Post Office ಈ ಯೋಜನೆಗಳಲ್ಲಿ ಪಿಎಂ ಮೋದಿ ಕೂಡ ಹೂಡಿಕೆ ಮಾಡಿದ್ದಾರೆ, ತಕ್ಷಣವೇ ನೀವು ಲಾಭ ಪಡೆಯಿರಿ

ಅಂಕಿಅಂಶಗಳ ಪ್ರಕಾರ, ಜೂನ್ 2020 ರಲ್ಲಿ, ಅವರು ಎನ್ಎಸ್ಸಿಯಲ್ಲಿ 8 ಲಕ್ಷದ 43 ಸಾವಿರದ 124 ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ. ಜೀವ ವಿಮೆಗಾಗಿ 1 ಲಕ್ಷದ 50 ಸಾವಿರದ 957 ಪ್ರೀಮಿಯಂ ಕಟ್ಟಿದ್ದರು. ಈ ಯೋಜನೆಯ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

Written by - Channabasava A Kashinakunti | Last Updated : Nov 14, 2021, 11:57 AM IST
  • ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಸುರಕ್ಷಿತವೇ?
  • ನಿಯಮಿತ ಹೂಡಿಕೆಯ ಮೇಲೆ ನಿಮಗೆ ಉತ್ತಮ ಆದಾಯದ ಭರವಸೆ ಇದೆ
  • ಪ್ರಧಾನಿ ಮೋದಿಯವರ ಹೂಡಿಕೆ ಮಾಡಿದ್ದ ಈ ಯೋಜನೆಯ ಬಗ್ಗೆ ತಿಳಿಯಿರಿ
Post Office ಈ ಯೋಜನೆಗಳಲ್ಲಿ ಪಿಎಂ ಮೋದಿ ಕೂಡ ಹೂಡಿಕೆ ಮಾಡಿದ್ದಾರೆ, ತಕ್ಷಣವೇ ನೀವು ಲಾಭ ಪಡೆಯಿರಿ title=

ನವದೆಹಲಿ : ನೀವು ಸಹ ಸಣ್ಣ ಉಳಿತಿಯ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಲಾಭ ಗಳಿಸಲು ಬಯಸಿದರೆ, ನಿಮಗೆ ಪೋಸ್ಟ್ ಆಫೀಸ್ ಉತ್ತಮ ಆಯ್ಕೆಯಾಗಿದೆ. ಪ್ರಧಾನ ಮಂತ್ರಿಗಳು ಅಂಚೆ ಕಚೇರಿ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ ಎಂದರೆ ನಂಬುತ್ತೀರಾ?. ಹೌದು, ಪ್ರಧಾನಿ ನರೇಂದ್ರ ಮೋದಿ ಅವರು ಜೀವ ವಿಮೆ ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ ದೊಡ್ಡ ಹೂಡಿಕೆ ಮಾಡಿದ್ದಾರೆ. ಅಂಕಿಅಂಶಗಳ ಪ್ರಕಾರ, ಜೂನ್ 2020 ರಲ್ಲಿ, ಅವರು ಎನ್ಎಸ್ಸಿಯಲ್ಲಿ 8 ಲಕ್ಷದ 43 ಸಾವಿರದ 124 ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ. ಜೀವ ವಿಮೆಗಾಗಿ 1 ಲಕ್ಷದ 50 ಸಾವಿರದ 957 ಪ್ರೀಮಿಯಂ ಕಟ್ಟಿದ್ದರು. ಈ ಯೋಜನೆಯ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ

ನೀವು ಶೂನ್ಯ ಅಪಾಯದಲ್ಲಿ ಹೂಡಿಕೆ ಮಾಡಲು ಬಯಸಿದರೆ ನೀವು ಪೋಸ್ಟ್ ಆಫೀಸ್‌(Post Office)ನಲ್ಲಿ ಹೂಡಿಕೆ ಮಾಡಬೇಕು. ನೀವು ಸುರಕ್ಷಿತ ಮತ್ತು ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ, ನೀವು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ ಹೂಡಿಕೆ ಮಾಡಬಹುದು. ಇದು ಸುರಕ್ಷಿತ ಹೂಡಿಕೆಯಾಗಿದೆ ಏಕೆಂದರೆ ಇದು ಅಂಚೆ ಕಛೇರಿಯ ಸಣ್ಣ ಉಳಿತಾಯ ಯೋಜನೆಯ ಭಾಗವಾಗಿದೆ ಮತ್ತು ದೇಶದ ಪ್ರಧಾನ ಮಂತ್ರಿಯೇ ಅದರಲ್ಲಿ ಹೂಡಿಕೆ ಮಾಡುತ್ತಾರೆ.

