್ನು 9 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಿಸಲಾಗಿದೆ. 

ಇದನ್ನೂ ಓದಿ- ಪಿಪಿಎಫ್ ಮತ್ತು ಸುಕನ್ಯ ಸಮೃದ್ದಿ ಯೋಜನೆಯಲ್ಲಿ ಬದಲಾವಣೆ ! ಏಪ್ರಿಲ್ ನಿಂದ ಹೊಸ ನಿಯಮ ಜಾರಿ

ಮಾಸಿಕ ಆದಾಯ ಯೋಜನೆಯ ಹೂಡಿಕೆದಾರರಿಗೆ ಪ್ರತಿ ತಿಂಗಳು ಬಡ್ಡಿಯನ್ನು ಪಾವತಿಸಲಾಗುವುದು. ಈ ಯೋಜನೆಗೆ ಸರ್ಕಾರವು ನಿಯಮಿತವಾಗಿ ಬಡ್ಡಿದರವನ್ನು ನಿಗದಿಪಡಿಸುತ್ತದೆ. ಪ್ರಸ್ತುತ, ಜನವರಿಯಿಂದ ಮಾರ್ಚ್ 2023ರ ಅವಧಿಯ ಬಡ್ಡಿ ದರವು 7.1% ಆಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News