Post Office ನಿಯಮಗಳಲ್ಲಿ ಬದಲಾವಣೆ, ಇನ್ಮುಂದೆ ಕೇವಲ ಪಾಸ್ಬುಕ್ ನಿಂದ ನೀವು ಈ ಕೆಲಸ ಮಾಡಲು ಸಾಧ್ಯವಿಲ್ಲ

Post Office New Rule: ಅಂಚೆ ಕಚೇರಿ (Post Office) ಗ್ರಾಹಕರಿಗೊಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ಪೋಸ್ಟ್ ಆಫೀಸ್ ತನ್ನ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಈ ಬದಲಾವಣೆಯಿಂದ ಇನ್ಮುಂದೆ ನಿಮಗೆ ಬಹುತೇಕ ಕೆಲಸಗಳಿಗೆ ನಿಮ್ಮ ಖಾತೆಯ ಪಾಸ್ಬುಕ್ ಅಗತ್ಯ ಬೀಳಲಿದೆ.

Written by - Nitin Tabib | Last Updated : Jan 23, 2022, 04:47 PM IST
  • ಪೋಸ್ಟ್ ಆಫೀಸ್ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ.
  • ಖಾತೆ ಮುಚ್ಚಲು ಪಾಸ್ಬುಕ್ ಕಡ್ಡಾಯ
  • ಇನ್ಮುಂದೆ ಅಂಚೆ ಕಚೇರಿ ನಿಮ್ಮ ಖಾತೆ ಕ್ಲೋಸ್ ಕುರಿತು ವರದಿ ನೀಡಲಿದೆ.
Post Office ನಿಯಮಗಳಲ್ಲಿ ಬದಲಾವಣೆ, ಇನ್ಮುಂದೆ ಕೇವಲ ಪಾಸ್ಬುಕ್ ನಿಂದ ನೀವು ಈ ಕೆಲಸ ಮಾಡಲು ಸಾಧ್ಯವಿಲ್ಲ title=
Post Office New Rule (File Photo)

Post Office New Rule: ಅಂಚೆ ಇಲಾಖೆಯಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ಅಂಚೆ ಇಲಾಖೆ ತನ್ನ ನಿಯಮಗಳಲ್ಲಿ ಪ್ರಮುಖ ಬದಲಾವಣೆ ಮಾಡಿದೆ. ಈಗ ನಿಮಗೆ ಹೆಚ್ಚಿನ ಸೇವೆಗಳಿಗೆ ಪಾಸ್‌ಬುಕ್ (Post Office Passbook) ಅಗತ್ಯವಿದೆ. ನೀವು ಆರ್‌ಡಿ (Post Office Recurring Deposit), ಎಂಐಎಸ್, ಹಿರಿಯ ನಾಗರಿಕ ಉಳಿತಾಯ ಯೋಜನೆ, ಕಿಸಾನ್ ವಿಕಾಸ್ ಪತ್ರ (KVP) ಅಥವಾ ರಾಷ್ಟ್ರೀಯ ಉಳಿತಾಯ ಯೋಜನೆ ಹೊರತುಪಡಿಸಿ ಯಾವುದೇ ಖಾತೆಯನ್ನು ಮುಚ್ಚಲು ಬಯಸಿದರೆ, ಅದಕ್ಕಾಗಿ ಮೊದಲು ನೀವು ಪಾಸ್‌ಬುಕ್ ಅನ್ನು ಸಲ್ಲಿಸಬೇಕಾಗಲಿದೆ

ಖಾತೆಯನ್ನು ಮುಚ್ಚಲು ಪಾಸ್‌ಬುಕ್ ಅಗತ್ಯವಿದೆ
ನಿಮ್ಮ ಹೂಡಿಕೆಯ ಮುಕ್ತಾಯವು ಪೂರ್ಣಗೊಂಡಿದೆ ಮತ್ತು ಆ ಹಣವನ್ನು ಹಿಂತೆಗೆದುಕೊಳ್ಳುವ ಮೂಲಕ ನೀವು ಖಾತೆಯನ್ನು ಮುಚ್ಚಲು ಬಯಸುತ್ತಿದ್ದರೆ, ನೀವು ನಿಮ್ಮ ಖಾತೆಗೆ ಸಂಬಂಧಿಸಿದ ಪಾಸ್‌ಬುಕ್ ಅನ್ನು ಪೋಸ್ಟ್ ಆಫೀಸ್‌ಗೆ ಸಲ್ಲಿಸಬೇಕಾಗುತ್ತದೆ. ಅಂಚೆ ಇಲಾಖೆ ಇತ್ತೀಚೆಗೆ ಸುತ್ತೋಲೆ ಹೊರಡಿಸಿ ಹೊಸ ನಿಯಮದ ಬಗ್ಗೆ ಮಾಹಿತಿ ನೀಡಿದೆ. ನಿಮ್ಮ ಖಾತೆಯನ್ನು ಮುಚ್ಚುವಾಗ ಉದ್ಯೋಗಿಗಳು ನಿಮ್ಮಿಂದ ಪಾಸ್‌ಬುಕ್ ಅನ್ನು ಪಡೆಯಲಿದ್ದಾರೆ ಎಂಬ ಕಾರಣಕ್ಕೆ ಈ ನಿಯಮವನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ-ನಿಮ್ಮ ಖಾತೆಗೂ LPG ಸಬ್ಸಿಡಿ ಬರುತ್ತಿಲ್ಲವೇ? ಇಂದೇ ಈ ಕೆಲಸ ಮಾಡಿ, ತಕ್ಷಣ ಹಣ ಬರುತ್ತದೆ