ಇದನ್ನೂ ಓದಿ : IRCTC ರೈಲ್ವೆ ಟಿಕೆಟ್‌ ಬುಕಿಂಗ್ ಹೊಸ ನಿಯಮಗಳು ಜಾರಿ : ಇಲ್ಲದಿದ್ದರೆ ನಿಮಗೆ ಸಿಗುವುದಿಲ್ಲ ಸೀಟು 

ಹೂಡಿಕೆ ಮಾಡುವುದು ಹೇಗೆ?

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ(National Savings Certificate)ವು ಐದು ವರ್ಷಗಳ ಕನಿಷ್ಠ ಲಾಕ್-ಇನ್ ಅವಧಿಯನ್ನು ಹೊಂದಿದೆ. ಅಂದರೆ ಐದು ವರ್ಷಗಳ ಹೂಡಿಕೆಯ ನಂತರವೇ ನೀವು ಅದನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ಎನ್‌ಎಸ್‌ಸಿಯಲ್ಲಿ ಹೂಡಿಕೆ ಮಾಡಲು ಮೂರು ಮಾರ್ಗಗಳಿವೆ.

ಸಿಂಗಲ್ ಟೈಮ್ - ಈ ಪ್ರಕಾರದಲ್ಲಿ ನೀವು ನಿಮಗಾಗಿ ಅಥವಾ ಅಪ್ರಾಪ್ತ ವಯಸ್ಕರಿಗಾಗಿ ಹೂಡಿಕೆ ಮಾಡಬಹುದು.

ಜಾಯಿಂಟ್ ಎ ಟೈಪ್- ಈ ರೀತಿಯ ಪ್ರಮಾಣಪತ್ರವನ್ನು ಯಾವುದೇ ಇಬ್ಬರು ಒಟ್ಟಿಗೆ ತೆಗೆದುಕೊಳ್ಳಬಹುದು ಅಂದರೆ ಇಬ್ಬರು ಒಟ್ಟಿಗೆ ಹೂಡಿಕೆ(Investment) ಮಾಡಬಹುದು
ಜಾಯಿಂಟ್ ಬಿ ಟೈಪ್- ಇದರಲ್ಲಿ ಇಬ್ಬರು ಹೂಡಿಕೆ ಮಾಡುತ್ತಾರೆ, ಆದರೆ ಮೆಚ್ಯೂರಿಟಿ ಆದ ಮೇಲೆ ಒಬ್ಬ ಹೂಡಿಕೆದಾರರಿಗೆ ಮಾತ್ರ ಹಣ ನೀಡಲಾಗುತ್ತದೆ.

ನೀವು ಎಷ್ಟು ಹೂಡಿಕೆ ಮಾಡಬಹುದು?

ಈ ಪೋಸ್ಟ್ ಆಫೀಸ್ ಯೋಜನೆ(Post Office Scheme)ಯು ಪ್ರಸ್ತುತ 6.8% ಬಡ್ಡಿದರವನ್ನು ಹೊಂದಿದೆ. ಈ ಯೋಜನೆಯಲ್ಲಿ ನೀವು ಕನಿಷ್ಟ 1,000 ರೂಪಾಯಿಗಳನ್ನು ಹೂಡಿಕೆ ಮಾಡಬಹುದು ಮತ್ತು 100 ರ ಗುಣಕಗಳಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಆದರೆ, ಇದರಲ್ಲಿ ಹೂಡಿಕೆಗೆ ಗರಿಷ್ಠ ಮಿತಿ ಇಲ್ಲ.

ಇದನ್ನೂ ಓದಿ : ಬ್ಯಾಟರಿ ಇಲ್ಲದ ಈ ಎಲೆಕ್ಟ್ರಿಕ್ ಸ್ಕೂಟರ್ 40% ಅಗ್ಗವಾಗಲಿದೆ, ಮುಂದಿನ ತಿಂಗಳು ‘Bounce’ ಭಾರತಕ್ಕೆ ಬರಲಿದೆ!

ಆದಾಯ ತೆರಿಗೆ ವಿನಾಯಿತಿ

ನೀವು ಎನ್‌ಎಸ್‌ಸಿಯಲ್ಲಿ ಹೂಡಿಕೆ ಮಾಡಿದರೆ, ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ(Section 80C of Income Tax) ಪ್ರತಿ ವರ್ಷ ರೂ 1.5 ಲಕ್ಷದವರೆಗೆ ಹೂಡಿಕೆ ಮಾಡುವ ಮೂಲಕ ನೀವು ತೆರಿಗೆ ವಿನಾಯಿತಿಯನ್ನು ಪಡೆಯುತ್ತೀರಿ. ತೆರಿಗೆ ವಿಧಿಸಬಹುದಾದ ಆದಾಯದ ಸಂದರ್ಭದಲ್ಲಿ, ಮೊತ್ತವನ್ನು ಒಟ್ಟು ಆದಾಯದಿಂದ ಕಡಿತಗೊಳಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News