ಮಾಹಿತಿ ನೀಡಿದ ಅಂಚೆ ಇಲಾಖೆ
ಈ ಕುರಿತು ಹೇಳಿಕೆ ಹೊರಡಿಸಿರುವ ಅಂಚೆ ಕಚೇರಿ, 'ಸಮಯ ಠೇವಣಿ ಖಾತೆಯನ್ನು ಮುಚ್ಚುವ ಅಥವಾ ಅವಧಿಗೆ ಮುಂಚಿತವಾಗಿ ಮುಚ್ಚುವ ಸಮಯದಲ್ಲಿ, ಗ್ರಾಹಕರು ತಮ್ಮ ಪಾಸ್‌ಬುಕ್ ಅನ್ನು ಸಲ್ಲಿಸಬೇಕು. ಈ ಹೊಸ ನಿಯಮವು RD, TD, MIS, SCSS, KVP ಮತ್ತು NSC ಗಳಿಗೆ (Post Office Saving Schemes) ಅನ್ವಯಿಸುತ್ತದೆ. ಎಲ್ಲಾ ರೀತಿಯ ಅಂಚೆ ಕಚೇರಿಗಳಲ್ಲಿ, ಶಾಖಾ ಕಚೇರಿಗಳಲ್ಲಿ ಖಾತೆಯನ್ನು ಮುಚ್ಚಿದಾಗ ಪಾಸ್‌ಬುಕ್ ಅನ್ನು ಸಲ್ಲಿಸಬೇಕಾಗುತ್ತದೆ. ಪಾಸ್‌ಬುಕ್‌ನಲ್ಲಿ ಕೊನೆಯ ವಹಿವಾಟನ್ನು ನಮೂದಿಸಿದ ನಂತರ, ಅದರಲ್ಲಿ ಮುಚ್ಚುವ ನಮೂದನ್ನು ಮಾಡಲಾಗುವುದು ಮತ್ತು ಪೋಸ್ಟ್ ಆಫೀಸ್ ಉದ್ಯೋಗಿ ಅದರ ಮೇಲೆ ದಿನಾಂಕ ಹಾಗೂ ಮುದ್ರೆಯನ್ನು ಒತ್ತುತ್ತಾರೆ. 

ಇದನ್ನೂ ಓದಿ-Pension Scheme : ಹಿರಿಯ ನಾಗರಿಕರಿಗೆ ಪಿಂಚಣಿ ಯೋಜನೆ ಪ್ರಾರಂಭ : ನಿಮಗೆ ಸಿಗಲಿದೆ ₹1.1 ಲಕ್ಷ ಪಿಂಚಣಿ!

ಅಂಚೆ ಕಚೇರಿಯು ಖಾತೆಯನ್ನು ಮುಚ್ಚುವ ವರದಿ ನೀಡಲಿದೆ
ಇದರೊಂದಿಗೆ, ನಿಮ್ಮ ಖಾತೆಯನ್ನು ಮುಚ್ಚಿದರೆ, ಅಂಚೆ ಕಚೇರಿಯಿಂದ ಖಾತೆದಾರರಿಗೆ ಸ್ವೀಕೃತಿಯಾಗಿ ವರದಿಯನ್ನು ನೀಡಲಾಗುತ್ತದೆ. ಈ ಸ್ವೀಕೃತಿಯು ನಿಮ್ಮ ಖಾತೆಯನ್ನು ಶಾಶ್ವತವಾಗಿ ಮುಚ್ಚಲಾಗಿದೆ ಎಂಬುದರ ಪ್ರಮಾನವಾಗಿದೆ. ಖಾತೆದಾರರು ಈ ಸ್ವೀಕೃತಿ ಪತ್ರವನ್ನು ಎನ್‌ಒಸಿಯಾಗಿ ಇಟ್ಟುಕೊಳ್ಳಬಹುದು. ನಂತರ ಖಾತೆದಾರರು ಅಕೌಂಟ್ ಸ್ಟೇಟ್ಮೆಂಟ್ ಕೇಳಿದರೆ, ಅವರಿಗೆ ಪಾಸ್‌ಬುಕ್ ತರಹದ ಕಾಗದವನ್ನು ನೀಡಲಾಗುತ್ತದೆ, ಇದಕ್ಕಾಗಿ ಗ್ರಾಹಕರು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಇದನ್ನೂ ಓದಿ-National Family Benefit Scheme: ಈ ಸ್ಕೀಮ್ ಅಡಿ ನಿಮಗೆ ಉಚಿತವಾಗಿ ಸಿಗುತ್ತೆ 30,000 ರೂ.ಗಳ ಲಾಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News